ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ, ಮಾನ್ಯ ಉಪ-ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ಬೆಳಗಾವಿ ನಗರ, ಮಾನ್ಯ ಉಪ-ಪೊಲೀಸ್ ಆಯುಕ್ತರು ಅಪರಾಧ ಮತ್ತು ಸಂಚಾರ ಬೆಳಗಾವಿ ನಗರ ಹಾಗೂ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ಮಾರ್ಕೆಟ್ ತ್ ಉಪವಿಭಾಗ ಬೆಳಗಾವಿ ನಗರ ರವರ ಮಾರ್ಗದರ್ಶನದಲ್ಲಿ, ಎಪಿಎಂಸಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ-111/2024 ಕಲಂ-303(2) ಬಿಎನ್‌ಎಸ್-2023 ಪ್ರಕರಣದ ತನಿಖೆ ಕೈಕೊಂಡಿದ್ದ ಎಪಿಎಂಸಿ ಪೊಲೀಸ್‌ರು ಕೆಎಲ್‌ಇ ಆಸ್ಪತ್ರೆ ರಸ್ತೆಯಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಹೇಮಂತ ಶಿವಾಜಿ ಜಾಂಗಳೆ ಸಾ: ಜ್ಯೋತಿ ನಗರ ಹಾಲಿ ಗ್ಯಾಂಗ್‌ಾಡಿ ರಾಮನಗರ ಬೆಳಗಾವಿ ಎಂಬ ವ್ಯಕ್ತಿಯನ್ನು ವಿಚಾರಣೆ ಮಾಡಿದಾಗ ಸದರಿ ಆರೋಪಿತನು ಒಟ್ಟು 8 ಮೋಟರ್ ಸೈಕಲ್‌ಗಳನ್ನು ನಗರದ ವಿವಿಧ ಸ್ಥಳಗಳಿಂದ ಕಳವು ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾನೆ. ಎಪಿಎಂಸಿ ಪೊಲೀಸ್ ಠಾಣೆ ಮತ್ತು ಸಂಕೇಶ್ವರ ಪೊಲೀಸ್ ಠಾಣೆ ಅಪರಾಧ ಪ್ರಕರಣಗಳಲ್ಲಿ ತಲಾ ಒಂದೊಂದು ಮೋಟರ್ ಸೈಕಲ್‌ಗಳು ಪತ್ತೆ ಆಗಿದ್ದು ಬಾಕಿ ಉಳಿದ ಒಟ್ಟು 6 ಮೋಟರ್‌ಸೈಕಲ್‌ಗಳ ವಾಹನ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿರುತ್ತದೆ. ಸದರಿ ಆರೋಪಿತನನ್ನು ದಸ್ತಗೀರ ಮಾಡಿ ದಸ್ತಗೀರಿ ನಿಯಮಾವಳಿಯನ್ನು ಪಾಲಿಸಿದ್ದು ಇರುತ್ತದೆ.
ಪೊಲೀಸ್ ಇನ್ಸ್‌ಪೆಕ್ಟರ್ ಸದರಿ ಪ್ರಕರಣದಲ್ಲಿ ವಿಶೇಷ ಕರ್ತವ್ಯಪ್ರಜ್ಞೆ ತೋರಿದ ಶ್ರೀ ಆರ್ ಆರ್ ಪಾಟೀಲ (ಪ್ರಭಾರಿ), ಪಿಎಸ್‌ಐಗಳಾದ ಶ್ರೀ ಮಂಜುನಾಥ ಭಜಂತ್ರಿ, ಶ್ರೀಮತಿ ತ್ರಿವೇಣಿ ನಾಟಿಕಾರ್ ಶ್ರೀ ಬಿ ಕೆ ಮಿಟಗಾರ, ಎಎಸ್‌ಐ, ಹಾಗೂ ಸಿಬ್ಬಂದಿಗಳಾದ ಶ್ರೀ ಬಿ ಎಂ ನರಗುಂದ, ಶ್ರೀ ಎಫ್ ಬಿ ಮುಜಾವರ, ಶ್ರೀ ಖಾದರ ಖಾನಮ್ಮನವರ ಶ್ರೀ ಗೋವಿಂದ ಪೂಜಾರಿ, ಮತ್ತು ಶ್ರೀ ಎನ್ ಡಿ ಬಿರಗೊಂಡ ರವರನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.









