Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Bengaluru City Police

ಮನೆ ಕನ್ನ ಕಳವು ಮಾಡುತ್ತಿದ್ದ ಹೊರರಾಜ್ಯದ ಓರ್ವ ವ್ಯಕ್ತಿಯ ಬಂಧನ

CREDOPRESS MEDIA PVT LTD by CREDOPRESS MEDIA PVT LTD
December 5, 2024
in Bengaluru City Police,J. JOHN PREM EDITOR,Latest News,Namma Police,Namma Police News,National News
0
ಮನೆ ಕನ್ನ ಕಳವು ಮಾಡುತ್ತಿದ್ದ ಹೊರರಾಜ್ಯದ ಓರ್ವ ವ್ಯಕ್ತಿಯ ಬಂಧನ
0
SHARES
56
VIEWS
Share on FacebookShare on Twitter

1 ಕೆಜಿ 700 ಗ್ರಾಂ ಚಿನ್ನಾಭರಣ ವಶ. ಮೌಲ್ಯ 1 ಕೋಟಿ 36 ಲಕ್ಷ, ಅನ್ನಪೂರ್ಣೇಶ್ವರಿನಗರ ಪೊಲೀಸ್ ಸರಹದ್ದಿನ, ಆರೋಗ್ಯ ಬಡಾವಣೆಯಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:19/08/2023 ರಂದು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಅವರ ಕುಟುಂಬ ಸಮೇತ ದಿನಾಂಕ:19/08/2023 ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿಕೊಂಡು ಹೊರಗಡೆ ಹೋಗಿ ಮತ್ತೆ ಸಂಜೆ ವಾಪಸ್ ಬಂದು ನೋಡಲಾಗಿ, ಯಾರೋ ಕಳ್ಳರು ಮನೆಯ ಮುಂಭಾಗಿಲಿನ ಡೋರ್‌ಲಾಕ್‌ನ್ನು ಮೀಟಿ ಒಳಗೆ ಪ್ರವೇಶಿಸಿ, ಕೊಠಡಿಯಲ್ಲಿನ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.


ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡರು ಸಹ ಆರೋಪಿಯ ಸುಳಿವು ದೊರೆತ್ತಿರುವುದಿಲ್ಲ. ತನಿಖೆಯನ್ನು ಮುಂದುವರೆಸಿ, ಭಾತ್ಮಿದಾರರಿಂದ ಮಾಹಿತಿಯನ್ನು ಕಲೆಹಾಕಿ, ದಿನಾಂಕ:09/11/2024 ರಂದು ಓರ್ವ ವ್ಯಕ್ತಿಯನ್ನು ಉತ್ತರ ಪ್ರದೇಶದ ಮುರಾದಾಬಾದ್‌ನ ಜಿಲ್ಲಾ ಕಾರಾಗೃಹದಿಂದ ಬಾಡಿ ವಾರೆಂಟ್ ಮುಖೇನ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಹಾಗೂ ಬೆಂಗಳೂರು ನಗರದಲ್ಲಿ ವಿವಿಧ ಕಡೆಗಳಲ್ಲಿ ಕನ್ನ ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:10/01/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು. ತನಿಖೆಯು ಪೂರ್ಣಗೊಳ್ಳದಿದ್ದರಿಂದ ಆರೋಪಿಯನ್ನು ಇನ್ನೂ ಹೆಚ್ಚಿನ ವಿಚಾರಣೆಗಾಗಿ ಪುನಃ 11 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.


ಪೊಲೀಸ್‌ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಮನೆ ಕನ್ನ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಉತ್ತರ ಪ್ರದೇಶದ ವಿವಿಧ ಗಿರವಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:14/11/2024 ರಂದು ಮುಂಬೈನ ಜವಾರಿ ಬಜಾರ್‌ನ ಗಿರವಿ ಅಂಗಡಿಯ ಮಾಲೀಕನಿಗೆ ಮಾರಾಟ ಮಾಡಿದ್ದ, 501 ಗ್ರಾಂ ಚಿನ್ನಾಭರಣಗಳನ್ನು ಹಾಗೂ ಅದೇ ದಿನ ಜವಾರಿ ಬಜಾರ್‌ನ ಮತ್ತೊಂದು ಗಿರವಿ ಅಂಗಡಿಯಿಂದ 160 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು.
ದಿನಾಂಕ:15/11/2024 ರಂದು ನವಿ ಮುಂಬೈನ ಗಿರವಿ ಅಂಗಡಿಯೊಂದರಿಂದ 70 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು. ಅದೇ ದಿನ ಮತ್ತೊಂದು ಗಿರವಿ ಅಂಗಡಿಯ ಮಾಲೀಕನಿಗೆ ಚಿನ್ನಾಭರಣವನ್ನು ತಂದು ಹಾಜರುಪಡಿಸುವಂತೆ ನೋಟೀಸ್ ಜಾರಿ ಮಾಡಲಾಗಿರುತ್ತದೆ.
ದಿನಾಂಕ:18/11/2024 ರಂದು ಗುರುಗಾವ್‌ನ ಗಿರವಿ ಅಂಗಡಿಯೊಂದರಿಂದ 130 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು.

