ಜಿಲ್ಲೆಯ ಮಂಠಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಉಜಳಂಬ ಗ್ರಾಮದ ಹೊಲದಲ್ಲಿ ಸರಕಾರದಿಂದ ಯಾವುದೇ ಅನುಮತಿ ಇಲ್ಲದೇ ಗಾಂಜಾ ಬೆಳೆದಿರುವ ಬಗ್ಗೆ ಬೀಟ್ ಸಿಬ್ಬಂದಿಯವರಾದ ಶ್ರೀ ಈಶ್ವರ ರವರ ಮಾಹಿತಿಯಂತೆ, ಶ್ರೀ ನ್ಯಾಮೆಗೌಡ, ಡಿ.ಎಸ್.ಪಿ ಹುಮನಾಬಾದ, ಶ್ರೀ ಕೃಷ್ಣಕುಮಾರ ಪಾಟೀಲ್, ಸಿ.ಪಿ.ಐಮಂಠಾಳ ವೃತ್ತ ರವರ ನೇತೃತ್ವದಲ್ಲಿ ಶ್ರೀಮತಿ ಸುವರ್ಣಾ, ಪಿ.ಎಸ್.ಐ ಮಂಠಾಳ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರಾದ ಶ್ರೀ ಭದ್ರೇಶ್ವರ, ಶ್ರೀ ಮಲ್ಲಿಕಾರ್ಜುನ, ಶ್ರೀ ಮಲ್ಲಿನಾಥ, ಶ್ರೀ ಪ್ರಕಾಶ, ಶ್ರೀ ಅನಿಲ, ಶ್ರೀ ಅಖಂಡೇಶ್ವರ, ಶ್ರೀ ಬೀರಪ್ಪಾ ಹಾಗು ಗೃಹ ರಕ್ಷಕ ದಳದ ಶ್ರೀ ಅಮೂಲ, ರಮೇಶ, ದೇವಿಂದ್ರ, ರಮೇಶದಯಾನಂದ, ಸೂರ್ಯಕಾಂತ, ಅವಿನಾಶ, ವಿಜಯಕುಮಾರ ರವರನ್ನೊಳಗೊಂಡ ರಚಿಸಿದ ತಂಡವು ಗೆಜಿಟೆಡ್ ಅಧಿಕಾರಿಯವರ ಸಮಕ್ಷಮ ಗಾಂಜಾ ಬೆಳೆದ ಹೊಲಕ್ಕೆ ದಾಳಿ ಮಾಡಿ 400 ಕೆ.ಜಿ ಯಷ್ಟು ಬೆಳೆದ ಗಾಂಜಾ ಅ:ಕಿ: 2,00,00,000=00 ರೂಪಾಯಿ ಮೌಲ್ಯ ಬೆಲೆ ಬಾಳುವುಗಳನ್ನು ವಶಕ್ಕೆ ಪಡೆದು ಹೊಲದ ಮಾಲೀಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಒಬ್ಬ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ಇನ್ನೊಬ್ಬ ಆರೋಪಿತನ ಬಂಧನಕ್ಕೆ ಬಲೆ ಬಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಎರಡೂ ಕೋಟಿಗೂ ಅಧಿಕ ಮೌಲ್ಯದ ಹೊಲದಲ್ಲಿ ಬೆಳೆದಿರುವ ಗಾಂಜಾವನ್ನು ವಶ ಪಡಿಸಿಕೊಂಡ ಮಂಠಾಳ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ಹಾಗು ಗೃಹ ರಕ್ಷಕ ದಳದ ಸಿಬ್ಬಂದಿಯವರ ಅತ್ಯುತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ 10 ಸಾವಿರ ರೂಪಾಯಿ ನಗದು ಬಹುಮಾನ ನೀಡಿ ಶ್ಲಾಘಿಸಿಸಲಾಗಿದೆ.
ಬೀದರ ಜಿಲ್ಲೆಯನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ.









