ಬೆಂಗಳೂರು ನಗರ ಪೊಲೀಸರ ಸಿಸಿಬಿ (CCB) ಮಾದಕ ವಸ್ತು ನಿಯಂತ್ರಣ ಘಟಕವು ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 19 ಜನರನ್ನು ಬಂಧಿಸಿ, ಸುಮಾರು 7 ಕೋಟಿ 70 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ.
4.904 ಕೆ.ಜಿ. ಹೈಡೋ-ಗಾಂಜಾ ಮತ್ತು ಇತರೆ ಮಾದಕ ವಸ್ತುಗಳು, ಇದರ ಅಂದಾಜು ಮೌಲ್ಯ 7.7 ಕೋಟಿ.
ಅಪರಾಧದಲ್ಲಿ ಬಳಸಲಾದ ಮೋಟಾರ್ ಸೈಕಲ್ ಮತ್ತು 7 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸುದ್ದಗುಂಟೆಪಾಳ್ಯ, ಮಹದೇವಪುರ, ಮತ್ತು ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲಿ ಡ್ರಗ್ಸ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ನೈಜೀರಿಯಾ ಮತ್ತು ಕೆನ್ಯಾ ಮೂಲದ ಮಹಿಳೆಯರು ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಲಾಯಿತು.
ಮಹದೇವಪುರದಲ್ಲಿ ಐದು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ, ಸುಮಾರು 60 ಲಕ್ಷ ಮೌಲ್ಯದ ಹೈಡೋ-ಗಾಂಜಾ ವಶಪಡಿಸಿಕೊಳ್ಳಲಾಯಿತು.
ವರ್ತೂರಿನಲ್ಲಿ ಕೆನ್ಯಾ ಮೂಲದ ಮಹಿಳೆಯನ್ನು ಬಂಧಿಸಿ 4.08 ಕೋಟಿ ಮೌಲ್ಯದ ಎಂ.ಡಿ.ಎಂ.ಎ. ಕ್ರಿಸ್ಟಲ್ ವಶಪಡಿಸಿಕೊಳ್ಳಲಾಯಿತು.
ಕೆ.ಜಿ.ನಗರ ವಿದೇಶಿ ಅಂಚೆ ಕಚೇರಿಯಲ್ಲಿ ಥೈಲ್ಯಾಂಡ್ ಮತ್ತು ಫ್ರಾನ್ಸ್‌ನಿಂದ ಬಂದಿದ್ದ ಶಂಕಿತ ಪಾರ್ಸೆಲ್‌ಗಳಿಂದ ₹ 1.5 ಕೋಟಿ ಮೌಲ್ಯದ 1.5 ಕೆ.ಜಿ. ಹೈಡೋ-ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಮಾನ್ಯ ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೆ ವಾಸವಿದ್ದು, ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ 11 ವಿದೇಶಿ ಪ್ರಜೆಗಳನ್ನು ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿ, ಗಡಿಪಾರು ಮಾಡುವ ಕಾನೂನು ಕ್ರಮಗಳನ್ನು ಆರಂಭಿಸಲಾಗಿದೆ. ಅಲ್ಲದೆ, ಕಾನೂನುಬಾಹಿರವಾಗಿ ಮನೆ ಬಾಡಿಗೆ ನೀಡಿದ ಇಬ್ಬರು ಮನೆ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಈ ಎಲ್ಲಾ ಕಾರ್ಯಾಚರಣೆಗಳನ್ನು ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್ IPS ರವರ ಮಾರ್ಗದರ್ಶನದಲ್ಲಿ ಹಾಗೂ ಎಸಿಪಿ ಶ್ರೀ ಎಚ್.ಕೆ. ಮಹಾನಂದ್ ಮತ್ತು ಇತರ ಅಧಿಕಾರಿಗಳ ತಂಡ ಯಶಸ್ವಿಯಾಗಿ ನಡೆಸಿದೆ.










