ದಿನಾಂಕ: 24/01/2025 ರಂದು “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ” ಯ ಅಂಗವಾಗಿ, ಬೆಂಗಳೂರು ನಗರ ಪೊಲೀಸ್ ಹಾಗೂ ರೋಟರಿ ಇಂಟರ್‌ನ್ಯಾಷನಲ್ ಸಂಸ್ಥೆಯ ಸಹಯೋಗದೊಂದಿಗೆ ಪೊಲೀಸ್ ಕುಟುಂಬದವರ ಹೆಣ್ಣು ಮಕ್ಕಳ ಅಭೋದಯಕ್ಕಾಗಿ ಯೋಜನೆಯೊಂದನ್ನು ರೂಪಿಸಲಾಗಿದೆ.

ಪೊಲೀಸ್ ಆಯುಕ್ತರವರ ವ್ಯಾಪ್ತಿಗೆ ಬರುವ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಪೈಕಿ, ಏಕ ಪೋಷಕರು ಹಾಗೂ ಕಷ್ಟಕರ ಹಿನ್ನೆಲೆಯುಳ್ಳ ಪೋಷಕರ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ, 10ನೇ ತರಗತಿ ವ್ಯಾಸಂಗ ಮುಗಿಸಿದ ನಂತರ ವೃತ್ತಿಪರ ಕೋರ್ಸ್‌ಗಳು ಮುಗಿಯುವ ವರೆಗೂ ಆಯ್ದ 25 ವಿದ್ಯಾರ್ಥಿನಿಯರಿಗೆ ನಿರ್ದಿಷ್ಟ ಆರ್ಥಿಕ ನೆರವನ್ನು ರೋಟರಿ ಸಂಸ್ಥೆಯು ಒದಗಿಸುತ್ತದೆ.
ಈ ಸಂಬಂಧ ಪೊಲೀಸ್ ಇಲಾಖೆಯು, ಆಯ್ದ ವಿದ್ಯಾರ್ಥಿನಿಯರ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ, ಅಗತ್ಯ ಮಾಹಿತಿಯನ್ನು ರೋಟರಿ ಸಂಸ್ಥೆಗೆ ಒದಗಿಸಲಾಗುತ್ತದೆ. ಈ ಯೋಜನೆಯು 2025-26ರಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದ್ದು, ಆಯ್ದ 25 ವಿದ್ಯಾರ್ಥಿನಿಯರ ವೃತ್ತಿಪರ ಕೋರ್ಸ್‌ಗಳು ಮುಗಿಯುವ ಜಾಲ್ತಿಯಲ್ಲಿರುತ್ತದೆ.









