ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ತಾತ್ಕಾಲಿಕ ಪಟಾಕಿ ಅಂಗಡಿಗಳ ಮಾಲೀಕರ ಸಭೆಯನ್ನು ಏರ್ಪಡಿಸಲಾಯಿತು
ಸಭೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರ ಸಾನಿಧ್ಯದಲ್ಲಿ ಹಾಗೂ ಇತರ ಇಲಾಖೆಗಳಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಫೈರ್ ಅಂಡ್ ಎಮರ್ಜೆನ್ಸಿ ಸರ್ವಿಸ್, ಕರ್ನಾಟಕ ಪರಿಸರ ಮಾಲಿನ್ಯ ಇಲಾಖೆ, ಬೆಸ್ಕಾಂ, ಸರಕು ಮತ್ತು ಸೇವಾ ತೆರಿಗೆ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಪಟಾಕಿ ಮಳಿಗೆಗಳ ಮಾಲೀಕರುಗಳು ಭಾಗವಹಿಸಿದ್ದು
ಆಯುಕ್ತರು ಪಟಾಕಿ ಅಂಗಡಿಗಳ ಮಾಲೀಕರುಗಳಿಗೆ ಹಲವಾರು ಸಲಹಾ ಸೂಚನೆಗಳನ್ನು ನೀಡಿದ್ದು ಹಾಗೂ ಕುಂದುಕೊರತೆಗಳನ್ನು ಸಹ ಆಲಿಸಿ ಕ್ರಮಹಹಿಸುವ ಬಗ್ಗೆ ತಿಳಿಸಿದ್ದು ಕೆಲವು ಶರತ್ತುಗಳನ್ನು ಸಹ ಅಂಗಡಿ ಮಾಲೀಕರಿಗಳಿಗೆ ವಿಧಿಸಿರುತ್ತಾರೆ
ಈ ವರ್ಷ ಒಟ್ಟು 87 ಮೈದಾನಗಳಲ್ಲಿ 411 ಮಳಿಗೆಗಳಿಗೆ ತಾತ್ಕಾಲಿಕ ಪರವಾನಿಗೆ ನೀಡಿದ್ದು ಮಾಲೀಕರಿಗೆ ಕಡ್ಡಾಯವಾಗಿ ಅನುಸರಿಸಬೇಕಾದ ಅಂಶಗಳ ಬಗ್ಗೆ ಸೂಕ್ತ ತಿಳುವಳಿಕೆಯನ್ನು ಆಯುಕ್ತರು ನೀಡಿದರು
ಮೈದಾನದ ವಿವರಗಳನ್ನು ಪೊಲೀಸ್ ಆಯುಕ್ತರ ಕಚೇರಿಯ ಪ್ರಕಟಣ ಫಲಕ ಅಥವಾ ಪೊಲೀಸ್ ಆಯುಕ್ತರ ಕಚೇರಿಯ ಅಂತರ್ಜಾಲದಲ್ಲಿ ಪಡೆಯಲು ಸೂಚಿಸಲಾಗಿದೆ
ಕರ್ನಾಟಕ ಸರ್ಕಾರ ಆದೇಶದ ಮೇರೆಗೆ ನಿಗದಿಪಡಿಸಿರುವ ಶುಲ್ಕದೊಂದಿಗೆ ಆನ್ಲೈನ್ ಪೋರ್ಟಲ್ ಮುಖಾಂತರ ದಾಖಲಾತಿ ಮತ್ತು ಡಿಡಿಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದು ಪ್ರತಿಯನ್ನು ಅಪ್ಲೋಡ್ ಮಾಡಲು ತಿಳಿಸಿರುತ್ತಾರೆ
ದಿನಾಂಕ:18/10/2025 ರಿಂದ 22/10/2025 ರವರೆಗೆ ಐದು ದಿನಗಳ ಕಾಲ ತಾತ್ಕಾಲಿಕ ಪಟಾಕಿ ಮಳಿಗೆಗಳಲ್ಲಿ ಪಟಾಕಿ ಮಾರಾಟ ಮಾಡಲು ಅವಕಾಶವಿರುತ್ತದೆ
ಅರ್ಜಿ ಶುಲ್ಕವಾಗಿ 5000 ಡಿಡಿರೂಪದಲ್ಲಿ 25,000 ಕಮಿಷನರ್ ಆಫ್ ಪೊಲೀಸ್ ರವರ ಹೆಸರಿನಲ್ಲಿ ಡಿಡಿ ಯನ್ನು ಪಾವತಿಸ ಬೇಕಾಗಿದ್ದು ಸದರಿ ಡಿಡಿ ಪ್ರತಿ ಯನ್ನು ಆನ್ಲೈನ್ ಪೋರ್ಟಲ್ಲಿ ಅಪ್ಲೋಡ್ ಮಾಡಬೇಕಾಗಿರುತ್ತದೆ
ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶವಿದ್ದು ಪ್ರತಿಯೊಂದು ಮಳಿಗೆಗಳಲ್ಲಿ ಅಗ್ನಿ ನಿರ್ವಹಣಾ ಹಾಗೂ ಅಗ್ನಿ ಶಮನ ವ್ಯವಸ್ಥೆಯ ಬಗ್ಗೆ ಹಾಗೂ ಇತರೆ ಅಂಕಿ ಅಂಶಗಳ ಬಗ್ಗೆ ಅರಿವನ್ನ ಮೂಡಿಸಿದರು
ಹಾಗೂ ಯಾವುದೇ ತಾತ್ಕಾಲಿಕ ಮಳಿಗೆಗಳಲ್ಲಿ ಅನಾಹುತ ಅಥವಾ ಅವಘಡ ನಡೆದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಆಯುಕ್ತರು ತಿಳಿಸಿದರು.










