ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ್ ಜಿಲ್ಲೆ ಬೀದರ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಮಂಠಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಜಳಂಬ ಗ್ರಾಮದ ಸರಕಾರಿ ಪ್ರಾಥಾಮಿಕ ಶಾಲೆಯ ಆವರಣದಲ್ಲಿ ಮಕ್ಕಳಿಗೆ ನೀರು ಕುಡಿಯಲು ಇಟ್ಟಿದ್ದ 1000 ಲೀಟರ್ ಮತ್ತು 500 ಲೀಟರ್ ಸಾಮರ್ಥ್ಯದ ಎರಡೂ ನೀರಿನ ಸಿಂಟ್ಯಾಕ್ಸ್ ಕಳ್ಳತನ ಪ್ರಕರಣದ ಪತ್ತೆ ಕುರಿತು ಶ್ರೀ ಕೃಷ್ಣಕುಮಾರ ಪಾಟೀಲ್, ಸಿಪಿಐ ಮಂಠಾಳ ವೃತ್ತ ರವರ ನೇತೃತ್ವದಲ್ಲಿ ಮಂಠಾಳ ಪೊಲೀಸ್ ಠಾಣೆಯ ಪಿ.ಎಸ್.ಐ ಸುವರ್ಣಾ ಮತ್ತು ರಾಚಯ್ಯ ಸ್ವಾಮಿ ಹಾಗೂ ಸಿಬ್ಬಂದಿ ರವರಾದ ಶ್ರೀ ಮಲ್ಲಿಕಾರ್ಜುನ್, ಶ್ರೀ ಮಲ್ಲಿನಾಥ್, ಶ್ರೀ ಪ್ರಕಾಶ್, ಶ್ರೀ ಅನಿಲ್ ರವರನ್ನೊಳಗೊಂಡ ತಂಡವು ಸಿ ಸಿ ಕ್ಯಾಮರಾ ಮುಖ್ಯವಾಗಿ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ನೂತನವಾಗಿ ಸ್ಥಾಪಿತಗೊಂಡ ಸಿ.ಸಿ ಟಿ.ವಿ ಕಂಟ್ರೋಲ ಕಮಾಂಡ್ ಸೆಂಟರ್ ವಿಭಾಗದಲ್ಲಿನ ಸಿಸಿ ಕ್ಯಾಮರಾ ಫುಟೇಜ, ಪೊಲೀಸ್ ಬಾತ್ಮಿದಾರರಿಂದ ಪಡೆದ ಮಾಹಿತಿ ಆಧಾರದಿಂದ ಆರೋಪಿತರ ಪತ್ತೆ ಹಚ್ಚಿ ಅವರಿಂದ 2 ನೀರಿನ ಸಿಂಟ್ಯಾಕ್ಸ್ ಅ:ಕಿ: 7,000=00 ರೂಪಾಯಿ, ಸಾಗಿಸಲು ಬಳಸಿದ ಗೂಡ್ಸ್ ವಾಹನ ಹೀಗೆ ಒಟ್ಟು ಅ:ಕಿ: 1,07,000=00 ರೂಪಾಯಿ ಮೌಲ್ಯದವುಗಳನ್ನು ವಶ ಪಡಿಸಿಕೊಂಡು ಆರೋಪಿತರ ವಿರುದ್ದ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆಯ ಕಳ್ಳತನ ಪ್ರಕರಣವನ್ನು ಅತೀ ಚಾಕ ಚಾಕತ್ಯೆಯಿಂದ ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿ ರವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ, ಪತ್ತೆ ಕಾರ್ಯ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ









