Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Bengaluru City Police

ಮೊಬೈಲ್ ಫೋನ್ ಗಳನ್ನು ಕಳವು ಮಾಡುತ್ತಿದ್ದ ಆರು ವ್ಯಕ್ತಿಗಳ ಬಂಧನ25 ಲಕ್ಷ ಮೌಲ್ಯದ 70 ಮೊಬೈಲ್ ಫೋನ್ ಗಳು 01 ಕಾರು ಮತ್ತು 01 ಆಟೋರಿಕ್ಷಾ ವಶ

CREDOPRESS MEDIA PVT LTD by CREDOPRESS MEDIA PVT LTD
August 1, 2025
in Bengaluru City Police,Indian Police News,Karnataka News,Karnataka State Police,Latest News,Namma Police News,National News
0
ಮೊಬೈಲ್ ಫೋನ್ ಗಳನ್ನು ಕಳವು ಮಾಡುತ್ತಿದ್ದ ಆರು ವ್ಯಕ್ತಿಗಳ ಬಂಧನ25 ಲಕ್ಷ ಮೌಲ್ಯದ 70 ಮೊಬೈಲ್ ಫೋನ್ ಗಳು 01 ಕಾರು ಮತ್ತು 01 ಆಟೋರಿಕ್ಷಾ ವಶ
0
SHARES
7
VIEWS
Share on FacebookShare on Twitter

ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾಸರ ಹದ್ದಿನ, ಪ್ರಗತಿ ನಗರದಲ್ಲಿ ವಾಸವಿರುವ ಪಿರಿಯಾದುದಾರರು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ.

ದೂರಿನಲ್ಲಿ ಪಿರಿಯಾದುದಾರರು ಸಂಜೆ ಕೂಡ್ಲು ಗೇಟ್ನಲ್ಲಿರುವ ಸ್ನೇಹಿತನ ಮನೆಗೆ ಹೋಗುವ ಸಲುವಾಗಿ ಎಲೆಕ್ಟ್ರಾನಿಕ್ ಸಿಟಿ ಬಿ.ಎಂ.ಟಿ.ಸಿ ಬಸ್ ನಿಲ್ದಾಣದಿಂದ ಬಸ್ ಹತ್ತುವ ಸಮಯದಲ್ಲಿ ನಾಲ್ವರು ಹುಡುಗರು ಪಿರಿಯಾದುದಾರರನ್ನು ತಲ್ಲಾಡಿಕೊಂಡಿರುತ್ತಾರೆ

ಪಿರಿಯಾದುದಾರರು ಸ್ವಲ್ಪ ದೂರ ಪ್ರಯಾಣ ಮಾಡಿದ ನಂತರ, ಜೇಬಿನಲ್ಲಿದ್ದ ಮೊಬೈಲ್ ಕಾಣೆಯಾಗಿರುವುದೆಂದು ತಿಳಿದುಕೊಂಡು, ಬಸ್ ಹತ್ತುವ ಸಮಯದಲ್ಲಿ ಪಿರಿಯಾದುದಾರರನ್ನು ತಳ್ಳಾಟ ಮಾಡಿದ್ದ ಹುಡುಗರೇ ಮೊಬೈಲ್ ಫೋನನ್ನು ಕಳವು ಮಾಡಿರುವುದಾಗಿ ಅನುಮಾನ ವ್ಯಕ್ತಪಡಿಸಿ, ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆಯುವ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಕೆಯನ್ನು ಮುಂದುವರಿಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಕೆಯನ್ನು ಕೈಗೊಂಡು, ಬಾತ್ಮಿದಾರದಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ಮುಖ್ಯ ರಸ್ತೆಯ ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಬಳಿ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಮೊಬೈಲ್ ಫೋನನ್ನು ಕಳವು ಮಾಡಿರುವುದಾಗಿ ಹಾಗೂ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿಯೂ ಮೊಬೈಲ್ ಫೋನ್ ಗಳನ್ನು ಕಳವು ಮಾಡಿರುವುದಾಗಿ ತಪ್ಪೋಪ್ಪಿ ಕೊಂಡಿರುತ್ತಾರೆ.

ಆರೋಪಿಗಳ ವಶದಲ್ಲಿದ್ದ 21 ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಎರ್ಟಿಗಾ ಕಾರನ್ನು ವಶಪಡಿಸಿಕೊಂಡಿರುತ್ತಾರೆ.

ಪೊಲೀಸ್ ಅಭಿರಕ್ಷೆಗೆ ಪಡೆದ ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿ, ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಸಹಚರರು ಭಾಗಿಯಾಗಿರುವುದಾಗಿ ತಿಳಿಸಿ, ಅವರುಗಳ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ.

ದೇವನಹಳ್ಳಿಯ ದೇವಗಾನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮೂವರ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪು ಒಪ್ಪಿಕೊಂಡಿರುತ್ತಾರೆ. ಅವರುಗಳ ವಶದಲ್ಲಿದ್ದ 49 ಮೊಬೈಲ್ ಫೋನ್ ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಆಟೋರಿಕ್ಷಾ ವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಈ ಪ್ರಕರಣದ 6 ಆರೋಪಿಗಳ ಬಂಧನದಿಂದ ಒಟ್ಟು 70 ಮೊಬೈಲ್ ಫೋನ್ ಗಳು, 1 ಕಾರು ಮತ್ತು 1 ಆಟೋರಿಕ್ಷವನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 25,00,000/-(ಇಪ್ಪತ್ತೈದು ಲಕ್ಷ ರೂಪಾಯಿ).

