Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home National News

ಬೆಂಗಳೂರಿನಲ್ಲಿ ಸಿವಿಲ್ ಡಿಫೆನ್ಸ್ ಮತ್ತು ಅಗ್ನಿಶಾಮಕ ದಳದ ವತಿಯಿಂದ ಯುದ್ಧದ ತುರ್ತು ಸನ್ನಿವೇಶದ ಮಾಕ್ ಡ್ರಿಲ್ (ಅಣಕು ಪ್ರದರ್ಶನ)

CREDOPRESS MEDIA PVT LTD by CREDOPRESS MEDIA PVT LTD
May 7, 2025
in National News
0
ಬೆಂಗಳೂರಿನಲ್ಲಿ ಸಿವಿಲ್ ಡಿಫೆನ್ಸ್ ಮತ್ತು ಅಗ್ನಿಶಾಮಕ ದಳದ ವತಿಯಿಂದ ಯುದ್ಧದ ತುರ್ತು ಸನ್ನಿವೇಶದ ಮಾಕ್ ಡ್ರಿಲ್ (ಅಣಕು ಪ್ರದರ್ಶನ)
0
SHARES
40
VIEWS
Share on FacebookShare on Twitter

ಪಹಲ್ಗಾಮ್ ದಾಳಿಗೆ ತಿರುಗೇಟು ನೀಡಿದ ಭಾರತೀಯ ಸೇನೆಯ ಆಪರೇಶನ್ ಸಿಂಧೂರ್‌ಗೆ ನುಡಿವಂತ ಅಭಿನಂದನೆಗಳು ಹರಿದುಬರುತ್ತಿರುವ ಮಧ್ಯೆ, ಈ ಯುದ್ಧ ಸನ್ನಿವೇಶದ ಸಂದರ್ಭದಿಗಾಗಿ ನಾಗರಿಕರ ತುರ್ತು ಸನ್ನಾಹವನ್ನು ಪರಿಶೀಲಿಸಲು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಮೂರು ಪ್ರಮುಖ ಜಿಲ್ಲೆಗಳಲ್ಲಿ ಸಿವಿಲ್ ಡಿಫೆನ್ಸ್ ಮತ್ತು ಅಗ್ನಿಶಾಮಕ ದಳದ ಭಾರಿ ಮಾಕ್ ಡ್ರಿಲ್ (ಅಣಕು ಪ್ರದರ್ಶನ) ನಡೆಸಲಾಯಿತು.

https://www.facebook.com/share/v/19647sbV7p

ತುರ್ತು ಸಂದರ್ಭದಲ್ಲಿ ಯಾವ ರೀತಿ ರಿಯಾಕ್ಟ್ ಮಾಡಬೇಕು ಅನ್ನೋ ಮಾಕ್ ಡ್ರಿಲ್ ಮಾಡಲು ಕೇಂದ್ರ ಸರ್ಕಾರ ತಿಳಿಸಿದೆ. ಎಲ್ಲ ರಾಜ್ಯದಲ್ಲಿ ಮಾಕ್ ಡ್ರಿಲ್ ಮಾಡಲು ತಿಳಿಸಿದ್ದಾರೆ. ಅದೇ ರೀತಿ ಮಾಕ್ ಡ್ರಿಲ್ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಯಾವ ರೀತಿ ನಾಗರೀಕರನ್ನ ರಕ್ಷಿಸಬೇಕು‌. ನಾಗರೀಕರ ಜವಬ್ದಾರಿ ಏನು ಅನ್ನೋದ್ರ ಮಾಕ್ ಡ್ರಿಲ್ ನಡೆಯಿತು. ದೇಶದಾದ್ಯಂತ 244 ಜಿಲ್ಲೆಗಳನ್ನ ಕೇಂದ್ರ ಸರ್ಕಾರ ಗುರುತಿಸಿದೆ.

ರಾಜಾಜಿನಗರದಲ್ಲಿ ಸೈರನ್ ಡ್ರಿಲ್ – ಜನತೆ ಆತಂಕಪಡಬೇಡಿ:
ಬೆಂಗಳೂರಿನ ರಾಜಾಜಿನಗರ ಅಗ್ನಿಶಾಮಕ ಕಚೇರಿಯಲ್ಲಿನ ಮಾಕ್ ಡ್ರಿಲ್ ಮಧ್ಯಾಹ್ನ 3:58ರಿಂದ 4 ಗಂಟೆಯವರೆಗೆ ಸೈರನ್ ಮೊಳಗಿಸುವ ಮೂಲಕ ಪ್ರಾರಂಭವಾಯಿತು. ಈ ಸಮಯದಲ್ಲಿ ಜನತೆ ಯಾವುದೇ ಆತಂಕಪಡಬಾರದು ಎಂಬ ಸೂಚನೆ ಕೂಡ ನೀಡಲಾಯಿತು. ಈ ಡ್ರಿಲ್ ನ ಉದ್ದೇಶ – ಯುದ್ಧದಂತಹ ತುರ್ತು ಸಂದರ್ಭದಲ್ಲಾಗುವ ಸ್ಪಂದನೆ ಮತ್ತು ರಕ್ಷಣಾ ಕ್ರಮಗಳನ್ನು ಜನರಲ್ಲಿ ಅರಿವು ಮೂಡಿಸುವುದಾಗಿತ್ತು.

