ವಿಶ್ವ ಧೂಮಪಾನ ನಿಷೇಧ ದಿನ ಮೇ 31 2025ರ ಪ್ರಯುಕ್ತ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಹಾಗೂ ತಂಬಾಕು ನಿಯಂತ್ರಣ ಕಾನೂನುಗಳ ಪಾಲನೆಯನ್ನು ಖಾತ್ರಿಪಡಿಸಲು ಬೆಂಗಳೂರು ನಗರ ಪೊಲೀಸ್ ಇಲಾಖೆ ನಗರಾದ್ಯಂತ ಜಾಗೃತಿ ಮತ್ತು ಕಾನೂನು ಜಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ
ಮೇ 27 ರಿಂದ ಜೂನ್ ಎರಡು 2025 ರವರಿಗೆ ಪೋಲಿಸ್ ಇಲಾಖೆ COTPA, 2003(ಸಿಗರೇಟ್ ಗಳು ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ) ಎನ್ನು ದೃಢವಾಗಿ ಅನುಷ್ಠಾನಗೊಳಿಸಲು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು, ಅಪ್ರಾಪ್ತ ರಿಗೆ ತಂಬಾಕು ಮಾರಾಟ ಮಾಡುವುದು ಹಾಗೂ ಶಿಕ್ಷಣ ಸಂಸ್ಥೆಗಳ ಬಳಿ ತಂಬಾಕು ಮಾರಾಟ ಮಾಡುವಂತಹ ಉಲ್ಲಂಘನೆಗಳ ವಿರುದ್ಧ ಪೊಲೀಸರು ತೀವ್ರ ನಿಗಾ ವಹಿಸಿ ಕಾರ್ಯಚರಣೆ ನಡೆಸಲಿದ್ದಾರೆ
ಇ-ಸಿಗರೇಟ್ ಮತ್ತು ವೇಪಿಂಗ್ ಸಾಧನಗಳನ್ನು ಒಳಗೊಂಡ ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್ ನಿಷೇಧದ ಅನುಷ್ಠಾನಕ್ಕೆ ವಿಶೇಷ ಗಮನ ನೀಡಲಾಗುತ್ತಿದ್ದು. ಮಾಲ್ಗಳು ಕಾಫಿ ಬಾರ್ ಗಳು ಮತ್ತು ಅಂಗಡಿಗಳಲ್ಲಿ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಲಾಗುವುದು
ಕಾನೂನುಗಳ ಪ್ರಕಾರ ನಿಷೇಧಿತ ವಾಗಿರುವ ಹುಕ್ಕ ಬಾರ್ ಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಂಡಿರುವ ಜೊತೆಯಲ್ಲಿಯೇ ಇಂತಹ ಅಕ್ರಮ ಸ್ಥಳಗಳನ್ನು ಪತ್ತೆ ಮಾಡಿ ತೀವ್ರ ತಪಾಸಣೆ ನಡೆಸಲಾಗುವುದು
ಬಿಬಿಎಂಪಿಯ ಸಹಕಾರದಲ್ಲಿ ತಂಬಾಕು ವ್ಯಾಪಾರಿಗಳು ಲೈಸೆನ್ಸ್ ಹೊಂದಿರುವುದು ಕಡ್ಡಾಯವೆಂಬ ಜಾಗೃತಿಯನ್ನು ಮೂಡಿಸಲು ವ್ಯಾಪಾರಿಕ ಪ್ರದೇಶಗಳಲ್ಲಿ ಹೋಲಿಸಿ ಅಧಿಕಾರಿಗಳು ಬಿಬಿಎಂಪಿ ಅಧಿಕಾರಿಗಳ ಸಹಯೋಗದೊಂದಿಗೆ ತಂಬಾಕು ಮಾರಾಟದ ಲೈಸೆನ್ಸ್ ಪಡೆಯಬೇಕಾದ ಅಗತ್ಯತೆ ಮತ್ತು ಪ್ರತಿಕ್ರಿಯೆಯ ಬಗ್ಗೆ ಮಾರ್ಗದರ್ಶನ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ
2024 ರಿಂದ ಈ ಸಾಲಿನ ಏಪ್ರಿಲ್ ಅವರಿಗೆ ಬೆಂಗಳೂರು ನಗರ ಪೊಲೀಸ್ ಇಲಾಖೆಯು 57130 COPTA ಕಾಯ್ದೆಯ ಪ್ರಕರಣಗಳನ್ನು ದಾಖಲಿಸಿ 80 ಲಕ್ಷ ದಂಡ ವಸೂಲಿ ಮಾಡಿರುವುದು ಸಾರ್ವಜನಿಕ ಆರೋಗ್ಯದ ಕುರಿತು ಪೊಲೀಸರ ನಿರಂತರ ಬದ್ಧತೆಯ ಸಂಕೇತವಾಗಿದೆ.
ವರದಿ
ಶಶಿಕುಮಾರ್ ವಿ









