ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ಸರಹದ್ದಿನ ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದಲ್ಲಿರುವ ಕಂಪನಿಯೊಂದರಲ್ಲಿ ಸೀನಿಯರ್ ಡೈರೆಕ್ಟರ್ ಆಗಿ ಕೆಲಸ ಮಾಡಿಕೊಂಡಿರುವ ಪಿರಿಯಾದುದಾರರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ ಈ ದೂರಿನಲ್ಲಿ ಮೂರು ವರ್ಷಗಳಿಂದ ಕಂಪನಿಯಲ್ಲಿ ಸ್ಟೋರ್ ರೂಮ್ ಇಂಚಾರ್ಜ್ ಆಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯು 56 ಲ್ಯಾಪ್ಟಾಪ್ಗಳು ಹಾಗೂ 16 ಐಫೋನ್ ಗಳು ಕಳುವು ಮಾಡಿರುವುದಾಗಿ ದೂರು ಸಲ್ಲಿಸಿರುತ್ತಾರೆ ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ
ಪ್ರಕರಣ ತನಿಖೆಯನ್ನು ಮುಂದುವರಿಸಿದ ಪೊಲೀಸರು ಖಚಿತ ಮಾಹಿತಿಯನ್ನು ಆದರಿಸಿ ಕಳ್ಳತನ ಮಾಡಿದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗಳು ಪಡಿಸಿ ಆರೋಪಿ ಕಳ್ಳತನ ಮಾಡಿರುವುದು ತಪ್ಪು ಒಪ್ಪಿಕೊಂಡಿರುತ್ತಾನೆ
ಆನ್ಲೈನ್ ಬೆಟ್ಟಿಂಗ್ ಆಟವಾಡಿ ಹಣವನ್ನು ಕಳೆದುಕೊಂಡು ಸಾಲ ಮಾಡಿಕೊಂಡಿರುವುದಾಗಿ ಈ ಕಳ್ಳತನ ಮಾಡಿರುವುದು ಎಂದು ಆರೋಪಿ ತಿಳಿಸಿರುತ್ತಾನೆ
ಒಟ್ಟಾರೆ ಈ ಆರೋಪಿಯಿಂದ 19 ಲಕ್ಷಬೆಲೆಬಾಳುವ 30 ಎಚ್ಪಿಕಂಪನಿಯ ಲ್ಯಾಪ್ಟಾಪ್ಗಳು ಐದು ಐಫೋನ್ ಗಳನ್ನು ವಶಪಡಿಸಿ ಕೊಂಡ ಪರಪ್ಪನ ಅಗ್ರಹಾರ ಪೊಲೀಸರು
ಈ ಕಾರ್ಯಚರಣೆಯನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರದ ಸಾರಾ ಫಾತಿಮಾ ರವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಸತೀಶ್ ಆರ್ ರವರ ನೇತೃತ್ವದಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಬಿ ಎಸ್ ಹಾಗೂ ಅಧಿಕಾರಿಗಳ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









