ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಸರಹದ್ದಿನ ಬೆಟ್ಟದಾಸನಪುರ ನಿವಾಸಿಯಾದ ಪಿರಿಯಾದುದಾರರು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದು ಇರಿಯಾದುದಾರರು ಮನೆಯ ಮುಂಬಾಗಿಲನ್ನು ತೆರೆದು ಎರಡನೇ ಮಹಾಯುಡಿಯ ಮೇಲೆ ಬಟ್ಟೆಗಳನ್ನು ಒಣಗಿಸುವ ಸಲುವಾಗಿ ಹೋಗಿದ್ದು ವಾಪಸ್ ಬಂದು ನೋಡಲಾಗಿ ಯಾರೋ ಅಪರಿಚಿತರು ಮನೆಯಲ್ಲಿಟ್ಟಿದ್ದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಓಡಿಹೋಗಿರುತ್ತಾನೆ.
ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮೈಲಸಂದ್ರದ ಗ್ರಾಮದಲ್ಲಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ವಿಳಪಡಿಸಿ ಆ ವ್ಯಕ್ತಿ ಕಾನೂನು ಸಂಘರ್ಷ ಕೊಳಗಾದ ಬಾಲಕನೊಂದಿಗೆ ಸೇರಿಕೊಂಡು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ
ಆರೋಪಿಯ ವಶದಲ್ಲಿದ್ದ ಒಂದು ದ್ವಿಚಕ್ರ ವನ್ನು ಪರಿಶೀಲಿಸಿದಾಗ ಡಿಕ್ಕಿಯಲ್ಲಿದ್ದ 550 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು
ತನಿಖೆಯನ್ನು ಮುಂದುವರಿಸಿ ಆರೋಪಿಯಿಂದ ಹುಟ್ಟು 188 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ
16 ಲಕ್ಷ ಮೌಲ್ಯದ 188 ಗ್ರಾಂ ಚಿನ್ನಾಭರಣ 550 ಗ್ರಾಂ ಬೆಳ್ಳಿಯ ವಸ್ತುಗಳು ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿತನಿಂದ ವಶಪಡಿಸಿಕೊಂಡಿರುತ್ತಾರೆ

ಈ ಪ್ರಕರಣದ ಆರೋಪಿಯ ಬಂದನದಿಂದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಏಳು ಮನೆ ಕಳವು ಪ್ರಕರಣ ಮತ್ತು ಹೆಬ್ಬಗೋಡಿ ಪೊಲೀಸ್ ಠಾಣೆಯ ಎರಡು ಮನೆ ಕಳವು ಪ್ರಕರಣ ಒಟ್ಟು 9 ಪ್ರಕರಣಗಳು ಪತ್ತೆ ಆಗಿರುತ್ತವೆ
ಈ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರದ ಸಾರ ಫಾತಿಮಾ ಐಪಿಎಸ್ರವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಕೆಎಮ್ ಸತೀಶ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನವೀನ್ ಜಿಎಂ ಹಾಗೂ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









