Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Karnataka News

ಆನ್ ಲೈನ್ ಮುಖಾಂತರ ಲಕ್ಷಾಂತರ ರೂಪಾಯಿಯನ್ನು ವರ್ಗಾವಣೆ ಮಾಡಿಸಿಕೊಂಡು, ವಂಚನೆ ಮಾಡಿದ್ದ ಹತ್ತು ವ್ಯಕ್ತಿಗಳ ಬಂಧನ.

CREDOPRESS MEDIA PVT LTD by CREDOPRESS MEDIA PVT LTD
December 21, 2024
in Karnataka News,Karnataka State Police,Latest News,Namma Police,Namma Police News
0
ಆನ್ ಲೈನ್ ಮುಖಾಂತರ ಲಕ್ಷಾಂತರ ರೂಪಾಯಿಯನ್ನು ವರ್ಗಾವಣೆ ಮಾಡಿಸಿಕೊಂಡು, ವಂಚನೆ ಮಾಡಿದ್ದ ಹತ್ತು ವ್ಯಕ್ತಿಗಳ ಬಂಧನ.
0
SHARES
7
VIEWS
Share on FacebookShare on Twitter


ಮಹಾಲಕ್ಷ್ಮೀಲೇಔಟ್‌ನ 8ನೇ ಕ್ಲಾಸ್‌ನಲ್ಲಿ ವಾಸವಿರುವ ಪಿರ್ಯಾದುದಾರರು ದಿನಾಂಕ:11/11/2024 ರಂದು ಸೆನ್ ಪೊಲೀಸ್ ಠಾಣೆ ಉತ್ತರ ವಿಭಾಗದಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಫೇಸ್ ಬುಕ್ ಪೇಜ್‌ ವೊಂದರಲ್ಲಿ ಬಂದಿರುವ ಸ್ಟಾಕ್ ಇನ್‌ವೆಸ್ಟ್ಮೆಂಟ್ ಜಾಹೀರಾತಿನ ಲಿಂಕ್ ಮೂಲಕ BRANDY WINE GROUP & E8 BRANDWINE GROUPಮಾರ್ಕೆಟಿಂಗನ್ನು ಡೌನ್ ಲೋಡ್ ಮಾಡಿಕೊಂಡು, ವಾಟ್ಸಾಪ್ ಗ್ರೂಪ್‌ನಲ್ಲಿ ಸೇರಿಕೊಂಡು BRANDY SPEED ಎಂಬ ಅಫ್‌ನ್ನು ಇನ್‌ಸ್ಟಾಲ್ ಮಾಡಿಕೊಂಡು SUBSCRIPTION ಮಾಡುವುದರಿಂದ ಹೆಚ್ಚು ಆದಾಯ ಗಳಿಸಬಹುದೆಂದು ದಿನಾಂಕ: 04/10/2024 ರಿಂದ 09/01/2024 ರವರಿಗೆ ಹಂತ ಹಂತವಾಗಿ ಒಟ್ಟು ಕೆ 88,83,000/- ಹಣವನ್ನು ಅಪರಿಚಿತ ವ್ಯಕ್ತಿಗಳು ತಿಳಿಸಿರುವ ಬ್ಯಾಂಕ್‌ ಖಾತೆಗಳಲ್ಲಿ ಪಿರಾದುದಾರರು ಹಣವನ್ನು ಹೂಡಿಕೆ ಮಾಡಿ ಮೋಸ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಸೆನ್ ಪೊಲೀಸ್ ಠಾಣೆ ಉತ್ತರ ವಿಭಾಗದಲ್ಲಿ ಪ್ರಕರಣದ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ತನಿಖೆಯನ್ನು ಮುಂದುವರೆಸಿದ ಸೆನ್ ಪೊಲೀಸರು, ಪಿರ್ಯಾದುದಾರರು ಹಣ ವರ್ಗಾವಣೆ ಮಾಡಿದ್ದ ವಿವಿದ ಬ್ಯಾಂಕ್ ಖಾತೆಗಳ ಖಾತೆದಾರರ ಸಂಪೂರ್ಣವಾದ ಮಾಹಿತಿ/ವಿವರಗಳನ್ನು ಪಡೆದುಕೊಂಡು ಆನ್‌ಲೈನ್ ಇನ್ವೆಸ್ಟ್‌ಮೆಂಟ್ ಫಾಡ್ ಜಾಲದಲ್ಲಿ ತೊಡಗಿಸಿಕೊಂಡಿದ ಒಟ್ಟು 10 ವ್ಯಕ್ತಿಗಳನ್ನು ದಿನಾಂಕ:12/12/2024 ರಂದು ಯಶವಂತಪುರದ 1ನೇ ಮುಖ್ಯ ರಸ್ತೆಯಲ್ಲಿ 15 ಮೊಬೈಲ್ ಫೋನ್ ಮತ್ತು 2 ಲ್ಯಾಪ್‌ಟಾಪ್ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿ, ಈ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ.


