ಸಮಾಜವು ಶಾಂತಯುತವಾಗಿ ಮತ್ತು ಅಪರಾಧಗಳನ್ನು ತಡೆಯಲು ರೌಢಿ ಜನರ ಮೇಲೆ ನಿಗಾ ವಹಿಸುವುದು ಮತ್ತು ಯಾವುದೇ ರೀತಿಯ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಜರುಗದಂತೆ ಎಮ್.ಓ.ಬಿ ಜನರ ಮೇಲೆ ನಿಗಾ ವಹಿಸುವುದು ಅತೀ ಅವಶ್ಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ಬೀದರ. ರವರು ಜಿಲ್ಲೆಯನ್ನು ಅಪರಾಧ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯಲ್ಲಿರುವ ರೌಡಿ ಮತ್ತು ಎಮ್.ಓ.ಬಿ ಜನರ ಮೇಲೆ ನಿಗಾ ವಹಿಸುವ ಸಲುವಾಗಿ ಬೀದರ ಜಿಲ್ಲಾ ಪೊಲೀಸ್ ಕಛೇರಿ ಕವಾಯತು ಮೈದಾನದಲ್ಲಿ ಈ ಮೊದಲು ಸೋಮವಾರದಂದು ಕರೆದ ರೌಡಿ ಪರೇಡದಲ್ಲಿ ಗೈರ ಹಾಜರಿದ್ದ ರೌಡಿಗಳನ್ನು ಇಂದು ಕರೆದು ಅವರ ಕವಾಯತು ನಡೆಸಿ, ಯಾರಾದರೂ ಸಮಾಜ ಘಾತಕ, ಅಪರಾಧಿಕ ಚಟುವಟಿಕೆಯಲ್ಲಿ ಭಾಗಿಯಾದಲ್ಲಿ ಅಂತವರಿಗೆ ಕಟ್ಟೆಚ್ಚರಿಸಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ಮುಕ್ತ ಮತ್ತು ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ.









