ಬೇಸಿಗೆಕಾಲ ಶುರುವಾಗಿದೆ. ಪ್ರಪಂಚವೇ ಜಾಗತಿಕ ತಾಪಮಾನಕ್ಕೆ ಬಲಿಯಾಗುತ್ತಿದೆ. ಹೆಚ್ಚಾದ ಬಿಸಿಲು,ದಗೆಯಿಂದ ಜನರು ಪ್ರತಿನಿತ್ಯ ಬೆವರಿನಲ್ಲಿ ಬದುಕುವಂತಹ ಸ್ಥಿತಿಗೆ ತಲುಪುವಂತಾಗಿದೆ. ಇವೆಲ್ಲಕ್ಕೂ ಏಕ ಮಾತ್ರ ಪರಿಹಾರವೆಂದರೆ ಜೀವ ನೆಲೆಯಾಗಿರುವ ವೃಕ್ಷಗಳು. ಅಭಿವೃದ್ಧಿಯ ನೆಪವೊಡ್ಡಿ ಗಿಡಮರಗಳ ಮಾರಣಹೋಮವಾಗುತ್ತಿರುವ ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಹೆಮ್ಮೆಯ ಪೊಲೀಸ್ ಆಯುಕ್ತರಾದ ಶ್ರೀ.ಬಿ ದಯಾನಂದ ಅವರು ಗಿಡ ನೆಡುವ ಮೂಲಕ ಜಗತ್ತಿಗೆ ಮಹತ್ವದ .ಸಂದೇಶವನ್ನು ರವಾನಿಸಿದ್ದಾರೆ.

ಸಸಿಗಳನ್ನು ನೆಟ್ಟು ಗಿಡಮರಗಳನ್ನು ರಕ್ಷಿಸುವುದು ಮಾನವನ ಜವಾಬ್ದಾರಿ. ಈ ಕುರಿತು ಅರಿವು ಮೂಡಿಸುವುದು ಅರಿತವ ಕರ್ತವ್ಯ. ಈ ನಿಟ್ಟಿನಲ್ಲಿ ಮಾನ್ಯ ಪೊಲೀಸ್ ಆಯುಕ್ತರು, ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪರಿವೀಕ್ಷಣೆ ಸಂದರ್ಭದಲ್ಲಿ ಸಸಿ ನೆಡುವ ಮೂಲಕ ಒಂದು ಅರ್ಥಪೂರ್ಣ ಕ್ಷಣಕ್ಕೆ ಸಾಕ್ಷಿಯಾದರು.