ದಿನಾಂಕ:21/11/2024 ರಂದು ಸಂಭಲ್ ಜಿಲ್ಲೆಯ ಗಿರವಿ ಅಂಗಡಿಯೊಂದರಿಂದ 662 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು.
ದಿನಾಂಕ:30/11/2024 ರಂದು ನವಿ ಮುಂಬೈನ ಗಿರವಿ ಅಂಗಡಿಯ ಮಾಲೀಕನು ನೋಟಿಸ್‌ಗೆ ಸ್ಪಂದಿಸಿ, 177 ಗ್ರಾಂ ಚಿನ್ನಾಭರಣಗಳನ್ನು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಈ ಪ್ರಕರಣದ ಆರೋಪಿಯ ವಶದಿಂದ ಒಟ್ಟಾರೆ 1 ಕೆ.ಜಿ 700 ಗ್ರಾಂನ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇದರ ಮೌಲ್ಯ 1,36,00,000/-(ಒಂದು ಕೋಟಿ ಮೂವತ್ತಾರು ಲಕ್ಷ ರೂಪಾಯಿ).


ಈ ಪ್ರಕರಣದ ಆರೋಪಿಯ ಬಂಧನದಿಂದ 1) ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ-6 ಕನ್ನ ಕಳವು ಪ್ರಕರಣಗಳು, 2) ಕೆಂಗೇರಿ ಪೊಲೀಸ್ ಠಾಣೆಯ ಕನ್ನ ಕಳವು ಪ್ರಕರಣ, 3) ಜ್ಞಾನಭಾರತಿ ಪೊಲೀಸ್ ಠಾಣೆಯ- ಕನ್ನ ಕಳವು ಪ್ರಕರಣ. 4) ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯ- ಕನ್ನ ಕಳವು ಪ್ರಕರಣ, 5) ಪೀಣ್ಯ ಪೊಲೀಸ್ ಠಾಣೆಯ-1 ಕನ್ನ ಕಳವು ಪ್ರಕರಣ, 6) ಬಾಣಾಸವಾಡಿ ಪೊಲೀಸ್ ಠಾಣೆಯ- ಕನ್ನ ಕಳವು ಪ್ರಕರಣ ಸೇರಿದಂತೆ ಒಟ್ಟು 11 ಕನ್ನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.
ದಿನಾಂಕ:30/11/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ. ಈ ಆರೋಪಿಯನ್ನು ದಿನಾಂಕ:02/12/2024 ರಂದು ಉತ್ತರ ಪ್ರದೇಶದ ಮುರಾದಾಬಾದ್‌ನ ಜಿಲ್ಲಾ ಕಾರಾಗೃಹಕ್ಕೆ ಮನಃ ಒಪ್ಪಿಸಲಾಗಿರುತ್ತದೆ.


ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಕಮೀಷನರ್ ರವರಾದ, ಶ್ರೀ.ಗಿರೀಶ್.ಎಸ್, ಐ.ಪಿ.ಎಸ್ರವರ ಸೂಕ್ತ ಮಾರ್ಗದರ್ಶನದಲ್ಲಿ ಶ್ರೀ.ಬಸವರಾಜ ಎ ತೇಲಿ ಕೆಂಗೇರಿ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ರವರ ನಿರ್ದೇಶನದಲ್ಲಿ, ಶ್ರೀ. ಕುಮಾರ್ ಎ.ವಿ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರ ನೇತೃತ್ವದ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

https://fb.watch/wgMJT9FRag

    Tags: Annapoorneshwari police stationBengaluru City PoliceIndian Police NewsKarnataka NewsKarnataka State PoliceLatest NewsNamma PoliceNamma Police News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು
    Bengaluru City Police

    ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು

    July 28, 2026
    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    Bengaluru City Police

    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    July 24, 2026
    ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ
    Bengaluru District Police

    ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ

    July 23, 2026
    Next Post
    ಸರ್ಕಾರದ ಕೋಟದಡಿ ಬರುವ ಇಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡಿ, ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು, ಅರ್ಹ ಅಭ್ಯರ್ಥಿಗಳಿಗೆ ವಂಚಿಸುತ್ತಿದ್ದ ಹತ್ತು ವ್ಯಕ್ತಿಗಳ ಬಂಧನ

    ಸರ್ಕಾರದ ಕೋಟದಡಿ ಬರುವ ಇಂಜಿನಿಯರಿಂಗ್ ಸೀಟುಗಳನ್ನು ಬ್ಲಾಕ್ ಮಾಡಿ, ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು, ಅರ್ಹ ಅಭ್ಯರ್ಥಿಗಳಿಗೆ ವಂಚಿಸುತ್ತಿದ್ದ ಹತ್ತು ವ್ಯಕ್ತಿಗಳ ಬಂಧನ

    ದ್ವಿ-ಚಕ್ರ ವಾಹನ ಕಳವು ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳ ಬಂಧನ. 13 ದ್ವಿ-ಚಕ್ರ ವಾಹನಗಳ ವಶ. ಮೌಲ್ಯ 21 ಲಕ್ಷ.

    ದ್ವಿ-ಚಕ್ರ ವಾಹನ ಕಳವು ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳ ಬಂಧನ. 13 ದ್ವಿ-ಚಕ್ರ ವಾಹನಗಳ ವಶ. ಮೌಲ್ಯ 21 ಲಕ್ಷ.

    ಮನೆಗಳ ಹೊರಗೆ ಒಣಗಿಸಿದ್ದ ಮಹಿಳೆಯರ ಒಳ ಉಡುಪುಗಳು ನಾಪತ್ತೆ ಸೈಕೋ ಬಂಧನ!

    ಮನೆಗಳ ಹೊರಗೆ ಒಣಗಿಸಿದ್ದ ಮಹಿಳೆಯರ ಒಳ ಉಡುಪುಗಳು ನಾಪತ್ತೆ ಸೈಕೋ ಬಂಧನ!

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press CREDOPRESS MEDIA Crime News Cyber Crime Davangere police drugs news Electronic city Police Hebbagodi police Hoskote Police Hulimavu Police Indian Police News J. JOHN PREM J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು
    • ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    • ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved