ಸಿಲಿಕಾನ್ ಸಿಟಿಯಲ್ಲಿ ಖಾಕಿ ಅಬ್ಬರ: 4 ವಿದೇಶಿಗರು ಸೇರಿ 16 ಮಂದಿ ಡ್ರಗ್ ಪೆಡ್ಲರ್‌ಗಳ ಬಂಧನ.ಎಂಡಿಎಂಎ, ಎಲ್‌ಎಸ್‌ಡಿ, ಹೈಡ್ರೋ ಗಾಂಜಾ ಬೇಟೆ: ಸಿಸಿಬಿ ಪೊಲೀಸರ ಮಿಂಚಿನ ಕಾರ್ಯಾಚರಣೆ.ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾದ ಬೆನ್ನತ್ತಿರುವ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ನಗರದ ಸಿಸಿಬಿ ಹಾಗೂ ವಿವಿಧ ವಿಭಾಗಗಳ ಪೊಲೀಸರು ಜಂಟಿಯಾಗಿ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಬೆಂಗಳೂರನ್ನು ಮಾದಕ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ನಡೆಸಿದ ಸತತ ದಾಳಿಯಲ್ಲಿ ಬರೋಬ್ಬರಿ 36.67 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಬಂಧಿತರಲ್ಲಿ 4 ಮಂದಿ ವಿದೇಶಿ ಪ್ರಜೆಗಳು, 4 ಮಂದಿ ಹೊರರಾಜ್ಯದವರು ಹಾಗೂ 4 ಮಂದಿ ಸ್ಥಳೀಯರು ಸೇರಿದಂತೆ ಒಟ್ಟು 16 ಆರೋಪಿಗಳನ್ನು ಸದ್ಯಕ್ಕೆ ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ.ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳ ವಿವರ ಹೀಗಿದೆ: 9.064 ಕೆಜಿ ಎಂಡಿಎಂಎ 19,755 ಎಲ್‌ಎಸ್‌ಡಿ ಸ್ಟ್ರಿಪ್ಸ್ 5.195 ಕೆಜಿ ಹೈಡ್ರೋ ಗಾಂಜಾ
156 ಗ್ರಾಂ ಹೆರಾಯಿನ್ ಮತ್ತು 618 ಗ್ರಾಂ ಚರಸ್ ಇದರೊಂದಿಗೆ ಕೊಕೇನ್, ಡ್ರಗ್ ಮಿಶ್ರಿತ ಗಮ್ಮೀಸ್ ಹಾಗೂ ಸಾಮಾನ್ಯ ಗಾಂಜಾವನ್ನು ಸಹ ವಶಕ್ಕೆ ಪಡೆಯಲಾಗಿದೆ.

ಪಾರ್ಟಿ ಸೀಸನ್‌ಗಳನ್ನೇ ಗುರಿಯಾಗಿಸಿಕೊಂಡು ನಗರಕ್ಕೆ ಈ ಮಾದಕ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಜಾಲದ ಹಿಂದಿರುವ ಇತರೆ ಕಿಂಗ್‌ಪಿನ್‌ಗಳ ಪತ್ತೆಗೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.