ಈ ಪ್ರಕರಣದ ಆರೋಪಿಗಳ ಬಂಧನದಿಂದ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ 1 ಮೊಬೈಲ್ ಫೋನ್ ಕಳವ ಪ್ರಕರಣ ಪತ್ತೆ ಆಗಿರುತ್ತದೆ. ಉಳಿದ 69 ಮೊಬೈಲ್ ಫೋನ್, 1 ಕಾರ್, 1 ಆಟೋರಿಕ್ಷದ ಮಾಲೀಕರುಗಳು ಪತ್ತೆಯಾಗಬೇಕಾಗಿದ್ದು ಹಾಗೂ ಈ ಪ್ರಕರಣದಲ್ಲಿ ತಲೆಮರಿಸಿಕೊಂಡಿರುವ ಮತ್ತೋರ್ವ ವ್ಯಕ್ತಿಯ ಪತ್ತೆ ಕಾರ್ಯ ಸಹ ಮುಂದುವರೆದಿದೆ, ತನಿಖೆ ಪ್ರಗತಿಯಲ್ಲಿದೆ.

ಪ್ರಕರಣದ 6 ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.

ಈ ಕಾರ್ಯಾಚರಣೆಯನ್ನು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಶ್ರೀ. ಎಂ ನಾರಾಯಣ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರವರಾದ ಶ್ರೀ. ಕೆ. ಎಂ ಸತೀಶ್ರವರ ನೇತೃತ್ವದಲ್ಲಿ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ನವೀನ್ ಜಿ. ಎಂ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ವರದಿ
ಶಶಿಕುಮಾರ್ ವಿ

    Tags: Bengaluru City PoliceElectronic city PoliceKarnataka NewsKarnataka State PoliceLatest NewsNamma PoliceNamma Police NewsPolice NewsPrime News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ
    Bengaluru City Police

    ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ

    June 22, 2026
    ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ
    CREDOPRESS

    ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ

    June 19, 2026
    ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ
    Bengaluru City Police

    ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ

    June 19, 2026
    Next Post
    ಕೆ ರ್ ಪುರಂ ಪೊಲೀಸರಿಂದ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಹೊರ ರಾಜ್ಯದ ಓರ್ವ ವ್ಯಕ್ತಿಯ ಬಂಧನ, 31 ಲಕ್ಷ ಮೌಲ್ಯದ 31 ದ್ವಿ-ಚಕ್ರ ವಾಹನಗಳ ವಶ

    ಕೆ ರ್ ಪುರಂ ಪೊಲೀಸರಿಂದ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಹೊರ ರಾಜ್ಯದ ಓರ್ವ ವ್ಯಕ್ತಿಯ ಬಂಧನ, 31 ಲಕ್ಷ ಮೌಲ್ಯದ 31 ದ್ವಿ-ಚಕ್ರ ವಾಹನಗಳ ವಶ

    ಕಾಟನ್ ಪೇಟೆ ಪೊಲೀಸರಿಂದ ಗಾಂಜಾ ಸಾಗಣೆ ಮಾಡುತ್ತಿದ್ದ ಹೊರ ರಾಜ್ಯದ ಆರು ವ್ಯಕ್ತಿಗಳ ಬಂಧನ. 42 ಲಕ್ಷ ಮೌಲ್ಯದ 53.5 ಕೆಜಿ ಗಾಂಜಾ, 9 ಮೊಬೈಲ್, 10 ಸಿಮ್ ಕಾರ್ಡ್,1 ಲ್ಯಾಪ್ಟಾಪ್,1 ಗೂಡ್ಸ್ ಆಟೋ ವಶ

    ಕಾಟನ್ ಪೇಟೆ ಪೊಲೀಸರಿಂದ ಗಾಂಜಾ ಸಾಗಣೆ ಮಾಡುತ್ತಿದ್ದ ಹೊರ ರಾಜ್ಯದ ಆರು ವ್ಯಕ್ತಿಗಳ ಬಂಧನ. 42 ಲಕ್ಷ ಮೌಲ್ಯದ 53.5 ಕೆಜಿ ಗಾಂಜಾ, 9 ಮೊಬೈಲ್, 10 ಸಿಮ್ ಕಾರ್ಡ್,1 ಲ್ಯಾಪ್ಟಾಪ್,1 ಗೂಡ್ಸ್ ಆಟೋ ವಶ

    ಜಯನಗರ ಪೊಲೀಸರಿಂದ ಮನೆ ಕನ್ನ ಕಳವು ಮಾಡುತ್ತಿದ್ದ ಮೂವರು ವ್ಯಕ್ತಿಗಳ ಬಂಧನ,79 ಲಕ್ಷ ಮೌಲ್ಯದ ಒಂದು ಕೆಜಿ 85 ಗ್ರಾಂ ಚಿನ್ನಾಭರಣ ವಶ

    ಜಯನಗರ ಪೊಲೀಸರಿಂದ ಮನೆ ಕನ್ನ ಕಳವು ಮಾಡುತ್ತಿದ್ದ ಮೂವರು ವ್ಯಕ್ತಿಗಳ ಬಂಧನ,79 ಲಕ್ಷ ಮೌಲ್ಯದ ಒಂದು ಕೆಜಿ 85 ಗ್ರಾಂ ಚಿನ್ನಾಭರಣ ವಶ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press CREDOPRESS MEDIA Cyber Crime Dakshina kannada district police Davangere police drugs news Electronic city Police Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police Mangaluru Police MDMA Namma Police Namma Police News Police News Prime News Ramanagara District Police Sadashivnagar Police SG Palya Police Siddapura Police Yelahanka police
    No Result
    View All Result

    • 0
      Fans
      0
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ
    • ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ
    • ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved