11.76 ಲಕ್ಷ ನಗದು ಮತ್ತು 3 ಕಾರುಗಳ ವಶ, ಮೌಲ್ಯ 190 ಲಕ್ಷ.
ದಿನಾಂಕ:25/01/2025 ರಂದು ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆಯ ಅಧಿಕಾರಿಯವರಿಗೆ ಬಾತ್ಮಿದಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಪೊಲೀಸ್ ಠಾಣಾ ಸರಹದ್ದಿನ ಕೆಂಪೇಗೌಡ ಲೇಔಟ್, ಸರ್ವೀಸ್ ರಸ್ತೆಯಲ್ಲಿರುವ ಒಂದು ಬಳಿ ಆರು ವ್ಯಕ್ತಿಗಳು ಹಣಕಾಸಿನ ವಿಚಾರವಾಗಿ ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದಾರೆಂದು ಮಾಹಿತಿಯಲ್ಲಿ ತಿಳಿಸಿರುತ್ತಾರೆ. ಬಾತ್ಮಿದಾರರು ತಿಳಿಸಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿ, ಅರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಎ.ಟಿ.ಎಂ ಗಳಲ್ಲಿ ಹಣವನ್ನು ಕಳವು ಮಾಡುತ್ತಿದ್ದುದ್ದಾಗಿ ಹಾಗೂ ಕಳವು ಮಾಡಿದ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಪರಸ್ಪರ ಜಗಳವಾಡುತ್ತಿದ್ದುದ್ದಾಗಿ ತನ್ನೊಪ್ಪಿಕೊಂಡಿರುತ್ತಾರೆ. ಅವರುಗಳನ್ನು ಹಾಗೂ ಅವರ ವಶದಲ್ಲಿದ್ದ | ಕಾರು ಮತ್ತು 43,76,000/- ನಗದನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು, ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.
ವಶಕ್ಕೆ ಪಡೆದ ಆರೋಪಿಗಳನ್ನು ದಿನಾಂಕ:26/01/2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 5 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಆರೋಪಿಗಳುಗಳಿಗೆ ಹಣವನ್ನು ತುಂಬುವ ಹಾಗೂ ಎ.ಟಿ.ಎಂ ಗಳನ್ನು ರಿಪೇರಿ ಮಾಡುವ ಕೆಲಸವನ್ನು ಏಜೆನ್ಸಿಯೊಂದರ ಮುಖಾಂತರ ಮಾಡಿಕೊಂಡಿರುತ್ತಾರೆ. ಎ.ಟಿ.ಎಂ ಗಳಿಗೆ ಹಣವನ್ನು ತುಂಬುವಾಗ ಕಡಿಮೆ ಹಣವನ್ನು ತುಂಬಿರುತ್ತಾರೆ. ಮೆಷಿನ್ಗಳನ್ನು ರಿಪೇರಿ ಮಾಡುವಾಗ ಪಾಸ್ವರ್ಡ್ನ್ನು ಪಡೆದು ಎ.ಟಿ.ಎಂ ಗಳಲಿದ್ದ ಹಣವನ್ನು ಕಳವು ಮಾಡುತ್ತಿದ್ದುದ್ದಾಗಿ ವಿಚಾರಣೆ ವೇಳೆಯಲ್ಲಿ ತಿಳಿಸಿರುತ್ತಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಲಗ್ಗೆರೆಯ ಚೌಡೇಶ್ವರಿ ನಗರದಲ್ಲಿ ವಾಸವಿರುವ ಆರೋಪಿಯು ಆತನ ವಾಸದ ಮನೆಯಲ್ಲಿ ಕೆ 8,00,000/-ನಗದನ್ನುಇಟ್ಟಿರುವುದಾಗಿ ತಿಳಿಸಿದ್ದು, ಅದನ್ನು ದಿನಾಂಕ:27/01/2025 ರಂದು ವಶಪಡಿಸಿಕೊಳ್ಳಲಾಯಿತು.

ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಮತ್ತೋರ್ವ ಆರೋಪಿಯು ಕಳವು ಮಾಡಿದ ಹಣದಲ್ಲಿ ಆತನ ಪತ್ನಿಗೆ ಕೊಡಿಸಿದ್ದ ಕಾರೊಂದನ್ನು ದಿನಾಂಕ:28/01/2025 ರಂದು ನಂದಿನಿ ಲೇಔಟ್ನಲ್ಲಿರುವ ಸಿದ್ಧೇಶ್ವರ ಲೇಔಟ್ನ ವಾಸದ ಮನೆಯಿಂದ ವಶಪಡಿಸಿಕೊಳ್ಳಲಾಯಿತು.
ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿಯು ಕಳವು ಮಾಡಿದ ಹಣದಲ್ಲಿ ಖರೀದಿಸಿದ್ದ ಕಾರೊಂದನ್ನು 08:30/01/2025 ರಂದು ನಂದಿನಿ ಲೇಔಟ್ನ, ಲಕ್ಷ್ಮಿದೇವಿನಗರದ ಆತನ ವಾಸದ ಮನೆಯಿಂದ ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದ ಆರೋಪಿಗಳ ವಶದಿಂದ ಒಟ್ಟಾರೆ 51,76,000/-ನಗದು ಹಾಗೂ 3 ಕಾರುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 90,00,000/– (ತೊಂಬತ್ತು ಲಕ್ಷ ರೂಪಾಯಿ).
0:31/01/2025 ರಂದು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.

ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ಶ್ರೀ ಸೈದುಲು ಅಡಾವತ್ ರವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ಶ್ರೀ ಕೃಷ್ಣಮೂರ್ತಿ.ಹೆಚ್ ರವರ ನೇತೃತ್ವದಲ್ಲಿ, ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಮಂಜು ಹೆಚ್.ಎ. ಮತ್ತು ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









