Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home National News

ಕನ್ನಕಳವು ಮಾಡುತ್ತಿದ್ದ ಹೊರ ರಾಜ್ಯದ ಓರ್ವ ವ್ಯಕ್ತಿಯ ಬಂಧನ

CREDOPRESS MEDIA PVT LTD by CREDOPRESS MEDIA PVT LTD
May 5, 2025
in National News
0
ಕನ್ನಕಳವು ಮಾಡುತ್ತಿದ್ದ ಹೊರ ರಾಜ್ಯದ ಓರ್ವ ವ್ಯಕ್ತಿಯ ಬಂಧನ
0
SHARES
9
VIEWS
Share on FacebookShare on Twitter

306 ಗ್ರಾಂ ಚಿನ್ನಾಭರಣ, 1 ಕೆ.ಜಿ ಬೆಳ್ಳಿಯ ವಸ್ತುಗಳ ವಶ. ಮೌಲ್ಯ 30 ಲಕ್ಷ.

ಕೆ.ಆರ್.ಪುರ ಪೊಲೀಸ್ ಠಾಣಾ ಸರಹದ್ದಿನ ರಾಮಮೂರ್ತಿನಗರದಲ್ಲಿರುವ ಅಕ್ಷಯನಗರದಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:15/10/2024 ರಂದು ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ದಿನಾಂಕ:09/10/2024 ರಂದು ಕುಟುಂಬ ಸಮೇತರಾಗಿ ಹಬ್ಬಕ್ಕೆಂದು ಮೈಸೂರಿಗೆ ಹೋಗಿರುತ್ತಾರೆ. ದಿನಾಂಕ:15/10/2024 ರಂದು ಬೆಳಿಗ್ಗೆ ವಾಪಸ್ ಮನೆಗೆ ಬಂದು ನೋಡಲಾಗಿ, ಮನೆಯ ಮುಂಬಾಗಿಲ ಲಾಕ್‌ನ್ನು ಯಾರೋ ಅಪರಿಚಿತರು ಮುರಿದು. ಮನೆಯೊಳಗೆ ಪ್ರವೇಶಿಸಿ, ಕೊಠಡಿಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.

ಪ್ರಕಣರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಭಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:10/04/2025 ರಂದು ಎಲೆಕ್ಟ್ರಾನಿಕ್‌ ಸಿಟಿಯ ಹುಸ್ಕೂರು ಕೆರೆಯ ಬಳಿ ಓರ್ವ ಹೊರ ರಾಜ್ಯದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಆತನ ಸಹಚರನೊಂದಿಗೆ ಸೇರಿಕೊಂಡು ಕಳವು ಮಾಡಿರುವುದಾಗಿ, ತನ್ನೊಪ್ಪಿಕೊಂಡಿರುತ್ತಾನೆ.

ದಿನಾಂಕ:11/04/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 12 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.

ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಕಳವು ಮಾಡಿದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕೆ.ಆರ್.ಪುರ ಪೊಲೀಸ್ ಠಾಣಾ ಸರಹದ್ದಿನ ಟಿ.ಸಿ.ಪಾಳ್ಯ, ದೇವಸಂದ್ರ, ಮೇಡಹಳ್ಳಿ ಹಾಗೂ ಸೀಗೆಹಳ್ಳಿಯಲ್ಲಿರುವ ವಿವಿಧ ಜ್ಯುವೆಲರಿ ಅಂಗಡಿಗಳಲ್ಲಿ ಅಡಮಾನವಿಟ್ಟಿರುವುದಾಗಿ ಹಾಗೂ ಆರೋಪಿಯ ವಾಸದ ಮನೆಯಲ್ಲಿಯೂ ಸಹ ಇಟ್ಟಿರುವುದಾಗಿ ತಿಳಿಸಿರುತ್ತಾನೆ.

ದಿನಾಂಕ:16/04/2025 ರಂದು ಆರೋಪಿಯು ವಾಸವಿದ್ದ ಕೋನಪ್ಪನ ಅಗ್ರಹಾರದ ವಾಸದ ಮನೆಯಿಂದ 123 ಗ್ರಾಂ ಚಿನ್ನಾಭರಣ, 13 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.

ಕೆ.ಆರ್.ಪುರ ಪೊಲೀಸ್ ಠಾಣಾ ಸರಹದ್ದಿನ ಟಿ.ಸಿ.ಪಾಳ್ಯ, ದೇವಸಂದ್ರ, ಮೇಡಹಳ್ಳಿ ಹಾಗೂ ಸೀಗೆಹಳ್ಳಿಯ ಜ್ಯುವೆಲರಿ ಅಂಗಡಿಗಳ ಮಾಲೀಕರಿಗೆ ಠಾಣೆಯಿಂದ ನೋಟೀಸನ್ನು ಜಾರಿಮಾಡಲಾಗಿದ್ದು, ಅಂಗಡಿಯ ಮಾಲೀಕರು ದಿನಾಂಕ:17, 18, 19ರ ಏಪ್ರಿಲ್ 2025 ರಂದು ಠಾಣೆಗೆ ತಂದು ಹಾಜರು ಪಡಿಸಿದ 183 ಗ್ರಾಂ ಚಿನ್ನಾಭರಣ ಹಾಗೂ 987 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಈ ಪ್ರಕರಣದ ಆರೋಪಿಯ ಬಂಧನದಿಂದ ಒಟ್ಟು 306 ಗ್ರಾಂ ಚಿನ್ನಾಭರಣ ಹಾಗೂ 1 ಕೆ.ಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 30.00.000/- (ಮೂವತ್ತು ಲಕ್ಷ ರೂಪಾಯಿ).

