ಕರ್ನಾಟಕ ರಾಜ್ಯದಲ್ಲಿ 1965 ಏಪ್ರೀಲ್-02ನೇ ತಾರೀಖದಂದು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಜಾರಿಗೆ ಬಂದ ಸವಿ ನೆನಪಿಗಾಗಿ ಪ್ರತಿ ವರ್ಷ ಏಪ್ರೀಲ್-02 ನೇ ತಾರೀಖದಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇಂದು ದಿನಾಂಕ: 02/04/2025 ರಂದು ಬೀದರ ಜಿಲ್ಲಾ ಪೋಲಿಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಘನಶ್ಯಾಮ, ನಿವೃತ ಪಿ.ಎಸ್.ಐ ರವರಿಗೆ ಸನ್ಮಾನಿಸಿ, ಅತಿಥಿಗಳಿಗೆ ಪೊಲೀಸ್ ಗೌರವ ವಂದನೆ ಸಲ್ಲಿಸುವುದರ ಮೂಲಕ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರವರಿಗೆಲ್ಲರಿಗೂ ಪೊಲೀಸ್ ಧ್ವಜವನ್ನು ಹಂಚಲಾಯಿತು. ಇದರಿಂದ ಸಂಗ್ರಹವಾಗುವ ಧನವನ್ನು ನಿವೃತ ಪೊಲೀಸ್ ಅಧಿಕಾರಿ ಹಾಗು ಸಿಬ್ಬಂದಿಯವರ ಕಲ್ಯಾಣ ನಿಧಿಗೆ ಬಳಸಿಕೊಳ್ಳಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಅವ್ಹಾನಿತ ಅತಿಥಿಗಳು, ಬೀದರ ಜಿಲ್ಲಾ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು, ನಿವೃತ ಅಧಿಕಾರಿ ಸಿಬ್ಬಂದಿ, ಲಿಪಿಕ ಅಧಿಕಾರಿ ಸಿಬ್ಬಂದಿ ಹಾಗು ಮಾಧ್ಯಮ, ಅಕ್ಷರ ಮಾಧ್ಯಮ ಮಿತ್ರರು ಉಪಸ್ಥಿತಿದ್ದರು.








