ಅಮೃತ ಹಳ್ಳಿ ಪೊಲೀಸರಿಗೆ ಖಚಿತ ಮಾಹಿತಿಯ ಮೇರೆಗೆ ತಾನ ಸರಹದ್ದಿನ ದಾಸರಹಳ್ಳಿಯಲ್ಲಿರುವ ನಾರ್ತ್ ಹಿಲ್ಸ್ ಶಾಲೆ ಹಿಂಭಾಗದ ಖಾಲಿ ಜಾಗದಲ್ಲಿ ಓರ್ವ ವ್ಯಕ್ತಿ ನಿಷೇಧಿತ ಎಂ ಡಿ ಎಂ ಎ ಕ್ರಿಸ್ಟಲ್ ಗಳನ್ನು ಯುವಕರಿಗೆ ಮಾರಾಟ ಮಾಡುತ್ತಿರುತ್ತಾನೆ ಎಂದು ಮಾಹಿತಿ ದೊರೆಯುತ್ತದೆ
ಮಾಹಿತಿಯನ್ನಾ ಧರಿಸಿ ಎನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಓರ್ವ ವಿದೇಶಿ ಪ್ರಜೆಯನ್ನು ವರ್ಷಕ್ಕೆ ಪಡೆದ ಪೊಲೀಸರು ವಿಚಾರಣೆಗಳು ಪಡಿಸಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯ ಹೆಸರಿರುವುದಾಗಿ ಆರೋಪಿ ಒಪ್ಪಿಕೊಂಡಿರುತ್ತಾನೆ
ಮೂರು ಕೋಟಿ ಮೌಲ್ಯದ 3 ಕೆಜಿ ಎಮ್ ಡಿ ಎಂ ಎ ಕ್ರಿಸ್ಟಲ್ ಅನ್ನು ಅಮೃತಹಳ್ಳಿ ಪೊಲೀಸರು ವಶಪಡಿಸಿಕೊಂಡಿರುತ್ತಾರೆ
ಸುದೀರ್ಘವಾಗಿ ವಿಚಾಣೆ ಮಾಡಿದ ಪೊಲೀಸರು ಆರೋಪಿ 2023 ನೇ ಸಾಲಿನಲ್ಲಿ ಕೆಲಸ ಹುಡುಕಿಕೊಂಡು ಬೆಂಗಳೂರು ನಗರಕ್ಕೆ ಬಂದಿರುತ್ತಾನೆ. ಬಾಣಸವಾಡಿಯ ಕಮ್ಮನಹಳ್ಳಿಯಲ್ಲಿರುವ ಮತ್ತೊಬ್ಬ ವಿದೇಶಿ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಎಂಡಿ ಎಂಎ ಕ್ರಿಸ್ಟಲ್ ಅನ್ನು ಖರೀದಿ ಮಾಡಿಕೊಂಡು ಬಟ್ಟೆ ವ್ಯಾಪಾರ ಮಾಡುವ ನೆಪದಲ್ಲಿ ಬೆಂಗಳೂರು ನಗರದ ಸಾರ್ವಜನಿಕರಿಗೆ ಕಾಲೇಜ್ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುತ್ತೇನೆ ಎಂದು ತಿಳಿಸಿರುತ್ತಾನೆ
ಈ ಕಾರ್ಯಾಚರಣೆಯನ್ನು ಉಪಪ ಪೊಲೀಸ್ ಆಯುಕ್ತರು ಈಶಾನ್ಯ ವಿಭಾಗ ಸಜಿತ್ ಐಪಿಎಸ್ ಸಹಾಯಕ ಪೊಲೀಸ್ ಆಯುಕ್ತರು, ಸಂಪಿಗೆಹಳ್ಳಿ ಉಪ ವಿಭಾಗ ಮುರುಗೇಂದ್ರಯ್ಯ ರವರ ಮಾರ್ಗದರ್ಶನದಲ್ಲಿ ಅಮೃತಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಂಬರೀಶ್ ಹಾಗೂ ಸಿಬ್ಬಂದಿಯವರ ತಂಡ ಪ್ರಕರಣವನ್ನು ಭೇದಿಸಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









