ಗೋವನ್ನು ಕಾಮಧೇನು ಎಂದು ಘೋಷಿಸುವ ದೇಶ ನಮ್ಮದು. ಗೋಮಾತೆಯೆಂದು ಗೌರವಿಸುವ ರಾಷ್ಟ್ರ ನಮ್ಮದು. ಇಂತಹ ಪುಣ್ಯಭೂಮಿಯಲ್ಲಿ ಹಸುಗಳನ್ನು ಕಳುವು ಮಾಡಿ ಮಾರಾಟ ಮಾಡುವಂತಹ ಖದೀಮರ ತಂಡವೊಂದು ಪೊಲೀಸರ ಬಲೆಗೆ ಬಿದ್ದಿದೆ.
ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರುದಾರರ ಮಾಹಿತಿಯಂತೆ ತನಿಖೆಯನ್ನು ಪ್ರಾರಂಭಿಸಿದ ಆರಕ್ಷಕರು ಕಳ್ಳರ ತಂಡವನ್ನು ಸೆರೆಹಿಡಿದಿದ್ದಾರೆ. ಚಿಕ್ಕಮಗಳೂರು ಮತ್ತು ಬೆಂಗಳೂರಿನ ಸರ್ಜಾಪುರದ ಬಳಿ ಪ್ರಕರಣದ ಆರೋಪಿಗಳು ಸಿಕ್ಕ ಬೆನ್ನಲ್ಲೇ, ತಲಘಟ್ಟಪುರದ 3 ಹಸು ಮತ್ತು ಗುರಿ ಕಳವು ಪ್ರಕರಣದ ಜೊತೆಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ 2 ಹಸು ಮತ್ತು ಕುರಿ ಕಳವು ಪ್ರಕರಣಗಳು ಪತ್ತೆಯಾಗಿವೆ.
ಹಸು ಮತ್ತು ಕುರಿಯನ್ನು ಕದ್ದ ಆರೋಪಿಗಳು ಅವುಗಳನ್ನು ಮಾರಿದ್ದು, ಖರೀದಿದಾರರಿಂದ 1 ಲಕ್ಷ ಹಣವನ್ನು ಮತ್ತು ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 5 ಲಕ್ಷವೆಂದು ಅಂದಾಜಿಸಲಾಗಿದೆ
ಈ ಕಾರ್ಯಾಚರಣೆಯನ್ನು ತಲಘಟ್ಟಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಎನ್ರವರ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ. ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಕಮಿಷನರ್ ಶ್ರೀ ಲೋಕೇಶ್ ಭ ಜಗಲಾಸರ್ ಐಪಿಎಸ್ ಇವರ ಮಾರ್ಗದರ್ಶನ ಮತ್ತು ಸುಬ್ರಮಣ್ಯಪುರ ಉಪ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಶ್ರೀ ಗಿರೀಶ್ ಎಸ್. ಬಿರವರನೇತೃತ್ವವು ಈ ಕಾರ್ಯಾಚರಣೆಯಲ್ಲಿತ್ತು.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









