ಮಾನ್ಯ ಶ್ರೀ ಪ್ರದೀಪ್ ಗುಂಟಿ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಬೀದರ, ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಬೀದರ ನೂತನ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದ ಪತ್ತೆ ಕುರಿತು ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಬೀದರ ರವರ ಮುಂದಾಳತ್ವದಲ್ಲಿ ನೂತನ ನಗರ ಪೊಲೀಸ್ ಠಾಣೆಯ ಪಿ.ಐ ಶ್ರೀ ವಿಜಯಕುಮಾರ ರವರ ನೇತೃತ್ವದಲ್ಲಿ ಪಿಎಸ್‌ಐ ಶ್ರೀ ಪ್ರಭಾಕರ ಪಾಟೀಲ್, ಮತ್ತು ಸಿಬ್ಬಂದಿಯವರಾದ ಶ್ರೀ ಪ್ರಕಾಶ್, ಶ್ರಿ ಮಲ್ಲಿಕಾರ್ಜುನ, ಶ್ರೀ ನಿಂಗಪ್ಪ, ಶ್ರೀ ಅಲ್ಲಾಪುರ, ಮತ್ತು ಗಾಂಧಿಗಂಜ ಪೊಲೀಸ್ ಠಾಣೆಯ ಶ್ರೀ ನವೀನ, ಶ್ರೀ ಗಂಗಾಧರ ಮತ್ತು ಶ್ರೀ ಇಮ್ರಾನ್ ರವರನ್ನೊಳಗೊಂಡ ತಂಡವನ್ನು ರಚಿಸಿದ್ದು, ತಂಡವು ಸಿ.ಸಿ ಟಿ.ವಿ ಕಂಟ್ರೋಲ ಕಮಾಂಡ್ ಸೆಂಟರ್ ವಿಭಾಗದಲ್ಲಿನ ಸಿಸಿ ಕ್ಯಾಮರಾ ಫುಟೇಜ, ಪೊಲೀಸ್ ಬಾತ್ಮಿದಾರರಿಂದ ಪಡೆದ ಮಾಹಿತಿ ಆಧಾರದ ಮೇರಗೆ ಆರೋಪಿತರು ಮಹಾರಾಷ್ಟ್ರ ರಾಜ್ಯದ ಲಾತೂರ ಜಿಲ್ಲೆಯ ಉದಗೀರ ರೈಲ್ವೆ ಸ್ಟೇಷನ್ ಬಳಿ ಇರುವ ಮಾಹಿತಿಯಂತೆ ಮಹಾರಾಷ್ಟ್ರ ರಾಜ್ಯ ಪೊಲೀಸ್ ರ ಸಹಕಾರದೊಂದಿಗೆ ಆರೋಪಿತರಿಗೆ ವಶಕ್ಕೆ ಪಡೆದು ಅವರಿಂದ ಒಟ್ಟು ಅ:ಕಿ: 1,77,000=00 ರೂಪಾಯಿ ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿಯ ಒಡವೆಗಳನ್ನು ವಶ ಪಡಿಸಿಕೊಂಡು ಆರೋಪಿತರ ವಿರುದ್ದ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗಿದೆ.
ಅತೀ ಚಾಕ ಚಾಕತ್ಯೆಯಿಂದ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ, ಪತ್ತೆ ಕಾರ್ಯ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ.