35 ಸ್ಥಳಗಳಲ್ಲಿ ಸೈರನ್, ಗಮನ ಸೆಳೆದ ಹಲಸೂರು ಡ್ರಿಲ್: ಬೆಂಗಳೂರು ನಗರದಲ್ಲಿ ಒಟ್ಟಾರೆ 35 ಕಡೆಗಳಲ್ಲಿ ಸೈರನ್ ಮೊಳಗಿಸಲಾಯಿತು. ಹಲಸೂರಿನ ಅಗ್ನಿಶಾಮಕ ಕಚೇರಿಯಲ್ಲಿ ನಡೆದ ಮಾಕ್ ಡ್ರಿಲ್ ವಿಶೇಷ ಗಮನ ಸೆಳೆದಿದ್ದು, ಕಟ್ಟಡದ ಮೇಲ್ಭಾಗದಲ್ಲಿ ಸಿಲುಕಿರುವವರ ರಕ್ಷಣೆಗೆ Bronto Skylift ವಾಹನದ ಮೂಲಕ ರಕ್ಷಣೆ ನಡೆಸುವ ಪ್ರದರ್ಶನ ಗಮನಾರ್ಹವಾಗಿತ್ತು.

ಗೃಹಸಚಿವ ಪರಮೇಶ್ವರ್‌ ಭೇಟಿ:
ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರು ಹಲಸೂರಿನಲ್ಲಿ ನಡೆದ ಮಾಕ್ ಡ್ರಿಲ್ ವೀಕ್ಷಿಸಿ, ‘ಭಾರತ ಸರ್ಕಾರವು ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ನಾಗರಿಕರು ಹೇಗೆ ಸ್ಪಂದಿಸಬೇಕು ಎಂಬುದರ ಅರಿವು ಮೂಡಿಸಲು ಈ ಮಾಕ್ ಡ್ರಿಲ್‌ಗಳನ್ನು ನಡೆಸುತ್ತಿದೆ. ಭಾರತದಲ್ಲಿ 244 ಜಿಲ್ಲೆಗಳಲ್ಲಿ ಇದು ನಡೆಯುತ್ತಿದೆ. ಅದರಲ್ಲಿ ಕರ್ನಾಟಕದ ಬೆಂಗಳೂರು, ಕಾರವಾರ ಮತ್ತು ರಾಯಚೂರು ಜಿಲ್ಲೆಗಳನ್ನೂ ಒಳಗೊಂಡಿದೆ’ ಎಂದು ತಿಳಿಸಿದ್ದಾರೆ.

ವಾಟರ್ ರೆಸ್ಕ್ಯೂ ಟೀಮ್‌ಗಳಿಂದ ಸಮುದ್ರ ರಕ್ಷಣಾ ಪ್ರದರ್ಶನ:
ವಾಯು ದಾಳಿ ಅಥವಾ ಪ್ರಾಕೃತಿಕ ಆಪತ್ತುಗಳ ಸಂದರ್ಭದಲ್ಲಿ ಸಮುದ್ರ ತೀರದಲ್ಲಿ ಸಿಲುಕುವ ಸಾರ್ವಜನಿಕರ ರಕ್ಷಣೆಯ ಕುರಿತು ವಾಟರ್ ರೆಸ್ಕ್ಯೂ ತಂಡದಿಂದ (Water Rescue Team) ಕೆಲವು ಮಾದರಿಯ ಪ್ರದರ್ಶನವನ್ನೂ ನಡೆಸಿತು. ಬೆಂಕಿಗೆ ಸಿಲುಕಿರುವ ಕಟ್ಟಡ, ಗಾಯಾಳುಗಳ ರಕ್ಷಣೆ, ಆಂಬ್ಯುಲೆನ್ಸ್ ಸೇವೆಗಳ ಲೈವ್ ಡೆಮೋ ನಿಜವಾದ ಪರಿಸ್ಥಿತಿಯ ಅನುಭವವನ್ನು ನೀಡಿತು.

