ಬೆಂಗಳೂರು ನಗರ ಮಹದೇವಪುರ ಪೊಲೀಸ್ ಠಾಣಾ ಸರಹದ್ದಿನ ಎನ್.ಸಿ.ಪಿ.ಆರ್ ಇಂಡಸ್ಟ್ರೀಯಲ್ ಏರಿಯಾ, ದೊಡ್ಡನೆಕ್ಕುಂದಿಯಲ್ಲಿ ಇರುವ Instakart Pvt. Ltd ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಫಿರಾದುದಾರರು. ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ತಮ್ಮ ಬಳಿ ಡೆಲಿವರಿ ಬಾಯ್ ಆಗಿ ಕೆಲಸಕಿದ್ದ ಇಬ್ಬರು ವ್ಯಕ್ತಿಗಳ ಕೈಯಲ್ಲಿ ಗ್ರಾಹಕರು ಬುಕ್ ಮಾಡಿದ ಮೊಬೈಲ್‌ಗಳು ಹಾಗೂ ಇನ್ನಿತರೆ ವಸ್ತುಗಳನ್ನು ಗ್ರಾಹಕರ ವಿಳಾಸಕ್ಕೆ ಡೆಲಿವರಿ ಮಾಡುವಂತೆ ಸೂಚಿಸಿ ಕಳುಹಿಸಿ ಕೊಟ್ಟಿದ್ದು, ಆ ವ್ಯಕ್ತಿಗಳು ಗ್ರಾಹಕರಿಗೆ ಮೊಬೈಲ್‌ಗಳು ಹಾಗೂ ಇನ್ನಿತರೆ ವಸ್ತುಗಳನ್ನು ಡೆಲಿವರಿ ಮಾಡದೆ, ಅವುಗಳನ್ನು ತೆಗೆದುಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ದೂರಿನ ಮೇರೆಗೆ ದಿನಾಂಕ:18/12/2023 ರಂದು ದೂರನ್ನು ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿರುತ್ತಾರೆ. ಈ ಕುರಿತು ಕಳ್ಳತನ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ತನಿಖೆಯನ್ನು ಮುಂದುವರೆಸಿದ ಪೊಲೀಸರು, ದೂರಿನಲ್ಲಿ ತಿಳಿಸಿರುವ ಡೆಲಿವರಿ ಬಾಯ್‌ಗಳ ಸ್ವಂತ ಊರಾದ ಓಡಿಸ್ಸಾ ರಾಜ್ಯಕ್ಕೆ ಹೋಗಿ ದಿನಾಂಕ:24-06-2024 ರಂದು ಆರೋಪಿಗಳಿಂದ 18 ಮೊಬೈಲ್ ಫೋನ್‌ಗಳು, ಬೆಲೆ ಬಾಳುವ ವಾಚ್‌ಗಳು, EAR ಫೋನ್‌ಗಳು, EAR ಬಟ್ಟೆಗಳು, ಒಂದು 2 ಟಿ.ಬಿ ಹಾರ್ಡಡಿಸ್ಕ್‌ನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 10,00,000/- (ಹತ್ತು ಲಕ್ಷ ರೂಪಾಯಿ) ಆರೋಪಿಗಳಿಗೆ ಕಾನೂನು ಪ್ರಕಾರ ನೋಟಿಸ್ ಜಾರಿ ಮಾಡಿರುತ್ತದೆ.
ಕಾರ್ಯಾಚರಣೆಯನ್ನು ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ|| ಶಿವಕುಮಾರ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಶ್ರೀಮತಿ.ರೀನಾ ಸುವರ್ಣ, ಸಹಾಯಕಪೊಲೀಸ್ ಆಯುಕ್ತರು. ವೈಟ್ ಫೀಲ್ಡ್ ಉಪ ವಿಭಾಗ ರವರ ನೇತೃತ್ವದಲ್ಲಿ, ಮಹದೇವಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









