ಖಚಿತ ಮಾಹಿತಿ ಮೇರೆಗೆ ಲಕ್ಷ್ಮಿಪುರ ಪುಲಗೂರು ಕೋಟೆ ರಸ್ತೆ ಮಾರ್ಗ ಕೊತ್ತಪೇಟೆ ಸಮೀಪವಿರುವ ಅಂಗಡಿಪ್ಪ ಕುಂಟೆ ಬಸ್ ನಿಲ್ದಾಣದ ಬಳಿ ಹೋಗಿ ನೋಡಲಾಗಿ ಅನುಮಾನಾಸ್ಪದವಾಗಿ ಇಬ್ಬರು ಯುವಕರು ಬಸ್ ನಿಲ್ದಾಣದಲ್ಲಿ ಕಂಡುಬಂದಿದ್ದು ಅವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ದಿಗುವಪಾಳ್ಯಂ, ರಾಮಸಮುದ್ರ ಮಂಡಲ, ಅನ್ನಮಯ್ಯ ಜಿಲ್ಲೆ, ಆಂಧ್ರಪ್ರದೇಶ ಇವರನ್ನು ಪರಿಶೀಲಿಸಲಾಗಿ ಅವರ ಬಳಿ ಸುಮಾರು ಒಂದುವರೆ ಲಕ್ಷ ಬೆಲೆಬಾಳುವ 1 ಕೆಜಿ 70 ಗ್ರಾಂ ಗಾಂಜಾ, ಡಿಜಿಟಲ್ ಮಾಪನ ಮತ್ತು ಆರೋಪಗಳಿಗೆ ಸಂಬಂಧಿಸಿದ TN 70 F 8529 ಸ್ಪ್ಲೆಂಡರ್ ಪ್ರೊ, ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಮಾನ್ಯ ಶ್ರೀ ನಿಖಿಲ್.ಬಿ ಐಪಿಎಸ್, ಪೊಲೀಸ್ ಅಧೀಕ್ಷಕರು ಕೋಲಾರ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ರವಿಶಂಕರ್ ಸಿ. ಆರ್ ಮತ್ತು ಶ್ರೀ H C ಜಗದೀಶ್ಹಾಗೂ ಶ್ರೀ ನಂದಕುಮಾರ್. ಪೊಲೀಸ್ ಉಪಾದೀಕ್ಷಕರು ಮುಳಬಾಗಿಲು ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಶಿವಕುಮಾರ್, ಗೌನಪಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರವರ ನೇತೃತ್ವದಲ್ಲಿ ಪಿಎಸ್ಐ ಯೋಗೇಶ್ ಕುಮಾರ್. ರಾಯಲ್ ಪಾಡು ಪೊಲೀಸ್ ಠಾಣೆ ಸಿಬ್ಬಂದಿಯವರಾದ ಚಲಪತಿ, ಸದಾಶಿವಯ್ಯ,ಹಾಗೂ ಸಂತೋಷ್ ಲಂಬಾಣಿ, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವರದಿ
ಶಶಿಕುಮಾರ್ ವಿ