ಮಾಕ್ ಡ್ರಿಲ್‌ನಲ್ಲಿ ಪರಮೇಶ್ವರ್ ಭಾಗಿ:
ಅಣಕು ಪ್ರದರ್ಶನ ವೀಕ್ಷಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಅಮಾಯಕ ಜನರನ್ನು ಮಕ್ಕಳನ್ನು ಕೊಂದಿರುವುದನ್ನು ನೆನಪಿಸಿ ಕೊಂಡರೆ. ಸಿಟ್ಟು ಬಾರದೇ ಇರಲ್ಲ. ವಿಶೇಷವಾಗಿ ಗಡಿ ಕಾಯುವವರು ಇವೆಲ್ಲವನ್ನೂ ಸಹಿಸಿ ಕೊಂಡಿದ್ದರು. ಭಾರತ ಸರ್ಕಾರ ರಾತ್ರಿ 1.30ಕ್ಕೆ ಏರ್ ಸ್ಟ್ರೈಕ್ ಮಾಡಿದ್ದಾರೆ. ಎಲ್ಲೆಲ್ಲಿ ಟೆರರಿಸ್ಟ್ ಕ್ಯಾಂಪ್ ಇತ್ತು ಅದನ್ನ ಪತ್ತೆ ಹಚ್ಚುವ ಕೆಲಸ ಮಾಡಿ ದಾಳಿ ಮಾಡಿದ್ದಾರೆ. ಎಷ್ಟು ಜನ ಸತ್ತರು ಅನ್ನೋ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಯುದ್ಧವಾದ ಛಾಯೆ ಇಡೀ ಭಾರತ ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ ನಾಗರೀಕರಿಗೆ ಅರಿವು ಮೂಡಿಸಬೇಕಿದೆ ಎಂದರು.

    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    Bengaluru City Police

    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    July 24, 2026
    4 ಆರೋಪಿಗಳನ್ನು ಬಂಧಿಸಿ, 70 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿ
    Bengaluru City Police

    4 ಆರೋಪಿಗಳನ್ನು ಬಂಧಿಸಿ, 70 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿ

    July 19, 2026
    ತುಮಕೂರು ನಗರದಲ್ಲಿ ಗಾಂಜಾ ಮತ್ತು ಹೈಡ್ರೋವೀಡ್ ಮಾರಾಟ ಮಾಡುತ್ತಿದ್ದ ಖದೀಮರ ಗ್ಯಾಂಗ್‌ಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ.
    CREDOPRESS

    ತುಮಕೂರು ನಗರದಲ್ಲಿ ಗಾಂಜಾ ಮತ್ತು ಹೈಡ್ರೋವೀಡ್ ಮಾರಾಟ ಮಾಡುತ್ತಿದ್ದ ಖದೀಮರ ಗ್ಯಾಂಗ್‌ಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ.

    July 16, 2026
    Next Post
    Enhanced Security Measures at Key Railway Stations in SBC Division by RPF and GRP

    Enhanced Security Measures at Key Railway Stations in SBC Division by RPF and GRP

    ಮನೆ ಕನ್ನ ಕಳವು ಮಾಡಿದ್ದ ಓರ್ವ ವ್ಯಕ್ತಿಯ ಬಂಧನ.258 ಗ್ರಾಂ ಚಿನ್ನಾಭರಣಗಳ ವಶ. ಮೌಲ್ಯ * 24.51 ಲಕ್ಷ.

    ಮನೆ ಕನ್ನ ಕಳವು ಮಾಡಿದ್ದ ಓರ್ವ ವ್ಯಕ್ತಿಯ ಬಂಧನ.258 ಗ್ರಾಂ ಚಿನ್ನಾಭರಣಗಳ ವಶ. ಮೌಲ್ಯ * 24.51 ಲಕ್ಷ.

    ಬೆಂಗಳೂರು ಉಗ್ರರ ಹಾಗೂ ಸೈಬ‌ರ್ ವಂಚಕರ ಟಾರ್ಗೆಟ್ ನಲ್ಲಿದೆ : ಬೆಂಗಳೂರು ನಗರ ಪೊಲೀಸ್ ಕಮಿಷನರ್ ಎಚ್ಚರಿಕೆ

    ಬೆಂಗಳೂರು ಉಗ್ರರ ಹಾಗೂ ಸೈಬ‌ರ್ ವಂಚಕರ ಟಾರ್ಗೆಟ್ ನಲ್ಲಿದೆ : ಬೆಂಗಳೂರು ನಗರ ಪೊಲೀಸ್ ಕಮಿಷನರ್ ಎಚ್ಚರಿಕೆ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    Adugodi Police B Dayananada Begur Police Belagavi Police Bengaluru City Police Bidar District Police Bidar Police Bommanahalli Police ccb CCB Police Cen Police CM Siddaramaiah Credo Press CREDOPRESS MEDIA Cyber Crime Davangere police drugs news Electronic city Police Hennur Police Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು
    • ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    • ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved