ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್., ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ, ರವರ ನಿರ್ದೇಶನದಂತೆ, ಶ್ರೀ ಜೆ.ಎಸ್ ನ್ಯಾಮಗೌಡರ ರವರು ದ್ವಿಚಕ್ರ ವಾಹನ ಅಪಘಾತದ ಪ್ರಕರಣಗಳಲ್ಲಿ ಅಧೀಕ ಪ್ರಕರಣಗಳಲ್ಲಿ ತಲೆಗೆ ಪೆಟ್ಟಾಗಿಯೇ ವಾಹನ ಚಾಲಕರು, ಸವಾರರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದು, ಇದನ್ನು ತಡೆಯಲು ಮತ್ತು ಅಪಘಾತಂದಿಂದ ಸಂಭವಿಸುವ ಅಮಾಯಕರ ಪ್ರಾಣ ರಕ್ಷಣೆ ಮಾಡುವುದು ಹಾಗು ಸಂಚಾರಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹುಮನಾಬಾದ ನಗರ ಪೊಲೀಸ್ ಠಾಣೆ, ಹುಮನಾಬಾದ ಸಂಚಾರಿ ಪೊಲೀಸ್ ಠಾಣೆಯಪಿಎಸ್ಐ ಶ್ರೀ ಸುರೇಶ ಚವ್ಹಾಣ, ಶ್ರೀ ಬಸಲಿಂಗಪ್ಪಾ, ಶ್ರೀಮತಿ ಸವಿತಾ ಪ್ರೀಯಂಕಾ, ಸಿಬ್ಬಂದಿ ರವರೊಂದಿಗೆ ಮತ್ತು ಆರ್.ಟಿ.ಓ ಅಧಿಕಾರಿ, ಸಿಬ್ಬಂದಿರವರೊಂದಿಗೆ ಹುಮನಾಬಾದ ಪಟ್ಟಣದಲ್ಲಿ ಪಟ್ಟಣದಲ್ಲಿ ಹೆಲ್ಮೆಟ್ ಧರಿಸಿಕೊಂಡು ಬೈಕ್ ರಾಲಿ ಮೂಲಕ ಸಾರ್ವಜನಿಕರಲ್ಲಿ ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ ಎಂಬ ವಾಕ್ಯದೊಂದಿಗೆ ವಾಹನ ಚಾಲಕರಿಗೆ ಗುಲಾಬಿ ಹುಗಳನ್ನು ನೀಡಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.

ಹುಮನಾಬಾದ ಉಪವಿಭಾಗದ ಪೊಲೀಸ ಅಧಿಕಾರಿ, ಸಿಬ್ಬಂದಿ, ಆರ್.ಟಿ.ಓ ಅಧಿಕಾರಿ, ಸಿಬ್ಬಂದಿರವರ ಉತ್ತಮ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಜನ ಸಾಮಾನ್ಯರ ಪ್ರಾಣ ರಕ್ಷಣೆಯೇ ನಮ್ಮ ಮುಖ್ಯ ಗುರಿ. ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ









