108 ಗ್ರಾಂ ಚಿನ್ನಾಭರಣ ವಶ, ಮೌಲ್ಯ 112 ಲಕ್ಷ.
ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾದ್ರಿ ಲೇಔಟ್‌ನ ಅಪಾರ್ಟ್ ಮೆಂಟ್‌ವೊಂದರಲ್ಲಿ ವಾಸವಿರುವ ಪಿರ್ಯಾದುದಾರರು ಕೋಣನಕಕುಂಟೆ ಪೊಲೀಸ್ ಠಾಣೆಯಲ್ಲಿ ದಿನಂಕ:31/10/2024 ರಂದು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ದಿನಾಂಕ:06/10/2024 ರಂದು ದಸರ ಹಬ್ಬದಂದು ಆನಂತಪದ್ಮನಾಭ ದೇವರ ವ್ರತ ಮಾಡಿದ್ದು. ಆ ದಿನ ಮನೆಯವರೆಲ್ಲ ಚಿನ್ನದ ಆಭರಣಗಳನ್ನು ಧರಿಸಿಕೊಂಡು ನಂತರ ದಿನಾಂಕ:07/10/2024 ಬೆಳಿಗ್ಗೆ ಒಡವೆಗಳನ್ನು ತೆಗೆದು ತಮ್ಮ ಮನೆಯ ರೂಮಿನಲ್ಲಿರುವ ಕಬ್ಬಿಣದ ಪೆಟ್ಟಿಗೆಯಲ್ಲಿ ಇಟ್ಟಿದ್ದು, ದಿನಾಂಕ:31/10/2024 ರಂದು ಬೆಳಿಗ್ಗೆ ಲಕ್ಷ್ಮೀ ಪೂಜೆ ಮಾಡುವ ಸಲುವಾಗಿ ಕಬ್ಬಿಣದ ಪೆಟ್ಟಿಗೆಯಲ್ಲಿ ಇಟ್ಟಿದ್ದ ಚಿನ್ನದ ಒಡವೆಗಳನ್ನು ನೋಡಲಾಗಿ ಚಿನ್ನದ ಒಡವೆಗಳು ಇರಲಿಲ್ಲ. ಪಿರಾದುದಾರರ ಅತ್ತೆಯನ್ನು ನೋಡಿಕೊಳ್ಳಲು ಮಹಿಳೆಯೊಬ್ಬರನ್ನು ಕೇರ್ ಟೇಕರ್ ಆಗಿ ಕೆಲಸಕ್ಕೆ ನೇಮಿಸಿಕೊಂಡಿರುತ್ತಾರೆ. ದಿನಾಂಕ:23/10/2024 ರಿಂದ 31/10/2024 ರ ಅವದಿಯಲ್ಲಿ ಕೇರ್ ಟೇಕರ್ ಆಗಿ ಪಿರಾದಿಯವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆಯ ಮೇಲೆ ಅನುಮಾನವಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ತನಿಖೆಯನ್ನು ಕೈಗೊಂಡು ದಿನಾಂಕ:07/11/2024 ಬಿ.ಜೆ. ರಸ್ತೆ, ಸಿಕೆ ಪಾಳ್ಯ, ಬೆಂಗಳೂರು ರ ವಾಸದ ಮನೆಯಿಂದ ಪಿರಾದುದಾರರ ಮನೆಯಲ್ಲಿ ಕೇರ್ ಟೇಕರ್ ಕೆಲಸಕ್ಕೆ ಬರುತ್ತಿದ್ದ ಓರ್ವ ಮಹಿಳೆಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮಹಿಳೆಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾಳೆ ಹಾಗೂ ಆಕೆಯು ಮನೆಯಲ್ಲಿಟ್ಟಿದ್ದ 18 ಗ್ರಾಂಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ದಿನಾಂಕ:08/11/2024 ರಂದು ವಶಕ್ಕೆ ಪಡೆದ ಆರೋಪಿತೆಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿ, 4 ದಿನಗಳ ಕಾಲ ಪೊಲೀಸ್’ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿತೆಯನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಪ್ರಕರಣದಲ್ಲಿ ಕಳವು ಮಾಡಿದ್ದ ಚಿನ್ನಾಭರಣವನ್ನು ಆರ್.ಬಿ.ಐ ಲೇಔಟ್ ನಲ್ಲಿರುವ ಜ್ಯೂವೆಲರಿ ಅಂಗಡಿವೊಂದರಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾಳೆ.
ದಿನಾಂಕ:09/11/2024 ರಂದು ಆರ್.ಬಿ.ಐ ಲೇಔಟ್ ನಲ್ಲಿರುವ ಜ್ಯೂವೆಲರಿ ಅಂಗಡಿಯೊಂದರಿಂದ 82 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು.
ಆರೋಪಿತೆಯು ಆಕೆಯ ಗಂಡನಿಗೆ ನೀಡಿದ್ದ 8 ಗ್ರಾಂ ಚಿನ್ನದ ಓಲೆಯನ್ನು ದಿನಾಂಕ:10/11/2024 ರಂದು ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದ ಆರೋಪಿತೆಯಿಂದ ಒಟ್ಟಾರೆ 108 ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಒಟ್ಟು ಮೌಲ್ಯ 12,00,000/-(ಹನ್ನೇರಡು ಲಕ್ಷ ರೂಪಾಯಿ).
ಆರೋಪಿತೆಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ, ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಲೊಕೇಶ್.ಭ.ಜಗಲಾಸರ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಸುಬ್ರಮಣ್ಯಪುರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಗಿರೀಶ್ ಎಸ್.ಬಿ ರವರ ಉಸ್ತುವಾರಿಯಲ್ಲಿ, ಕೋಣನಕುಂಟೆ ಪೊಲಿಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಪಾಪಣ್ಣ.ಎಂ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.









