ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎ ಇ ಸಿ ಎಸ್ ಲೇಔಟ್ ನಲ್ಲಿ ವಾಸವಿರುವ ಪಿರಿಯಾದುದಾರರು ದೂರನ್ನು ಸಲ್ಲಿಸಿದ್ದು ದೂರಿನಲ್ಲಿ ಕುಟುಂಬ ಸಮೇತ ಚೆನ್ನೈಗೆ ಹೋಗಿ ಮನೆಗೆ ವಾಪಸ್ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಕಿಟಕಿಯ ಗ್ರಿಲ್ ಮುರಿದು ಕೊಠಡಿಯ ಬೀರಿನಲ್ಲಿ ಇಟ್ಟಿದ್ದ ಮೂರು ಲಕ್ಷ ನಗದು ಮತ್ತು ಚಿನ್ನಾಭರಣಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿರುತ್ತಾರೆ
ಈ ಪ್ರಕರಣವನ್ನು ದಾಖಲಿಸಿದ ಎಚ್ಎಎಲ್ ಪೊಲೀಸರುವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿಯನ್ನು ಕಲೆಹಾಕಿ ಶಿಕಾರಿಪಾಳ್ಯದ ಆಟೋ ನಿಲ್ದಾಣದ ಬಳಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗಳ ಪಡಿಸಲಾಗಿ ಈ ಪ್ರಕರಣದಲ್ಲಿ ಕಳುವು ಮಾಡಿರುವುದಾಗಿ ಆರೋಪಿಯು ತಪ್ಪೊಪ್ಪಿ ಕೊಂಡಿರುತ್ತಾನೆ
ಸುಧೀರ್ಘವಾಗಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ ಎಚ್ಎಎಲ್ ಪೊಲೀಸರು ಇಬ್ಬರು ಸಹಚರರೊಂದಿಗೆ ಸೇರಿ ಈ ಕೃತ್ಯ ಎಸಗಿರುವುದಾಗಿ ಮತ್ತು ಅವರುಗಳ ಬಗ್ಗೆ ಮಾಹಿತಿಯನ್ನು ಆರೋಪಿಯು ನೀಡಿರುತ್ತಾನೆ
ಅದೇ ದಿನ ತಮಿಳುನಾಡಿನ ತಿರುವರುರು ವಾಸವಿದ್ದ ಸಹಚರರಿಬ್ಬರ ವಾಸದ ಮನೆಯಿಂದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿ ಈ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿರುತ್ತಾರೆ
ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿತರ ವಾಸದ ಮನೆಯಿಂದ 278 ಗ್ರಾಂ ಚಿನ್ನಾಭರಣ ಮತ್ತು ಆತನ ಸ್ನೇಹಿತನಿಗೆ ನೀಡಿದ್ದ 172 ಗ್ರಾಂಚಿನ್ನಾಭರಣಗಳನ್ನು ಎಚ್ಎಎಲ್ ಪೊಲೀಸರು ವಶಪಡಿಸಿಕೊಂಡರು
ಈ ಪ್ರಕರಣದ ಮೂವರು ಆರೋಪಿಗಳ ಬಂಧನದಿಂದ 50 ಲಕ್ಷ ರೂಪಾಯಿ ಮೌಲ್ಯದ ಒಟ್ಟು 550 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ವೈಟ್ ಫೀಲ್ಡ್ ಡಾಕ್ಟರ್ ಶಿವಕುಮಾರ್, ಗುಣಾರೆ ಐಪಿಎಸ್, ಸಹಾಯಕ ಪೊಲೀಸ್ ಆಯುಕ್ತರು, ಮಾರತಳ್ಳಿ ಉಪ ವಿಭಾಗದ ಪ್ರಿಯದರ್ಶಿನಿ ಈಶ್ವರ್ ಸಾಣೆ ಕೊಪ್ಪ ರವರ ಮಾರ್ಗದರ್ಶನದಲ್ಲಿ ಎಚ್ಎಎಲ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಜವೃದ್ಧಿನ್ ಎಂಎಸ್ಹಾಗೂ ಸಿಬ್ಬಂದಿಯವರ ತಂಡ ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









