ಮಹಾಲಕ್ಷ್ಮೀಲೇಔಟ್ನ 8ನೇ ಕ್ಲಾಸ್ನಲ್ಲಿ ವಾಸವಿರುವ ಪಿರ್ಯಾದುದಾರರು ದಿನಾಂಕ:11/11/2024 ರಂದು ಸೆನ್ ಪೊಲೀಸ್ ಠಾಣೆ ಉತ್ತರ ವಿಭಾಗದಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಫೇಸ್ ಬುಕ್ ಪೇಜ್ ವೊಂದರಲ್ಲಿ ಬಂದಿರುವ ಸ್ಟಾಕ್ ಇನ್ವೆಸ್ಟ್ಮೆಂಟ್ ಜಾಹೀರಾತಿನ ಲಿಂಕ್ ಮೂಲಕ BRANDY WINE GROUP & E8 BRANDWINE GROUPಮಾರ್ಕೆಟಿಂಗನ್ನು ಡೌನ್ ಲೋಡ್ ಮಾಡಿಕೊಂಡು, ವಾಟ್ಸಾಪ್ ಗ್ರೂಪ್ನಲ್ಲಿ ಸೇರಿಕೊಂಡು BRANDY SPEED ಎಂಬ ಅಫ್ನ್ನು ಇನ್ಸ್ಟಾಲ್ ಮಾಡಿಕೊಂಡು SUBSCRIPTION ಮಾಡುವುದರಿಂದ ಹೆಚ್ಚು ಆದಾಯ ಗಳಿಸಬಹುದೆಂದು ದಿನಾಂಕ: 04/10/2024 ರಿಂದ 09/01/2024 ರವರಿಗೆ ಹಂತ ಹಂತವಾಗಿ ಒಟ್ಟು ಕೆ 88,83,000/- ಹಣವನ್ನು ಅಪರಿಚಿತ ವ್ಯಕ್ತಿಗಳು ತಿಳಿಸಿರುವ ಬ್ಯಾಂಕ್ ಖಾತೆಗಳಲ್ಲಿ ಪಿರಾದುದಾರರು ಹಣವನ್ನು ಹೂಡಿಕೆ ಮಾಡಿ ಮೋಸ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಸೆನ್ ಪೊಲೀಸ್ ಠಾಣೆ ಉತ್ತರ ವಿಭಾಗದಲ್ಲಿ ಪ್ರಕರಣದ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ತನಿಖೆಯನ್ನು ಮುಂದುವರೆಸಿದ ಸೆನ್ ಪೊಲೀಸರು, ಪಿರ್ಯಾದುದಾರರು ಹಣ ವರ್ಗಾವಣೆ ಮಾಡಿದ್ದ ವಿವಿದ ಬ್ಯಾಂಕ್ ಖಾತೆಗಳ ಖಾತೆದಾರರ ಸಂಪೂರ್ಣವಾದ ಮಾಹಿತಿ/ವಿವರಗಳನ್ನು ಪಡೆದುಕೊಂಡು ಆನ್ಲೈನ್ ಇನ್ವೆಸ್ಟ್ಮೆಂಟ್ ಫಾಡ್ ಜಾಲದಲ್ಲಿ ತೊಡಗಿಸಿಕೊಂಡಿದ ಒಟ್ಟು 10 ವ್ಯಕ್ತಿಗಳನ್ನು ದಿನಾಂಕ:12/12/2024 ರಂದು ಯಶವಂತಪುರದ 1ನೇ ಮುಖ್ಯ ರಸ್ತೆಯಲ್ಲಿ 15 ಮೊಬೈಲ್ ಫೋನ್ ಮತ್ತು 2 ಲ್ಯಾಪ್ಟಾಪ್ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿ, ಈ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ.

ದಿನಾಂಕ:12/12/2024 ರಂದು ಹತ್ತು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಹತ್ತು ಆರೋಪಿಗಳ ಪೈಕಿ 7 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ. ಹಾಗೂ ಉಳಿದ ಮೂವರು ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ನೀಡಿರುತ್ತದೆ.
ಪೊಲೀಸ್ ಅಭಿರಕ್ಷೆಗೆ ಪಡೆದ ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಸುಲಭವಾಗಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ ಈ ರೀತಿಯ ಕೃತ್ಯವೆಸಗಿರುವುದಾಗಿ ತಿಳಿಸಿದ್ದು, ಆರೋಪಿಗಳ ಪೈಕಿ ಇಬ್ಬರು ಆರೋಪಿಗಳು ತ್ಯಾಗರಾಜ ನಗರ ಮತ್ತು ಸದಾಶಿವನಗರದಲ್ಲಿ ಪ್ರತ್ಯೇಕವಾಗಿ ಕಛೇರಿಯನ್ನು ಹೊಂದಿರುತ್ತಾರೆ.

ದಿನಾಂಕ:13/12/2024 ರಂದು ತ್ಯಾಗರಾಜ ನಗರದಲ್ಲಿ ಹೊಂದಿದ್ದ ಕಛೇರಿಯ ಮೇಲೆ ದಾಳಿ ಮಾಡಿ, ಕೃತ್ಯಕ್ಕೆ ಉಪಯೋಗಿಸಿದ್ದ 08 ಮೊಬೈಲ್ ಫೋನ್ಗಳು, 02 ಸಿ.ಪಿ.ಯು, 78 ಪಾಸ್ ಬುಕ್ & ಚೆಕ್ಬುಕ್ಗಳು, 164 ಸಿಮ್ ಕಾರ್ಡ್ಗಳು, 20 ಡಿಬಿಟ್ ಕಾರ್ಡ್ಗಳು, 48 ಬ್ಯಾಂಕ್ ಅಕೌಂಟ್ ಕ್ಯೂ.ಆರ್.ಕೋಡ್, 27 ರಬ್ಬರ್ ಸ್ಟಾಂಪ್, 103 ಉದ್ಯಮ್ & ಜಿ.ಎಸ್.ಟಿ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ದಿನಾಂಕ:14/12/2024 ರಂದು ಸದಾಶಿವ ನಗರದಲ್ಲಿ ಹೊಂದಿದ್ದ ಕಛೇರಿಯ ಮೇಲೆ ದಾಳಿ ಮಾಡಿ, ಕೃತ್ಯಕ್ಕೆ ಉಪಯೋಗಿಸಿದ್ದ 28 ಮೊಬೈಲ್ಫೋನ್ಗಳು, 30 ಪಾಸ್ ಬುಕ್ ಚೆಕ್ಬುಕ್ಗಳು, 316 ಸಿಮ್ ಕಾರ್ಡ್ಗಳು, 07 ಡಿಬಿಟ್ ಕಾರ್ಡ್ಗಳು, 15 ರಬ್ಬರ್ ಸ್ಟಾಂಪ್, 230 ಕರೆಂಟ್ ಅಕೌಂಟ್ಗೆ ಸಂಬಂಧಪಟ್ಟ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.









