ಸುಬ್ರಮಣ್ಯಪುರ ಪೊಲೀಸ್ ಠಾಣಾ ಸರಹದ್ದಿನ ಉತ್ತರಹಳ್ಳಿ ಸರ್ಕಲ್ ಬಳಿ ಅಪರಾಧ ಸಿಬ್ಬಂದಿಗಳು ದಿನಾಂಕ:09/11/2024 ರಂದು ಗಸ್ತಿನಲ್ಲಿರಬೇಕಾದರೆ, ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ದೊರೆತ್ತಿರುತ್ತದೆ. ಮಾಹಿತಿಯಲ್ಲಿ ಓರ್ವ ವ್ಯಕ್ತಿಯು ಬ್ಯಾಗ್‌ವೊಂದನ್ನು ಹಿಡಿದುಕೊಂಡು ಜ್ಯೂವೆಲರಿ ಅಂಗಡಿಯ ಮುಂಭಾಗ ಅನುಮಾನಸ್ಪದವಾಗಿ ಓಡಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಗಸ್ತಿನಲ್ಲಿದ್ದ ಅಪರಾಧ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ಜ್ಯೂವೆಲರಿ ಅಂಗಡಿಯ ಮುಂಭಾಗ ಬ್ಯಾಗ್‌ವೊಂದನ್ನು ಹಿಡಿದುಕೊಂಡು ಅನುಮಾನಸ್ಪದವಾಗಿ ಓಡಾಡುತ್ತಿದ್ದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ, ಆತನು ಹೊಂದಿದ್ದ ಬ್ಯಾಗನ್ನು ಪರಿಶೀಲಿಸಿದಾಗ ಚಿನ್ನಾಭರಣದ ಬಾಕ್ಸ್ ಇದ್ದು, ಈ ಬಗ್ಗೆ ವಿಚಾರ ಮಾಡಲಾಗಿ, ಅನುಮಾನಸ್ಪದ ವ್ಯಕ್ತಿಯು ಸರಿಯಾದ ಮಾಹಿತಿಯನ್ನು ನೀಡದ ಕಾರಣ ಅನುಮಾನಸ್ಪದ ವ್ಯಕ್ತಿ ಹಾಗೂ ಆತನು ಹೊಂದಿದ್ದ ಚಿನ್ನಾಭರಣದ ಬಾಕ್ಸ್ ಸಮೇತ ಠಾಣೆಗೆ ಕರೆತಂದು ಪ್ರಕರಣವನ್ನು ದಾಖಲಿಸಲಾಯಿತು.

ಅನುಮಾನಸ್ಪದ ವ್ಯಕ್ತಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಆತನು ಸೂರ್ಯ ನಗರ ಜ್ಯೂವೆಲರಿ ಅಂಗಡಿಯೊಂದರಲ್ಲಿ ಚಿನ್ನಾಭರಣದ ಬಾಕ್ಸ್ನ್ನು ಕಳವು ಮಾಡಿದ್ದು, ಆ ಬಾಕ್ಸ್‌ನಲ್ಲಿದ್ದ ಚಿನ್ನಾಭರಣಗಳ ಪೈಕಿ 34 ಗ್ರಾಂ ಚಿನ್ನಾಭರಣವನ್ನು ದೊಡ್ಡಬಸ್ತಿಯಲ್ಲಿರುವ ಜ್ಯೂವೆಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಹಾಗೂ ಅದೇ ದಿನ ಬಾಕ್ಸ್‌ನಲ್ಲಿದ್ದ 92 ಗ್ರಾಂಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು.
ದಿನಾಂಕ:10/01/2024 ರಂದು ದೊಡ್ಡಬಸ್ತಿಯಲ್ಲಿರುವ ಜ್ಯೂವೆಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದ 34 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದ ಆರೋಪಿಯಿಂದ ಒಟ್ಟು 126 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಮೌಲ್ಯ 9,00,000/-(ಒಂಬತ್ತು ಲಕ್ಷ ರೂಪಾಯಿ).
ದಿನಾಂಕ:10/11/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಜ್ಯೂವೆಲರಿ ಅಂಗಡಿಯವರು ನೀಡಿದ ದೂರಿನ ಮೆರೆಗೆ ದಿನಾಂಕ:07/11/2024 ರಂದೇ ಪ್ರಕರಣ ದಾಖಲಾಗಿರುತ್ತದೆ.

ಈ ಕಾರ್ಯಾಚರಣೆಯನ್ನು ಮಾನ್ಯ ಉಪ ಪೊಲೀಸ್ ಆಯುಕ್ತರು ದಕ್ಷಿಣ ವಿಭಾಗ ರವರ ಮಾರ್ಗದರ್ಶನದಲ್ಲಿ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ಸುಬ್ರಮಣ್ಯಪುರ ಉಪ ವಿಭಾಗ ರವರ ನೇತೃತ್ವದಲ್ಲಿ ಸುಬ್ರಮಣ್ಯಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ರಾಜು ಎಂ.ಎಸ್ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.









