ಗುಬ್ಬಲಾಳದ ಜೆ ಎಚ್ ಬಿ ಸಿ ಎಸ್ ಲೇಔಟ್ ನಲ್ಲಿನ ಮನೆ ಒಂದರಲ್ಲಿ ಡೋರ್ಲಾಕ್ ಓಪನ್ ಮಾಡಿ ಮನೆಯಲ್ಲಿದ್ದ ಸಿಸಿ ಕ್ಯಾಮೆರಾ ಕನೇಕ್ಷನ್ ತೆಗೆದು ಕೊಠಡಿಯ ಬೀರುನಲ್ಲಿದ್ದ ಚಿನ್ನ ಮತ್ತು ವಜ್ರದ ಆಭರಣಗಳು, ಬೆಳ್ಳಿಗೆ ವಸ್ತುಗಳು ಹಾಗೂ ಎರಡು ಮೊಬೈಲ್ ಫೋನ್ ಗಳನ್ನು ಕಳುವು ಆಗಿರುವ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಬೆನ್ನತ್ತಿದ ಪೊಲೀಸರು ತನಿಖೆಯನ್ನು ಕೈಗೊಂಡು
48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಗುಬ್ಬಲಾಳದ ಕರಿಷ್ಮಾ ಹಿಲ್ಸ್ ಬಳಿ ಓರ್ವ ವಿದೇಶಿ ವ್ಯಕ್ತಿಯನ್ನು ವಶಪಡಿಸಿಕೊಂಡು ವಿಚಾರಣೆಗೊಳಪಡಿಸಿದಾಗ ಈ ಪ್ರಕರಣದಲ್ಲಿ ಚಿನ್ನ ವಜ್ರಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ತಾನು ನಾಲ್ವರ ಸಹಚರ ಜೊತೆ ಕಳು ಮಾಡಿರುವುದಾಗಿ ಒಪ್ಪಿಕೊಂಡು ಶರಣಾಗಿದ್ದಾನೆ. ಮತ್ತು ಇತರ ನಾಲ್ವರ ಸಹಚರರ ಬಗ್ಗೆ ಕೂಡ ಮಾಹಿತಿ ನೀಡಿದ್ದಾನೆ
ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ನಂತರ ನ್ಯಾಯಲಯಕ್ಕೆ ಹಾಜರಿ ಪಡಿಸಿದರು ಘನ ನ್ಯಾಯಾಲಯವು
8 ದಿನಗಳ ಕಾಲ ಪೊಲೀಸರ ವಿಚಾರಣೆಗೆ ನೀಡಿದರು.
ಒಟ್ಟು 5 ಆರೋಪಿಗಳಿಂದ 502 ಗ್ರಾಂ ಚಿನ್ನ ವಜ್ರಭರಣ, 4.5 ಕೆಜಿ ಬೆಳ್ಳಿ ವಸ್ತುಗಳು 2 ಮೊಬೈಲ್ ಫೋನ್ ವಶಪಡಿಸಿ ಕೊಳ್ಳಲಾಯಿತು ಇವುಗಳ ಒಟ್ಟು ಮೌಲ್ಯ 50,00,000( ಐವತ್ತು ಲಕ್ಷ ರೂಪಾಯಿ)
ಕಾರ್ಯಚರಣೆಯು ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಲೋಕೇಶ್ .ಭ. ಜಗಲಾಸರ್ ಐ. ಪಿ. ಎಸ್. ರವರ ನೇತೃತ್ವದಲ್ಲಿ ಹಾಗೂ ಸುಬ್ರಮಣ್ಯಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್. ಎಸ್. ಬಿ. ರವರ ಉಸ್ತುವಾರಿಯಲ್ಲಿ ತಲಘಟ್ಟಪುರ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಜಗದೀಶ್ ಎನ್ ಹಾಗೂ ಇತರೆ ಅಧಿಕಾರಿ ಸಿಬ್ಬಂದಿ ವರ್ಗದವರು ಪ್ರಕರಣ ಪತ್ತೇ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.









