ಸಿ.ಇ.ಐ.ಆರ್ ತಂತ್ರಾಂಶದ ಮೂಲಕ ಹಲವಾರು ಪ್ರಕರಣಗಳಲ್ಲಿ ಕಳುವಾಗಿದ್ದ ವಿವಿಧ ಕಂಪನಿಯ 692 ಮೊಬೈಲ್ಗಳ ವಶ, ಮೌಲ್ಯ 1.75 ಕೋಟಿ.
ಬೆಂಗಳೂರು ನಗರ ಈಶಾನ್ಯ ವಿಭಾಗದ 11 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳುವಾಗಿದ್ದ ಹಾಗೂ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್ಗಳನ್ನು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ನಿರಂತರವಾಗಿ ಸಿ.ಇ.ಐ.ಆರ್ ಪೋರ್ಟಲ್ನ ಸಹಾಯದಿಂದ ಪತ್ತೆ ಕಾರ್ಯದಲ್ಲಿ ತೊಡಗಿಕೊಂಡು, 2026ನೇ ಸಾಲಿನ ಏಪ್ರಿಲ್ ಮಾಹೆಯಲ್ಲಿ ವಿವಿಧ ಕಂಪನಿಯ 692 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೊತ್ತ ಸುಮಾರು 1.75 ಕೋಟಿ ಬೆಲೆಯುಳ್ಳದ್ದಾಗಿರುತ್ತದೆ.
ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್ಗಳ ವಿವರವನ್ನು ಸಿ.ಇ.ಐ.ಆರ್ ಪೋರ್ಟಲ್ನಲ್ಲಿ ದಾಖಲಿಸುವುದರಿಂದ ಅಥವಾ ಪೊಲೀಸ್ ಠಾಣೆಗಳಲ್ಲಿ ದೂರು ನೀಡುವುದರಿಂದ ಮೊಬೈಲ್ ಫೋನ್ಗಳನ್ನು ಪತ್ತೆ ಮಾಡಲು ಅನುಕೂಲವಾಗುತ್ತದೆ.
ಈ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಮಿಥುನ್ ಕುಮಾರ್.ಜಿ.ಕೆ. ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಯಲಹಂಕ, ಸಂಪಿಗೆಹಳ್ಳಿ ಮತ್ತು ದೇವನಹಳ್ಳಿ ಉಪ ವಿಭಾಗಗಳ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರುಗಳ ನೇತೃತ್ವದಲ್ಲಿ, ಈಶಾನ್ಯ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳ ತಂಡ ಮೊಬೈಲ್ ಫೋನ್ಗಳನ್ನು ಸಿ.ಇ.ಐ.ಆರ್ ಪೋರ್ಟಲ್ನಲ್ಲಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.









