ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನದಂತೆ, ಕರ್ನಾಟಕ ಸರ್ಕಾರವು ಪೊಲೀಸ್ ಇಲಾಖೆಯು ಪೊಲೀಸ್ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅವರ ಕುಂದುಕೊರತೆಗಳನ್ನು ಪರಿಹರಿಸಲು ಪ್ರಯತ್ನ, ಜನಸ್ನೇಹಿ ಪೊಲೀಸರಾಗಿ ಕೆಲಸ, ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯ ನಡುವೆ ವಿಶ್ವಾಸ ವೃದ್ಧಿಸಲು, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಪೊಲೀಸ್ ಸಿಬ್ಬಂದಿಯ ಗಮನಕ್ಕೆ ತರಲು ಮತ್ತು ಪರಿಹಾರ ಕಂಡುಕೊಳ್ಳಲು ಮನೆ ಮನೆಗೆ ಪೊಲೀಸ್ ಯೋಜನೆಯನ್ನು ಜಾರಿಗೆ ಬಂದಿರುತ್ತದೆ.
ಈ ಯೋಜನೆಯನ್ನು ಪರಿಣಾಕಮಾರಿಯಾಗಿ ಸಾರ್ವಜನಿಕರಲ್ಲಿ ತಲುಪಿಸಲು ಶ್ರೀ ಶ್ರೀನಿವಾಸ ಅಲ್ಲಾಪುರೆ, ಸಿ.ಪಿ.ಐ ಚಿಟಗುಪ್ಪಾ ವೃತ್ತ ರವರು ಚಿಟಗುಪ್ಪಾ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಬಸಲಿಂಗಪ್ಪಾ, ಮತ್ತು ಠಾಣೆಯ ಸಿಬ್ಬಂದಿ ರವರೊಂದಿಗೆ ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಭಿತ್ತಿ ಪತ್ರವನ್ನು ಹಂಚುವ ಮೂಲಕ ಅರಿವು ಮೂಡಿಸುತ್ತಿದ್ದಾರೆ.
ಮನೆ ಮನೆಗೆ ಪೊಲೀಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಶ್ರಮಿಸುತ್ತಿರುವ ಪೊಲೀಸ್ ಅಧೀಕಾರಿ ಮತ್ತು ಸಿಬ್ಬಂದಿ ರವರ ಕಾರ್ಯಕ್ಕೆ ಶ್ಲಾಘಿಸಿ ಸಾರ್ವಜನಿಕರು ಈ ಯೋಜನೆಯ ಅನುಷ್ಠಾನಕ್ಕೆ ಸಹಕರಿಸಲು ಕೊರಲಾಗಿದೆ.