ದಿನಾಂಕ:12/12/2024 ರಂದು ಹತ್ತು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಹತ್ತು ಆರೋಪಿಗಳ ಪೈಕಿ 7 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ. ಹಾಗೂ ಉಳಿದ ಮೂವರು ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ನೀಡಿರುತ್ತದೆ.
ಪೊಲೀಸ್ ಅಭಿರಕ್ಷೆಗೆ ಪಡೆದ ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಸುಲಭವಾಗಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ ಈ ರೀತಿಯ ಕೃತ್ಯವೆಸಗಿರುವುದಾಗಿ ತಿಳಿಸಿದ್ದು, ಆರೋಪಿಗಳ ಪೈಕಿ ಇಬ್ಬರು ಆರೋಪಿಗಳು ತ್ಯಾಗರಾಜ ನಗರ ಮತ್ತು ಸದಾಶಿವನಗರದಲ್ಲಿ ಪ್ರತ್ಯೇಕವಾಗಿ ಕಛೇರಿಯನ್ನು ಹೊಂದಿರುತ್ತಾರೆ.


ದಿನಾಂಕ:13/12/2024 ರಂದು ತ್ಯಾಗರಾಜ ನಗರದಲ್ಲಿ ಹೊಂದಿದ್ದ ಕಛೇರಿಯ ಮೇಲೆ ದಾಳಿ ಮಾಡಿ, ಕೃತ್ಯಕ್ಕೆ ಉಪಯೋಗಿಸಿದ್ದ 08 ಮೊಬೈಲ್ ಫೋನ್‌ಗಳು, 02 ಸಿ.ಪಿ.ಯು, 78 ಪಾಸ್‌ ಬುಕ್ & ಚೆಕ್‌ಬುಕ್‌ಗಳು, 164 ಸಿಮ್‌ ಕಾರ್ಡ್‌ಗಳು, 20 ಡಿಬಿಟ್ ಕಾರ್ಡ್‌ಗಳು, 48 ಬ್ಯಾಂಕ್ ಅಕೌಂಟ್ ಕ್ಯೂ.ಆರ್.ಕೋಡ್, 27 ರಬ್ಬರ್ ಸ್ಟಾಂಪ್, 103 ಉದ್ಯಮ್ & ಜಿ.ಎಸ್.ಟಿ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ದಿನಾಂಕ:14/12/2024 ರಂದು ಸದಾಶಿವ ನಗರದಲ್ಲಿ ಹೊಂದಿದ್ದ ಕಛೇರಿಯ ಮೇಲೆ ದಾಳಿ ಮಾಡಿ, ಕೃತ್ಯಕ್ಕೆ ಉಪಯೋಗಿಸಿದ್ದ 28 ಮೊಬೈಲ್ಫೋನ್‌ಗಳು, 30 ಪಾಸ್‌ ಬುಕ್ ಚೆಕ್‌ಬುಕ್‌ಗಳು, 316 ಸಿಮ್‌ ಕಾರ್ಡ್‌ಗಳು, 07 ಡಿಬಿಟ್ ಕಾರ್ಡ್‌ಗಳು, 15 ರಬ್ಬರ್ ಸ್ಟಾಂಪ್, 230 ಕರೆಂಟ್ ಅಕೌಂಟ್‌ಗೆ ಸಂಬಂಧಪಟ್ಟ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

    Tags: BengaluruBengaluru City PoliceCEN NorthKarnataka NewsLatest NewsNamma Police NewsPolice News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ
    Bengaluru City Police

    50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ

    May 13, 2026
    ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
    Bengaluru City Police

    ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ

    May 13, 2026
    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ
    Bengaluru City Police

    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ

    May 12, 2026
    Next Post
    ಕ್ರಿಸ್ಮಸ್ ಆಚರಣೆ ಹಾಗೂ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಡಾ .ಜಿ ಪರಮೇಶ್ವರ್ ಸಭೆ

    ಕ್ರಿಸ್ಮಸ್ ಆಚರಣೆ ಹಾಗೂ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಡಾ .ಜಿ ಪರಮೇಶ್ವರ್ ಸಭೆ

    ಕಾರುಗಳನ್ನು ಬಾಡಿಗೆಗೆ ಪಡೆದು, ನಕಲಿ ದಾಖಲೆ ಸೃಷ್ಠಿಸಿ, ಮಾರಾಟ ಮತ್ತು ಗಿರವಿ ಇಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ.

    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಬರ್ಬರ ಹತ್ಯೆಯಾಗಿದ್ದು, ಮಾಂಸದ ಅಂಗಡಿಯಲ್ಲೇ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

    ಕನ್ನ ಕಳವು ಮಾಡಿದ ಓರ್ವ ವ್ಯಕ್ತಿಯ ಬಂಧನ.

    ಕನ್ನ ಕಳವು ಮಾಡಿದ ಓರ್ವ ವ್ಯಕ್ತಿಯ ಬಂಧನ.

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police Chikkabalapura Police CM Siddaramaiah Credo Press Credopress CREDOPRESS MEDIA Cyber Crime Davangere police Davangere Railway Police drugs news Electronic city Police Hoskote News Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • 50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ
    • ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
    • ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved