ದಿನಾಂಕ:24/07/2024 ರಂದು ಬೆಂಗಳೂರು ನಗರ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಓರ್ವ ವಿದೇಶಿ… ಡಗ್ ಪಡರ್‌ನ್ನು ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕಿಸೆಲ್‌ಗಳನ್ನು… ಮಾರಾಟ ಮಾಡುತ್ತಿದ್ದಾನೆಂದು ತಿಳಿಸಿರುತ್ತಾರೆ.
ಈ ಮಾಹಿತಿಯ ಆಧಾರದ ಮೇರೆಗೆ ಸಿಸಿಬಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ, ನಂತರ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿ, ಡಗ್ ಪೆಡ್ಡಿಂಗ್‌ನಲ್ಲಿ ತೊಡಗಿದ್ದ ಓರ್ವ ವಿದೇಶಿ ವ್ಯಕ್ತಿಯನ್ನು ವಶಕ್ಕೆ ಪಡೆದು, ಆತನ ವಶದಿಂದ 6,00,00,000/-(ಆರು ಕೋಟಿ) ಮೌಲ್ಯದ 4 ಕೆ.ಜಿ ತೂಕದ ಎಂ.ಡಿ.ಎಂ.ಎ ಸೆಲ್ ಎರಡು ಮೊಬೈಲ್ ಫೋನ್‌ಗಳು, ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು ವಿದೇಶಿ ಪ್ರಜೆಯಾಗಿದ್ದು, ಬಿಜಿನೆಸ್ ವೀಸಾದಡಿ ಭಾರತ ದೇಶಕ್ಕೆ ಬಂದು, ತಮಿಳುನಾಡಿನ ಕೊಯಮತ್ತೂರಿನಲ್ಲಿ ವಾಸವಾಗಿದ್ದುಕೊಂಡು ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದನ್ನು, ವ್ಯಾಪಾರದಲ್ಲಿ ನಷ್ಟ ಉಂಟಾದ ಕಾರಣ ಬೆಂಗಳೂರಿಗೆ ಬಂದು…ಇಲ್ಲಿ ನೆಲೆಸಿರುವ ವಿದೇಶಿ ಮೂಲದ ಆತನ ಸ್ನೇಹಿತರುಗಳಿಂದ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಕಲಿತುಕೊಂಡನು. ಮೋಜಿನ ಜೀವನ ನಡೆಸಲು ಮತ್ತು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಮುಂಬೈನಲ್ಲಿ ವಾಸವಾಗಿರುವ ಆತನ ಸ್ನೇಹಿತರುಗಳಿಂದ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟಲ್‌ನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ, ಬೆಂಗಳೂರಿಗೆ ತಂದು ಗ್ರಾಹಕರುಗಳಿಗೆ 1 ಗ್ರಾಂಗೆ ಕ 12,000/- ದಿಂದ ೯ 15,000/- ವರೆಗೂ ಅಧಿಕ ಬೆಲೆಗೆ ಮಾರಾಟ ಮಾಡುತ್ತಾ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಈತನು ಮಾದಕ ವಸ್ತುಗಳನ್ನು, ಮುಂಬೈನಿಂದ ಬೆಂಗಳೂರಿಗೆ Kelloggs, Nestle Ceregrow ಹಾಗೂ ಸೋಮಗಳ ಲೇಬಲ್ ಇರುವ ಪ್ಯಾಕಿಂಗ್ ಬಾಕ್‌ಗಳಲ್ಲಿ ಯಾರಿಗೂ ಅನುಮಾನ ಬಾರದಂತೆ ತಂದು ಕೊಡುತ್ತಿದ್ದ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ.
ಆರೋಪಿತ ವ್ಯಕ್ತಿಯು ನಿಷೇದಿತ ಮಾದಕ ವಸ್ತುವಿನ ಮಾರಾಟ ಹಾಗೂ ಸಾಗಣೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದರಿಂದ ಬಂಧಿತ ಆರೋಪಿಯ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಈ ಆರೋಪಿಯನ್ನು ಮಾನ ನ್ಯಾಯಾಲಯಕ್ಕೆ ಹಾಜರುಪಡಿಸಿದು ಮಾನ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತ
ಆರೋಪಿಯ ಸಹಚರನಾದ ಮತ್ತೊರ್ವನು ಭಾರತದಲ್ಲಿ ಅನಧಿಕೃತವಾಗಿ ವಾಸವಾಗಿದ್ದು, ಆತನನ್ನು ಡಿಟೆಂಕನ್ ಸೆಂಟರ್‌ಗೆ ಕಳುಹಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ, ಮಾದಕ ದವ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರುಗಳ ತಂಡವು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.










