ಹೊಸಕೋಟೆಯಲ್ಲಿ ಕೆ ಆರ್ ಪುರಂ ಪ್ರಾದೇಶಿಕ ಸಾರಿಗೆ ಇಲಾಖೆಯವರು ಮತ್ತು ಹೊಸಕೋಟೆ ಉಪವಿಭಾಗ ಪೊಲೀಸ್ ಅವರ ಸಹಯೋಗದೊಂದಿಗೆ ಆಯೋಜಿಸಿದ್ದ ರಸ್ತೆ ಸುರಕ್ಷತೆ ಕಾಲಿನಡಿಗೆ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಹೊಸಕೋಟೆ ಸ್ಟೇಡಿಯಂ ನಿಂದ ಐಬಿ ವೃತ್ತ, ಕೆಇಬಿ ರಸ್ತೆ, ಸೂಲಿಬೆಲೆ ರಸ್ತೆ ಮಾರ್ಗವಾಗಿ ವಿದ್ಯಾರ್ಥಿಗಳು ಅಧಿಕಾರಿಗಳು ಕಾಲ್ನಡಿಗೆ ಜಾಥ ನಡೆಸಿದರು.
ಪ್ರಾದೇಶಿಕ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ರಸ್ತೆ ಸುರಕ್ಷತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಈ ನಿಯಮಗಳ ಪಾಲನೆ ಮಾಡಬೇಕು ಕಳೆದ ಎರಡು ತಿಂಗಳಗಳಲ್ಲಿ ಬೈಕ್ ವೀಲಿಂಗ್ ಸಂಬಂಧ 16 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಡಿವೈಎಸ್ಪಿ ಅಣ್ಣ ಸಾಹೇಬ್ ಪಾಟೀಲ್ ತಿಳಿಸಿದರು.

ಪ್ರವರ್ತನ ದಕ್ಷಿಣ (ಅಪರ) ಸಾರಿಗೆ ಆಯುಕ್ತ ಮಲ್ಲಿಕಾರ್ಜುನ್ ಸಿ, ಮಾತನಾಡಿ ರಾಜ್ಯದಲ್ಲಿ ದಿನೇ ದಿನೇ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಸಾವು ನೋವು ಹೆಚ್ಚಾಗುತ್ತಿದೆ ಅಪಘಾತ ಪ್ರಮಾಣವನ್ನು 2030 ರ ವೇಳೆಗೆ 50%ರಷ್ಟು ಕಡಿಮೆ ಮಾಡುವ ಉದ್ದೇಶದಿಂದ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಚಾರ ಪೊಲೀಸ್ ಠಾಣೆ ಸಿಪಿಐ ಶ್ರೀಕಂಠಯ್ಯ, ಹೊಸಕೋಟೆ ಪೊಲೀಸ್ ಠಾಣೆ ಸಿಪಿಐ ಅಶೋಕ್, ಸಾರಿಗೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು,ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ
ಶಶಿಕುಮಾರ್ ವಿ









