ಮಾರತ್ತಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಯಮಲೂರಿನಲ್ಲಿ ವಾಸವಿರುವ ಪಿತ್ಯಾದುದಾರರು ದಿನಾಂಕ:15/04/2025 ರಂದು ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರು ದಿನಾಂಕ:20/03/2025 ರಂದು ಕಾಶಿ ಯಾತ್ರೆಗೆ ಹೋಗಿರುತ್ತಾರೆ. ದಿನಾಂಕ:27/03/2025 ರಂದು ವಾಪಸ್ ಮನೆಗೆ ಬಂದಿದ್ದು, ಮನೆಗೆ ಹಾಕಿರುವ ಬಾಗಿಲಿನ ಬೀಗವು ಭದ್ರವಾಗಿತ್ತು. ಆದರೆ, ಮನೆಯ ಕೊಠಡಿಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣಗಳು ಕಳುವಾಗಿರುತ್ತವೆ. ಈ ಕುರಿತು ಪಿರಾದುದಾರರ ಮಗಳು ಮತ್ತು ತಂಗಿ ಹಾಗೂ ತಂಗಿಯ ಮಗ ಈ ಮೂವರ ಮೇಲೆ ಅನುಮಾನವಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ದಿನಾಂಕ:18/04/2025 ರಂದು ಪಿರಾದುದಾರರ ಮಗಳನ್ನು ಠಾಣೆಗೆ ಕರೆಸಿ ವಿಚಾರಣೆಗೊಳಪಡಿಸಲಾಗಿ, ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾಳೆ, ಕಳವು ಮಾಡಿದ ಚಿನ್ನಾಭರಣಗಳ ಪೈಕಿ 30 ಗ್ರಾಂ ಚಿನ್ನಾಭರಣವನ್ನು ಠಾಣಾ ಸರಹದ್ದಿನ ಜ್ಯೂವೆಲರಿ ಅಂಗಡಿಯೊಂದರಲ್ಲಿ ಆಡಮಾನವಿಟ್ಟಿರುವುದಾಗಿ ತಿಳಿಸಿದ್ದು, ಉಳಿದ 228 ಗ್ರಾಂ ಚಿನ್ನಾಭರಣಗಳನ್ನು ಆಕೆಯು ವಾಸಿಸುವ ಮನೆಯಲ್ಲಿಟ್ಟಿರುವುದಾಗಿ ತಿಳಿಸಿರುತ್ತಾಳೆ.
ದಿನಾಂಕ:18/04/2025 ರಂದು ಅಡಮಾನವಿಟ್ಟಿದ್ದ ಜ್ಯೂವೆಲರಿ ಅಂಗಡಿಯಿಂದ 30 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಹಾಗೂ ಉಳಿದ ಚಿನ್ನಾಭರಣಗಳನ್ನು ಆಕೆಯು ವಾಸವಿರುವ ಕಗ್ಗದಾಸಪುರದ ವಾಸದ ಮನೆಯಿಂದ 228 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಈ ಪ್ರಕರಣದ ಆರೋಪಿತೆಯ ವಶದಿಂದ ಒಟ್ಟು 258 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 21,00,000/-(ಇಪ್ಪತ್ತೊಂದು ಲಕ್ಷ ರೂಪಾಯಿ).
ಆರೋಪಿತೆಗೆ ಠಾಣೆಯಲ್ಲಿ ನೋಟಿಸ್ ಜಾರಿ ಮಾಡಿ, ಬಿಡುಗಡೆ ಗೊಳಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು, ವೈಟ್ ಫೀಲ್ಡ್ ಡಾ:ಶಿವಕುಮಾರ್ ಗುಣಾರೇ, ಐಪಿಎಸ್ಸಹಾಯಕ ಪೊಲೀಸ್ ಆಯುಕ್ತರು, ಮಾರತ್ತಹಳ್ಳಿ ಉಪ ವಿಭಾಗ ಶ್ರೀಮತಿ.ಪ್ರಿಯದರ್ಶಿನಿ ಈಶ್ವರ್ ಸಾಣೇಕೊಪ್ಪ ರವರ ಮಾರ್ಗದರ್ಶನದಲ್ಲಿ ಮಾರತ್ತಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಅನಿಲ್ ಕುಮಾರ್ ಪಿ.ಎನ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿರವರ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.









