ಬೆಂಗಳೂರು ಎಲ್ಲ ರಾಜ್ಯದ ಜನರಿಗೆ ವಾಸ್ತವ್ಯ ನೀಡುವ ಸುಂದರ ತಾಣ. ಅದರಲ್ಲೂ ಬೆಂಗಳೂರಿನ ಆಟೋಗಳು ವಿಶ್ವ ಪ್ರಖ್ಯಾತಿ ಎಂದರೆ ತಪ್ಪಲ್ಲ. ಇಲ್ಲಿ ಪ್ರತಿದಿನ ಸಾವಿರಾರು ಜನರ ಓಡಾಟವಿರುತ್ತದೆ. ಅತಿಥಿ ದೇವೋಭವ ಎಂಬಂತೆ ಆತಿಥ್ಯ ನೀಡುವ ಬದಲಾಗಿ ಇಲ್ಲೊಂದು ಗುಂಪು ರಾಬರಿ ನಡೆಸಿ ಬೆಂಗಳೂರಿನ ಮತ್ತು ಆಟೋ ಚಾಲಕರ ಹೆಸರಿಗೆ ಮಸಿ ಬಳೆದಿರುವ ನೀಚ ಕೃತ್ಯಕ್ಕೆ ಕಾರಣರಾಗಿದ್ದಾರೆ.
ಅಂದಹಾಗೆ ಇದೇ ವರ್ಷದ ಗಣರಾಜ್ಯೋತ್ಸವದಂದು ತಮಿಳುನಾಡಿನಿಂದ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ವ್ಯಕ್ತಿ ಒಬ್ಬ ಬಂದಿದ್ದನು. ರಾತ್ರಿ ಆದ ಕಾರಣ ಉಳಿದುಕೊಳ್ಳಲು ಆಟೋ ಚಾಲಕರೊಬ್ಬರ ಬಳಿ ವಿಚಾರಿಸಿದ್ದನು. ಅದರಂತೆ ರೂಮ್ ಇರುವುದಾಗಿ ನಂಬಿಸಿ, ಜಯದೇವ ಆಸ್ಪತ್ರೆಯ ಬಳಿ ಕರೆತಂದು ಬಿಡುತ್ತಾರೆ. ಮುಂಚಿತವಾಗಿ ಆಟೋದಲ್ಲಿ ಒಬ್ಬ ಹುಡುಗಿ ಇದ್ದು, ಚಾಲಕನು 900ರೂ.ಗಳನ್ನು ಗೂಗಲ್ ಪೇ ಮಾಡಿಸಿಕೊಂಡಿದ್ದನು.
ಆಟೋದಿಂದಿಳಿದು ಮುನ್ನಡೆಯುತ್ತಿದ್ದಂತೆ ಮೂವರು ಅಪರಿಚಿತರು ಏಕಾಏಕಿ ಆತನ ಮೇಲೆ ಮುಗಿಬಿದ್ದಿದ್ದರು. ವ್ಯಕ್ತಿಯಿಂದ 15 ಗ್ರಾಂ ಚಿನ್ನದ ಸರ, 19 ಗ್ರಾಂ ಬ್ರಾಸ್ಲೈಟ್, ತಲಾ ಒಂದು ಒಪ್ಪೋ ಮತ್ತು ವಿವೋ ಮೊಬೈಲ್ ಗಳನ್ನು ಕಸಿದುಕೊಂಡಿದ್ದರು.
ತ್ವರಿತ ತನಿಖೆಯಿಂದ ಆಟೋ ಸಮೇತವಾಗಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದ ಸುದ್ಧಗುಂಟೆಪಾಳ್ಯ ಪೊಲೀಸರು, ಮಿಕ್ಕ ಕ್ರಿಮಿಗಳನ್ನು ಹಿಡಿಯಲು ತಡಮಾಡಲಿಲ್ಲ. ಮೈಸೂರಿನಲ್ಲಿ ಮಾರಾಟ ಮಾಡಿದ್ದ 30 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ 3 ದ್ವಿಚಕ್ರ ವಾಹನ ಸಮೇತ ಒಂದು ಆಟೋರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಮೌಲ್ಯ 5 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಖದೀಮರ ಜಾಲವನ್ನು ಪತ್ತೆ ಹಚ್ಚುವಲ್ಲಿ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ.ಸಾರಾ ಫಾತಿಮಾ,ಐಪಿಎಸ್ ಅವರ ನಿರ್ದೇಶನವಿತ್ತು. ಮೈಕೋಲೇಔಟ್ ಉಪ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಆದ ಶ್ರೀ.ಶಿವಶಂಕರ ರೆಡ್ಡಿರವರ ಮಾರ್ಗದರ್ಶನದಲ್ಲಿ, ಶ್ರೀ.ರಮೇಶ್ ಬಿ ಛಾಯಾಗೊಳ್,SG PALYA ಪೊಲೀಸ್ ಇನ್ಸ್ಪೆಕ್ಟರ್ ಇವರ ನೇತೃತ್ವದ ಅಧಿಕಾರಿಗಳ ತಂಡ ಪ್ರಕರಣದ ಪತ್ತೆಯಲ್ಲಿ ಯಶಸ್ವಿಯಾಗಿದೆ.ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









