ವಿದೇಶಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಫಾರಿನ್ ಪೋಸ್ಟ್ ಮೂಲಕ ಬೆಂಗಳೂರಿಗೆ ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ನಿಗ್ರಹದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಭಾರತೀಯ ಅಂಚೆ ಪಾರ್ಸೆಲ್ ಗಳಲ್ಲಿದ್ದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳಾದ ಕುಕೇನ್, ಎಂಡಿ ಎಂಎ ಕ್ರಿಸ್ಟಲ್, ಎಕ್ಸ್ ಟಿ ಸಿ ಪಿಲ್ಸ್, ಹಾಗೂ ಹೈಡ್ರೋ ಗಾಂಜಾವನ್ನು ವಶಪಡಿಸಿ ಕೊಂಡಿದ್ದು ಇವುಗಳ ಒಟ್ಟು ಮೌಲ್ಯ ೬ಲಕ್ಷಗಳಾಗಿರುತ್ತದೆ
ಈ ಕುರಿತು ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಾರ್ಸೆಲ್ ಗಳನ್ನು ಬುಕ್ ಮಾಡಿದ್ದ ವ್ಯಕ್ತಿಗಳ ಬಗ್ಗೆ ಪತ್ತೆ ಕಾರ್ಯ ಮುಂದುವರೆದಿರುತ್ತದೆ
ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಧಿಕೃತ ಪಾಸ್ಪೋರ್ಟ್ ಮತ್ತು ವಿಸ ಇಲ್ಲದೆ ವಾಸ ಮಾಡಿಕೊಂಡಿದ್ದು ಡ್ರಗ್ ಪೆಡ್ಲಿಂಗ್ ನಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ವಿದೇಶಿ ಪ್ರಜೆಗಳ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿ 9 ವಿದೇಶಿ ಪ್ರಜೆಗಳನ್ನು ಬಂಧಿಸಿರುತ್ತಾರೆ.
ವಿಶೇಷ ಕಾರ್ಯಾಚರಣೆಯಲ್ಲಿ ವಿದೇಶಿಯರು ವಿವಿಧ ವೀಸಾ ಗಳ ಅಡಿಯಲ್ಲಿ ಭಾರತ ದೇಶಕ್ಕೆ ಬಂದು ವೀಸಾ ಅವಧಿ ಮುಗಿದಿದ್ದರೂ ಸಹ ಬೆಂಗಳೂರಿನಲ್ಲಿ ನೆಲೆಸಿದ 9 ವಿದೇಶಿ ಪ್ರಜೆಗಳನ್ನು ಪತ್ತೆ ಮಾಡಿ ಡಿಟೆನ್ಶನ್ ಸೆಂಟರ್ಗೆ ಬಿಡಲಾಗಿದ್ದು ಅವರಲ್ಲಿ ನಾಲ್ಕು ಜನ ನೈಜೀರಿಯಾ ದೇಶದವರಾಗಿದ್ದು, ಓರ್ವ ಸುಡಾನ್ ದೇಶದವನಾಗಿದ್ದು ಓರ್ವ ಕಾಂಗೋ ದೇಶದವನಾಗಿದ್ದು, ಹಾಗೂ ಇಬ್ಬರು ಘಾನ ದೇಶದ ಪ್ರಜೆಗಳಾಗಿರುತ್ತಾರೆ
ಮಾದಕ ವಸ್ತುಗಳ ವಿರುದ್ಧದ ಹೋರಾಟದ ಭಾಗವಾಗಿ ಬೆಂಗಳೂರು ನಗರ ಪೊಲೀಸ್ ಘಟಕದ ನೇತೃತ್ವದಲ್ಲಿ NCB , ವಿದೇಶಿಯರ ನೋಂದಣಿ ಇಲಾಖೆ (ಆರ್ ಆರ್ ಓ), ಸಾಮಾಜಿಕ ಶಿಕ್ಷಣ ಇಲಾಖೆ, ಕಾನೂನು ಮತ್ತು ಅಭಿಯೋಗ ಇಲಾಖೆ, ಶಿಕ್ಷಣ, ಕಂದಾಯ, ಆರೋಗ್ಯ, ಸಮಾಜ ಕಲ್ಯಾಣ, ವಾಣಿಜ್ಯ ತೆರಿಗೆ, ಬಿಬಿಎಂಪಿ ಕೃಷಿ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾಮಟ್ಟದ ಸಭೆಯನ್ನು ಆಯೋಜಿಸಿ ಮಾದಕ ವಸ್ತುಗಳ ಜಾಲದ ಕುರಿತು ವಿವಿಧ ಇಲಾಖೆಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ.

ಈ ಮಾಹಿತಿಗಳನ್ನು ಆಧರಿಸಿ ಮಾದಕ ವಸ್ತುಗಳ ಪತ್ತೆ ವೀಸಾ ಅವಧಿ ಮೀರಿದ ವಿದೇಶಿಯರನ್ನು ಡಿಪೋರ್ಟ್ ಮಾಡಿಸುವಂತ ವಿಶೇಷ ಕಾರ್ಯಾಚರಣೆ ಸಹ ನಡೆಯುತ್ತಿದೆ
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.
ವರದಿ
ಶಶಿಕುಮಾರ್ ವಿ









