ನಗರದ ವಿವಿಧೆಡೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ದಂಧೆಯ ಮೇಲೆ ದಾಳಿ ಮಾಡಿರುವ ಪೊಲೀಸರು, ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಸಹಿತ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ವಿದೇಶದ ಓರ್ವ, ಹೊರರಾಜ್ಯದ ನಾಲ್ವರು ಹಾಗೂ ಮೂವರು ಸ್ಥಳೀಯರು ಸೇರಿ ಒಟ್ಟು 8 ಆರೋಪಿಗಳ ಬಂಧನ.ಹೆಬ್ಬಗೋಡಿ, ಯಲಹಂಕ ಉಪನಗರ, ಮೈಕೋಲೇಔಟ್, ಪರಪ್ಪನ ಅಗ್ರಹಾರ, ಬಾಗಲೂರು ಹಾಗೂ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ಮಾಡಲಾಯಿತು.
12 ಕೆ.ಜಿ 91 ಗ್ರಾಂ ಎಂಡಿಎಂಎ (MDMA),275 ಗ್ರಾಂ ಕೋಕೆನ್,34 ಕೆ.ಜಿ 802 ಗ್ರಾಂ ಗಾಂಜಾ,40 ಗ್ರಾಂ ಚಿನ್ನಾಭರಣ, 2 ಬೈಕ್, 1 ಕಾರು ಮತ್ತು 2.85 ಲಕ್ಷ ನಗದು ಪೊಲೀಸರು ವಶಪಡಿಸಿಕೊಂಡರು .ಜಪ್ತಿ ಮಾಡಿದ ವಸ್ತುಗಳ ಅಂದಾಜು ಮೌಲ್ಯ 13.71 ಕೋಟಿಗಳಾಗಿದ್ದು, ಇವುಗಳ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 27.42 ಕೋಟಿ ಎಂದು ಅಂದಾಜಿಸಲಾಗಿದೆ.
ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ಡ್ರಗ್ಸ್ ತಂದು ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಈ ಭರ್ಜರಿ ಬೇಟೆಯಾಡಿದ್ದಾರೆ. ಸದ್ಯ ಬಂಧಿತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಇವರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಮುಖ್ಯ ಸೂತ್ರಧಾರಿಗಳಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಕಾರ್ಯಾಚರಣೆಗಳನ್ನು ಉಪ ಪೊಲೀಸ್ ಆಯುಕ್ತರುಗಳಾದ ಎಲೆಕ್ಟ್ರಾನಿಕ್‌ಸಿಟಿ ವಿಭಾಗದ ಶ್ರೀ.ನಾರಾಯಣ್.ಎಂ. ಐಪಿಎಸ್, ಈಶಾನ್ಯ ವಿಭಾಗದ ಶ್ರೀ.ಜಿ.ಕೆ.ಮಿಥುನ್ ಕುಮಾರ್, ಐಪಿಎಸ್, ಆಗ್ನೆಯ ವಿಭಾಗದ ಮೊಹಮ್ಮದ್ ಸುಜೀತ.ಎಂ.ಎಸ್, ಐಪಿಎಸ್, ಪೂರ್ವ ವಿಭಾಗದ ಡಾ:ವಿಕ್ರಮ್ ಆಮಟೆ, ಐಪಿಎಸ್ರವರುಗಳ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತರುಗಳಾದ ಎಲೆಕ್ಟ್ರಾನಿಕ್‌ಸಿಟಿ ಉಪವಿಭಾಗದ ಶ್ರೀ.ಸತೀಶ್.ಕೆ.ಎಂ. ಯಲಹಂಕ ಉಪವಿಭಾಗದ ಶ್ರೀ.ನರಸಿಂಹಮೂರ್ತಿ.ಪಿ, ಸಂಪಿಗೆಹಳ್ಳಿ ಉಪವಿಭಾಗದ ಶ್ರೀ.ಮುರುಗೇಂದ್ರಯ್ಯ, ಮೈಕೋಲೇಔಟ್ ಉಪವಿಭಾಗದ ಶ್ರೀ.ಶಿವಶಂಕರ್‌ರೆಡ್ಡಿ, ಬಾಣಸವಾಡಿ ಉಪವಿಭಾಗದ ಶ್ರೀ.ಉಮಾಶಂಕರ್.ಎಂ.ಹೆಚ್ ರವರುಗಳ ನೇತೃತ್ವದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಹೆಬ್ಬಗೋಡಿ ಪೊಲೀಸ್ ಠಾಣೆಯ ಶ್ರೀ.ಸೋಮಶೇಖರ್.ಜಿ. ಯಲಹಂಕ ಉಪನಗರ ಪೊಲೀಸ್ ಠಾಣೆಯ ಶ್ರೀ.ಸುಧಾಕರ್‌ರೆಡ್ಡಿ.ಎ. ಬಾಗಲೂರು ಪೊಲೀಸ್ ಠಾಣೆಯ ಶ್ರೀ.ಅಶೋಕ್.ಬಿ.ಎಸ್. ಮೈಕೋಲೇಔಟ್ ಪೊಲೀಸ್ ಠಾಣೆಯ ಶ್ರೀ.ನಟರಾಜ್.ಡಿ.ಎನ್. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಶ್ರೀ.ಸತೀಶ್.ಬಿ.ಎಸ್. ಬಾಣಸವಾಡಿ ಪೊಲೀಸ್ ಠಾಣೆಯ ಶ್ರೀ.ಅರುಣ್ ಸಾಲುಂಕೆ ರವರುಗಳು ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಯವರುಗಳ ತಂಡ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.








