ಮಾನ್ಯ ಪ್ರದೀಪ್ ಗುಂಟಿ ಐಪಿಎಸ್ ಪೊಲೀಸ್ ಅಧೀಕ್ಷಕರು ಬೀದರ ಜಿಲ್ಲೆ ರವರ ನೇತೃತ್ವದಲ್ಲಿ ಬೀದರ ಜಿಲ್ಲೆಯಲ್ಲಿ ಕೆಲವು ವಾಹನ ಮಾಲೀಕರು ತಮ್ಮ ದ್ವಿಚಕ್ರ ವಾಹನಕ್ಕೆ ಕಂಪನಿಯಿಂದ ಅಳವಡಿಸಿದ ಸೈಲೆನ್ಸರಗಳನ್ನು ತೆಗೆದು ಕರ್ಕಶ ಶಬ್ದಗಳನ್ನುಂಟು ಮಾಡುವ ಸೈಲೆನ್ಸರಗಳನ್ನು ಅಳವಡಿಸಿ ಕರ್ಕಶವಾದ ಶಬ್ದ ಮಾಲಿನ್ಯ ಉಂಟುಮಾಡಿ ಸಾರ್ವಜನಿಕರಿಗೆ ಸಹಿಸಲಾರದಂತಹ ಯಾತನೆ ಕೊಡುತ್ತಿರುವದನ್ನು ಗಮನಿಸಿ ಅಂತಹ ಸುಮಾರು 143 ಬೈಕ್‌ಗಳಸೈಲೆನ್ಸರ್‌ಗಳನ್ನು ತೆಗೆದು ಅಂತಹ ವಾಹನಗಳಿಗೆ 1 ಲಕ್ಷ 30 ಸಾವಿರ ರೂ. ಫೈನ್ ಹಾಕಿ ಬೀದರದ ಅಂಬೇಡ್ಕರ್ ವೃತ್ತದಲ್ಲಿ ಆ 143 ವಾಹನಗಳ ಡಿಫೆಕ್ಟಿವ್ ಸೈಲೆನ್ಸರ್‌ಗಳನ್ನು ರೋಡ್ ರೋಲರ್ ಮುಖಾಂತರ ಧ್ವಂಸ ಕಾರ್ಯಚರಣೆ ನಡೆಸಲಾಯಿತು.

ಜಿಲ್ಲೆಯ ಚಾಲಕರಿಗೆ ಏಚ್ಚರಿಕೆ ಸಂಚಾರಿ ನಿಯಮಗಳನ್ನು ಪಾಲಿಸದೇ ತಮ್ಮ ವಾಹನಗಳಿಗೆ ಕರ್ಕಶವಾದ ಶಬ್ದವನ್ನುಂಟು ಮಾಡುವ ಡಿಫೆಕ್ಟಿವ್ ಸೈಲೆನ್ಸರ್‌ಗಳನ್ನು ಅಳವಡಿಸಿ ತೊಂದರೆ ಕೊಟ್ಟಲ್ಲಿ ರೋಡ್ ರೋಲರ್ ಕಾರ್ಯಚರಣೆಯು ಜಿಲ್ಲಾದಾದ್ಯಂತ ಮುಂದುವರೆಸಲಾಗುವುದು.
ಜಿಲ್ಲೆಯ ನಾಗರಿಕರು ತಪ್ಪದೇ ಸಂಚಾರಿ ನಿಯಮಗಳನ್ನು ಪಾಲಿಸಲು ಕೊರಲಾಗಿದೆ.









