ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿ ಒಂದು ದೊರೆಯುತ್ತದೆ
ಮಾಹಿತಿಯಲ್ಲಿ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಚ್ಯುತ ನಗರ ಮನೆ ಒಂದರಲ್ಲಿ ಇಬ್ಬರು ವಿದೇಶಿ ವ್ಯಕ್ತಿಗಳು ವಾಸವಾಗಿದ್ದು ಅವರುಗಳು ನಿಷೇಧಿತ ಮಾದಕ ವಸ್ತುಗಳಾದ ಎಂ ಡಿ ಎಂ ಎ ಕ್ರಿಸ್ಟಲ್ ಅನ್ನು ಸ್ಥಳೀಯ ಗಿರಾಕಿಗಳಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಐಟಿ ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿರುತ್ತಾರೆಂದು ತಿಳಿಸಿರುತ್ತಾರೆ
ಈ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದಲ್ಲಿ ಎನ್ ಡಿ ಪಿ ಎಸ್ ಕಾಯಿದೆಯ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿತರ ಸ್ಥಳಕ್ಕೆ ಭೇಟಿ ನೀಡಿ ಸಿ ಸಿ ಬಿ ಯ ಪೊಲೀಸರು ದಾಳಿಯನ್ನು ಮಾಡಿರುತ್ತಾರೆ
ಈ ಪ್ರಕರಣದಿಂದ ಓರ್ವ ವಿದೇಶಿ ವ್ಯಕ್ತಿಯನ್ನು ವಶಕ್ಕೆ ಪಡೆದು ಮತ್ತೊಬ್ಬ ವಿದೇಶ ವ್ಯಕ್ತಿಯು ತಲೆಮರೆಸಿಕೊಂಡಿರುತ್ತಾನೆ
ಆರೋಪಿತರಿಂದ ನಿಷೇಧಿತ ಮಾದಕ ವಸ್ತು ಒಂದು ಕೆಜಿ 485 ಗ್ರಾಂ ಬಿಳಿ ಬಣ್ಣದ ಎಂಡಿಎ ಕ್ರಿಸ್ಟಲ್ ಮತ್ತು ಒಂದು ಕೆಜಿ 100 ಗ್ರಾಂ ಬ್ರೌನ್ ಕಲರ್ ಕ್ರಿಸ್ಟಲ್ ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಐಫೋನ್ ಒಂದು ದ್ವಿಚಕ್ರವಾಹನ ಎಲೆಕ್ಟ್ರಿಕ್ ವೇಯಿಂಗ್ ಮಷೀನ್ ನನ್ನು ವಶಪಡಿಸಿಕೊಂಡಿರುತ್ತಾರೆ
ಈ ಪ್ರಕರಣದಿಂದ ಒಟ್ಟು ನಾಲ್ಕು ಕೋಟಿ ರೂಪಾಯಿಯ ಮಾದಕ ವಸ್ತುಗಳನ್ನು ಸಿಸಿಬಿಯ ನಿಗ್ರಹದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ರವರು ವಶಪಡಿಸಿಕೊಂಡು ವಲ್ಲಿ ಯಶಸ್ವಿಯಾಗಿರುತ್ತಾರೆ
ವರದಿ
ಶಶಿಕುಮಾರ್ ವಿ