ಈ ಪ್ರಕರಣದ ಆರೋಪಿಯ ಬಂಧನದಿಂದ 1) ಕೆ.ಆರ್ ಪುರ ಪೊಲೀಸ್ ಠಾಣೆಯ-12 ಕನ್ನ ಕಳವು ಪ್ರಕರಣಗಳು 2) ಕಾಡುಗೋಡಿ ಪೊಲೀಸ್ ಠಾಣೆಯ-1 ಕನ್ನ ಕಳವು ಪ್ರಕರಣ ಸೇರಿದಂತೆ ಒಟ್ಟು 13 ಕನ್ನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.

ದಿನಾಂಕ:19/04/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.

ಚಿನ್ನಾಭರಣ ಕಳವು ಮಾಡಿದ್ದ ಓರ್ವ ವ್ಯಕ್ತಿಯ ಬಂಧನ. 100 ಗ್ರಾಂಚಿನ್ನಾಭರಣ ವಶ, ಮೌಲ್ಯ 10 ಲಕ್ಷ.

ಕೆ.ಆ‌ರ್.ಪುರ ಪೊಲೀಸ್ ಸರಹದ್ದಿನ ಬಟ್ಟರಹಳ್ಳಿಯಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:17/03/2025 ರಂದು ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರ ಪತ್ನಿಯು ತಮ್ಮ ಸ್ವಂತ ಊರಾದ ದಾವಣಗೆರೆಗೆ ಹೋಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ದಿನಾಂಕ:16/03/2025 ರಂದು ಬೆಳಿಗ್ಗೆ ಮನೆಯ ಬಾಗಿಲನ್ನು ಲಾಕ್ ಮಾಡಿಕೊಂಡು ಪಿರ್ಯಾದುದಾರರು ಸ್ನೇಹಿತನ ಮನೆಗೆ ಹೋಗಿ ರಾತ್ರಿ ಅಲ್ಲೇ ತಂಗಿರಿರುತ್ತಾರೆ. ಮಾರನೆಯ ದಿನ ಬೆಳಿಗ್ಗೆ ಪಿರ್ಯಾದುದಾರರ ಮನೆಯ ಮಾಲೀಕರು ಪಿರ್ಯಾದುದಾರರಿಗೆ ಫೋನ್ ಮಾಡಿ, ಪಿರ್ಯಾದುದಾರರ ಮನೆಯ ಮುಂಬಾಗಿಲು ತೆರೆದಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದುದಾರರು ವಾಪಸ್ ಮನೆಯ ಬಳಿ ಬಂದು ನೋಡಿದಾಗ ಮನೆಯ ಮುಂಬಾಗಿಲನ್ನು ಯಾರೋ ಅಪರಿಚಿತರು ಹೊಡೆದು. ಮನೆಯ ಕೊಠಡಿಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಕೆಜಿಎಫ್‌ನ ಆ್ಯಂಡರ್ಸನ್ ಪೇಟೆ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಓರ್ವ ಆರೋಪಿಯು ಹಾಲಿ ಕೆಜಿಎಫ್‌ನ ಕಾರಾಗೃಹದಲ್ಲಿದ್ದು, ಆತನ ಬಗ್ಗೆ ಮಾಹಿತಿಯನ್ನು ಕಲೆಹಾಕಿ, ಈ ಪ್ರಕರಣದಲ್ಲಿಯೂ ಆತನು ಭಾಗಿಯಾಗಿರುವುದನ್ನು ಖಚಿತಪಡಿಸಿಕೊಂಡು ಆರೋಪಿಯನ್ನು ದಿನಾಂಕ:07/04/2025 ರಂದು ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ, ಬಾಡಿವಾರೆಂಟ್ ಮುಖಾಂತರ 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.

ಪೊಲೀಸ್ ಅಭಿರಕ್ಷೆಗೆ ಪಡೆದ, ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಮಾಡಲಾಗಿ, ಈ ಪ್ರಕರಣದಲ್ಲಿ ಓರ್ವ ಸಹಚರನೊಂದಿಗೆ ಸೇರಿಕೊಂಡು ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ತಪ್ರೊಪ್ಪಿಕೊಂಡಿರುತ್ತಾನೆ. ಹಾಗೂ ಕಳವು ಮಾಡಿದ ಚಿನ್ನಾಭರಣಗಳನ್ನು ಚಿಂತಾಮಣಿಯ ಜ್ಯೂವೆಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ.

