“ ಹುಮನಾಬಾದ ಉಪ-ವಿಭಾಗದ ಪೊಲೀಸ್ ಅಧಿಕಾರಿ, ಸಿಬ್ಬಂದಿರವರಿಂದ ಬ.ಕಲ್ಯಾಣ ನಗರ ಪೊಲೀಸ್ ಠಾಣೆಯ ಡಕಾಯಿಟಿ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಜಿಲ್ಲೆಯಲ್ಲಿ ದಾಖಲಾದ 17 ಜಾನವಾರು ಕಳವು ಪ್ರಕರಣಗಳ ಪತ್ತೆ 23 ಲಕ್ಷಕ್ಕೂ ಅಧಿಕ ಮೌಲದ್ಯ ಬಂಗಾರ, ಬೆಳ್ಳಿ ಆಭರಣ & ನಗದು ಹಣ, ಜಾನುವಾರುಗಳ ವಶ 12 ಜನ ಅಂತರ ರಾಜ್ಯ ಡಕಾಯಿತಿ, ಜಾನುವಾರು ಕಳ್ಳತನ ಆರೋಪಿತರ ಬಂಧನ ”.
ಬಸವಕಲ್ಯಾಣ ನಗರದ ಡಕಾಯಿತಿ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಜಿಲ್ಲೆಯಲ್ಲಿ ದಾಖಲಾದ 17 ಜಾನುವಾರು ಕಳವು ಪ್ರಕರಣಗಳ ಪತ್ತೆ ಬೀದರ ಜಿಲ್ಲಾ ಪೊಲೀಸರು ಸವಾಲಾಗಿ ಪರಿಗಣಿಸಿ ಹುಮನಾಬಾದ ಉಪ-ವಿಭಾಗದ ಶ್ರೀ ಜೆ.ಎಸ್ ನ್ಯಾಮಗೌಡರ್, ರವರ ಮುಂದಾಳತ್ವದಲ್ಲಿ ಶ್ರೀ ಅಲಿಸಾಬ, ಸಿ.ಪಿ.ಐ ಬ.ಕಲ್ಯಾಣ ನಗರ ವೃತ್ತ, ಶ್ರೀ ಜಿ.ಎಮ್ ಪಾಟೀಲ್, ಸಿ.ಪಿ.ಐ ಹುಮನಾಬಾದ ವೃತ್ತ. ಶ್ರೀ ಕೃಷ್ಣಕುಮಾರ ಪಾಟೀಲ್, ಸಿ.ಪಿ.ಐ ಮಂಠಾಳ ವೃತ್ತ ರವರ ನೇತೃತ್ವದಲ್ಲಿ ಶ್ರೀ, ಅಂಬರೀಷ್, ಪಿ.ಎಸ್.ಐ ಬ.ಕಲ್ಯಾಣ ನಗರ ಪೊಲೀಸ್ ಠಾಣೆ. ಶ್ರೀ, ನಾಗೇಂದ್ರ, ಪಿ.ಎಸ್.ಐ ಬ.ಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ, ಶ್ರೀ ಮಹೇಂದ್ರಕುಮಾರ, ಪಿ.ಎಸ್.ಐ ಮನ್ನಾಏಖೇಳಿ ಪೊಲೀಸ್ ಠಾಣೆ, ಶ್ರೀ ಬಾಷುಮಿಯ್ಯಾ, ಪಿ.ಎಸ್.ಐ ಚಿಟಗುಪ್ಪಾ ಪೊಲೀಸ್ ಠಾಣೆ, ಶ್ರೀ ಸುರೇಶ ಚವ್ಹಾಣ, ಹುಮನಾಬಾದ ಪೊಲೀಸ್ ಠಾಣೆ, ಶ್ರೀ ವಿಜಯಕುಮಾರ ನಾಯಕ, ಪಿ.ಎಸ್.ಐ ಹಳ್ಳಿಖೇಡ-ಬಿ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿಯರವರನ್ನೊಳಗೊಂಡ ತಂಡವು ಮಹಾರಾಷ್ಟ್ರ ರಾಜ್ಯದ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ತಂಡವು ವೈಜ್ಞಾನಿಕ ನೆರವು, ಸಿ.ಸಿ ಕ್ಯಾಮರಾಗಳ ಸಹಾಯದಿಂದ 05 ಜನ ಅಂತರ ರಾಜ್ಯ ಡಕಾಯಿತಿ, ಶಸ್ತ್ರಾಸ್ತ್ರ ಕಾಯ್ದೆಯ ಆರೋಪಿತರ ಪತ್ತೆ ಮಾಡಿ ಅವರಿಂದ 3.6 ತೊಲೆ ಬಂಗಾರದ ಸರಾ, 17 ತೊಲೆ ಬೆಳ್ಳಿಯ ಆಭರಣ, 12 ಸಾವಿರ ನಗದು ಹಣ, ಶಸ್ತ್ರಾಸ್ತ್ರಗಳ ವಶ ಪಡಿಸಿಕೊಂಡು ಉಳುವು ಯೋಗಿಯ ಜೀವನಾಂಶಗಳಾದ 49 ಜಾನುವಾರುಗಳು, 58 ಕುರಿಗಳು, ಒಂದು ಗುಡ್ಸ್ ವಾಹನ ವಶ ಪಡಿಸಿಕೊಂಡು 07 ಜನ ಅಂತರ ರಾಜ್ಯ ಜಾನವಾರು ಕಳ್ಳರನ್ನು ದಸ್ತಗಿರಿ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಹೀಗೆ ಒಟ್ಟು 23,14,480=00 ರೂಪಾಯಿ ಮೌಲ್ಯದವುಗಳನ್ನು ಅತೀ ಚಾತುರ್ಯತನದಿಂದ ಪ್ರಕರಣಗಳನ್ನು ಭೇದಿಸಿದ ಹುಮನಾಬಾದ ಉಪ-ವಿಭಾಗದ ಪೊಲೀಸ್ ಅಧಿಕಾರಿ ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ. ಅದರಂತೆ ಪ್ರಕರಣದ ಪತ್ತೆಯಲ್ಲಿ ಸಹಕರಿಸಿದ ಮಹಾರಾಷ್ಟ್ರ ರಾಜ್ಯದ ಪೊಲೀಸರಿಗೂ ಬೀದರ ಜಿಲ್ಲಾ ಪೊಲೀಸ್ ರಿಂದ ಅಭಿನಂದನೆಗಳು.
ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಸಿ.ಸಿ ಟಿ.ವಿಗಳ ಪಾತ್ರ ಅತೀ ಪ್ರಮುಖವಾಗಿದ್ದು, ಜಿಲ್ಲೆಯಲ್ಲಿ ಪೊಲೀಸರು ಗ್ರಾಮಗಳ ಪ್ರಮುಖ ರಸ್ತೆಯ ಮೇಲೆ, ಮನೆಗಳಿಗೆ/ಅಂಗಡಿಗಳಿಗೆ ಸಿ.ಸಿ ಟಿವಿ ಅಳವಡಿಸಲು ಹೆಚ್ಚಿನ ಒತ್ತು ನೀಡುತ್ತಿದ್ದು, ಸಾರ್ವಜನಿಕರು ಸಹಕರಿಸಲು ಕೊರಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ, ಪತ್ತೆ ಕಾರ್ಯ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ









