ಯಲಹಂಕ ಠಾಣಾಸರಹದ್ದಿನ ಕಟ್ಟಿಗೆನಹಳ್ಳಿಯಲ್ಲಿರುವ ಲೇಡಿಸ್ ಪಿಜಿಯಲ್ಲಿ ವಾಸವಿರುವ ಯುವತಿಯು, ಇದೇ ಮಾರ್ಚ್ ತಿಂಗಳ 26ನೇ ತಾರೀಖಿನಂದು ಸರ ಅಪಹರಣ ಪ್ರಕರಣ ದಾಖಲಿಸಿದ್ದರು. ಅದೇ ರಾತ್ರಿ ಆಪ್ತೆಯೊಂದಿಗೆ ಶಾಪಿಂಗ್ ನಿಂದ ಹಿಂತಿರುಗಿ ಬರುವಾಗ್ಗೆ ಎದುರುಗಡೆಯಿಂದ ಬಂದ ಅಪರಿಚಿತ, ಯುವತಿಯ ಕೊರಳಿನಲ್ಲಿದ್ದ 15 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಹೋಗಿರುತ್ತಾನೆ.
ವಿವಿಧ ಆಯಾಮಗಳ ತನಿಖೆಯಿಂದ ಮೂರೇ ದಿನದಲ್ಲಿ ಕಟ್ಟಿಗೆನಹಳ್ಳಿಯ ಮುಖ್ಯರಸ್ತೆಯಲ್ಲಿ ಆರೋಪಿಯನ್ನು ಸೆರೆಹಿಡಿಯಲಾಯಿತು. ಆರೋಪಿಯು ಆಂಧ್ರಪ್ರದೇಶದ ಮದನ್ಪಲ್ಲಿಯ ಪಾನ್ ಬ್ರೋಕರ್ ಅಂಗಡಿಯಲ್ಲಿ ಗಿರವಿ ಇಟ್ಟಿದ್ದ 15 ಗ್ರಾಂ ಚಿನ್ನದ ಸರವನ್ನು ಅದೇ ದಿನ ವಶಕ್ಕೆ ಪಡೆಯಲಾಯಿತು. ಇದರ ಮೌಲ್ಯ ಒಂದು ಲಕ್ಷದ ಇಪ್ಪತ್ತು ಸಾವಿರ ಎಂದು ಅಂದಾಜಿಸಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ವಿ.ಜೆ ಸಜೀತ್ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಹಾಗೂ ಯಲಹಂಕ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ನರಸಿಂಹಮೂರ್ತಿ ಪಿ, ಕೆ.ಎಸ್.ಪಿ.ಎಸ್ ಅವರ ನೇತೃತ್ವದಲ್ಲಿ ಯಲಹಂಕ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಎಂ.ಎಲ್ ಕೃಷ್ಣಮೂರ್ತಿ ಮತ್ತವರ ತಂಡ ಯಶಸ್ವಿಯಾಗಿ ಮುಗಿಸಿರುತ್ತಾರೆ.ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್









