ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ಮಾರ್ಗ ದರ್ಶನದಂತೆ, ಬೀದರ ನೂತನ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬೀದರ್-ಚಿಕ್ಕಪೇಟ್ ಕ್ರಾಸ್ ಹತ್ತಿರ ರಸ್ತೆಯ ಮೇಲೆ ಒಂದು ವಾಹನದಲ್ಲಿ ಎಸ್.ಆರ್-01 ಹೆಸರಿನ ಸುಗಂಧಿತ ಜರ್ದಾ (ತಂಬಾಕು) ಪೌಚ್ ಗಳನ್ನು ಹೊಲುವಂತಹ ಪದಾರ್ಥವನ್ನು ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿರುವ ಮಾಹಿತಿಯಂತೆ, ಬೀದರ ನೂತನ ನಗರ ಪೊಲೀಸ್ ಠಾಣೆಯ ಪಿ.ಐ. ಶ್ರೀ ವಿಜಯಕುಮಾರ ರವರು ತಮ್ಮ ಠಾಣೆಯ ಸಿಬ್ಬಂದಿರವರೊಂದಿಗೆ ದಾಳಿ ಮಾಡಿ ಅಂದಾಜು 4,76,000=00 ರೂಪಾಯಿ ಮೌಲ್ಯದ ನಕಲಿ ಎಸ್.ಆರ್-01 ಹೆಸರಿನ ಸುಗಂಧಿತ ಜರ್ದಾದ ಪೌಚ್ ಪದಾರ್ಥಗಳು ಮತ್ತು ಒಂದು 5,50,000=00 ಮೌಲ್ಯದ ವಾಹನ ಹೀಗೆ ಒಟ್ಟು ಅ:ಕಿ: 10,26,000=00ರೂಪಾಯಿ ಮೌಲ್ಯದವುಗಳನ್ನು ಜಪ್ತಿ ಮಾಡಿಕೊಂಡು ಒಬ್ಬ ಆರೋಪಿತ ನನ್ನು ಬಂಧಿಸಿ ಕಾನೂನು ರಿತ್ಯ ಕ್ರಮ ಕೈಕೊಂಡು ಇನ್ನೂಳಿದ ಐದು ಜನ ಆರೋತರ ಬಂಧನಕ್ಕೆ ಬಲೆ ಬಿಸಲಾಗಿದೆ.
ನಕಲಿ ತಂಬಾಕಿನ ಪದಾರ್ಥಗಳ ಪಾಕೇಟಗಳು ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದವರ ಮೇಲೆ ದಾಳಿ ಮಾಡಿ 10,26,000=00 ರೂಪಾಯಿ ಮೌಲ್ಯದ ಎಸ್. ಆರ್-1 ನಕಲಿ ಸುಗಂಧಿತ ಜರ್ದಾ (ತಂಬಾಕು), ವಾಹನ ವಶ ಪಡಿಸಿಕೊಂಡ ಬೀದರ ನೂತನ ನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯಕ್ಕೆ ಶಾಘಿಸಲಾಗಿದೆ.
ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ.