ಚಿಂತಾಮಣಿಯ ಜ್ಯೂವೆಲರಿ ಅಂಗಡಿಯ ಮಾಲೀಕನಿಗೆ ನೋಟಿಸ್ 2:15/04/2025 ಹಾಜರು 100 ಜಾರಿಮಾಡಿದ್ದು, ಗ್ರಾಂ ಚಿನ್ನಾಭರಣಗಳನ್ನು

ವಶಪಡಿಸಿಕೊಳ್ಳಲಾಯಿತು. ಇವುಗಳ ಮೌಲ್ಯ 10,00,000/-( ಹತ್ತು ಲಕ್ಷ ರೂಪಾಯಿ).

ಈ ಪ್ರಕರಣದಲ್ಲಿ ಭಾಗಿಯಾಗಿದ್ದ, ಸಹಚರನು ತಲೆಮರೆಸಿಕೊಂಡಿದ್ದು, ಆತನ ಪತ್ತೆಕಾರ್ಯ ಮುಂದುವರೆದಿದೆ.

ದಿನಾಂಕ:16/04/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಆರೋಪಿಯನ್ನು

ಕೆಜಿಎಫ್‌ನ ಕಾರಾಗೃಹಕ್ಕೆ ಬಿಡಲಾಗಿರುತ್ತದೆ.

ಈ ಎರಡು ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ವೈಟ್ ಪೀಲ್ಡ್ ಡಾ. ಶಿವಕುಮಾರ್ ಗುಣಾರೇ, IPS. ಸಹಾಯಕ ಪೊಲೀಸ್ ಆಯುಕ್ತರು, ವೈಟ್ ಫೀಲ್ಡ್ ಉಪ ವಿಭಾಗ ಶ್ರೀಮತಿ ರೀನಾ ಸುವರ್ಣ ರವರ ಮಾರ್ಗದರ್ಶನದಲ್ಲಿ ಕೆ.ಆರ್ ಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ರಾಮಮೂರ್ತಿ ಬಿ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿ ರವರ ತಂಡ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    Bengaluru City Police

    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    July 24, 2026
    4 ಆರೋಪಿಗಳನ್ನು ಬಂಧಿಸಿ, 70 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿ
    Bengaluru City Police

    4 ಆರೋಪಿಗಳನ್ನು ಬಂಧಿಸಿ, 70 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿ

    July 19, 2026
    ತುಮಕೂರು ನಗರದಲ್ಲಿ ಗಾಂಜಾ ಮತ್ತು ಹೈಡ್ರೋವೀಡ್ ಮಾರಾಟ ಮಾಡುತ್ತಿದ್ದ ಖದೀಮರ ಗ್ಯಾಂಗ್‌ಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ.
    CREDOPRESS

    ತುಮಕೂರು ನಗರದಲ್ಲಿ ಗಾಂಜಾ ಮತ್ತು ಹೈಡ್ರೋವೀಡ್ ಮಾರಾಟ ಮಾಡುತ್ತಿದ್ದ ಖದೀಮರ ಗ್ಯಾಂಗ್‌ಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ.

    July 16, 2026
    Next Post
    ನಿಷೇದಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ. 5 ಕೆ.ಜಿ ಗಾಂಜಾ ವಶ, ಮೌಲ್ಯ 5 ಲಕ್ಷ.

    ನಿಷೇದಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ. 5 ಕೆ.ಜಿ ಗಾಂಜಾ ವಶ, ಮೌಲ್ಯ 5 ಲಕ್ಷ.

    ಬೆಂಗಳೂರಿನಲ್ಲಿ ಸಿವಿಲ್ ಡಿಫೆನ್ಸ್ ಮತ್ತು ಅಗ್ನಿಶಾಮಕ ದಳದ ವತಿಯಿಂದ ಯುದ್ಧದ ತುರ್ತು ಸನ್ನಿವೇಶದ ಮಾಕ್ ಡ್ರಿಲ್ (ಅಣಕು ಪ್ರದರ್ಶನ)

    ಬೆಂಗಳೂರಿನಲ್ಲಿ ಸಿವಿಲ್ ಡಿಫೆನ್ಸ್ ಮತ್ತು ಅಗ್ನಿಶಾಮಕ ದಳದ ವತಿಯಿಂದ ಯುದ್ಧದ ತುರ್ತು ಸನ್ನಿವೇಶದ ಮಾಕ್ ಡ್ರಿಲ್ (ಅಣಕು ಪ್ರದರ್ಶನ)

    Enhanced Security Measures at Key Railway Stations in SBC Division by RPF and GRP

    Enhanced Security Measures at Key Railway Stations in SBC Division by RPF and GRP

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police CM Siddaramaiah Court News Credo Press CREDOPRESS MEDIA Cyber Crime Davangere police drugs news Electronic city Police Girinagar Police Hoskote Police Hulimavu Police Indian Police News J. JOHN PREM EDITOR Jallahalli Police Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು
    • ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    • ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved