ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಯವರಿಗೆ ಭಾತ್ನಿದಾರರಿಂದ ಖಚಿತ ಮಾಹಿತಿ ಮೆರೆಗೆ . ಮಾಹಿತಿಯಲ್ಲಿ ಅಪರಿಚಿತ ವಿದೇಶಿ ವ್ಯಕ್ತಿಯೋರ್ವನು ಎಲೆಕ್ಟ್ರಾನಿಕ್ ಸಿಟಿ 1ನೆ ಹಂತದ ಬೆಟ್ಟದಾಸನಪುರ, ಕೇರಳ ಮಸೀದಿ ರಸ್ತೆಯಲ್ಲಿರುವ ಮಹಾಲಕ್ಷ್ಮಿ ಲೇಔಟ್ ನ ಖಾಲಿ ಜಾಗದಲ್ಲಿ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ.
ಈ ಮಾಹಿತಿಯನ್ನು ಆಧರಿಸಿ, ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಭಾತ್ಮೀಯದಾರರು ತಿಳಿಸಿದ ಸ್ಥಳಕ್ಕೆ ಹೋಗಿ , ದಾಳಿ ಮಾಡಿದ ಪೊಲೀಸರು , ಪೂರ್ವ ವಿದೇಶಿ ವ್ಯಕ್ತಿಯನ್ನು ವಶಕ್ಕೆ ಪಡೆದು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಆತನಿಗೆ ಪರಿಚಯವಿರುವ ಓರ್ವ ವಿದೇಶಿ ಮಹಿಳೆಯಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಕ್ರಿಸ್ಟಲ್ನನ್ನು ಖರೀದಿ ಮಾಡಿಕೊಂಡು ಬಂದು, ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾಗಿ ತಿಳಿಸಿರುತ್ತಾನೆ.
ಹಾಸನ ವಶದಲ್ಲಿದ್ದ 180 ಗ್ರಾಂ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟಲ್,1ಡಿಜಿಟಲ್ ತೂಕದ ಯಂತ್ರವನ್ನು ವಶಪಡಿಸಿಕೊಂಡಿರುತ್ತಾರೆ.
ಆರೋಪಿಯು ನೀಡಿದ ಮಾಹಿತಿ ಮೇರೆಗೆ ಅದೇ ದಿನ ಆರೋಪಿಗೆ ಎಂ.ಡಿ.ಎಂ.ಎ ಕ್ರಿಸ್ಟಲನ್ನು ಪೂರೈಸುತ್ತಿದ್ದ ಓರ್ವ ವಿದೇಶಿ ಮಹಿಳೆಯನ್ನು ಠಾಣಾ ಸರಹದ್ದಿನ ದೊಡ್ಡ ತೋಗುರು ಕ್ರಾಸ್ ಬಳಿ ವಶಕ್ಕೆ ಪಡೆದ ಪೊಲೀಸರು.
ವಶಕ್ಕೆ ಪಡೆದ ಮಹಿಳೆಯನ್ನು ವಿಚಾರಣೆಗೊಳಪಡಿಸಿ , ಆಕೆಗೆ ಪರಿಚಯವಿರುವ ಮತ್ತೋರ್ವ ವಿದೇಶಿ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಎಂ.ಡಿ.ಎಂ.ಎ ಕ್ರಿಸ್ಟ್ ಲನ್ನು ಖರೀದಿ ಮಾಡಿಕೊಂಡು, ಈ ಪ್ರಕರಣದ ಆರೋಪಿಗೆ ನೀಡುತ್ತಿದ್ದುದ್ದಾಗಿ ತಪ್ಪಿಕೊಂಡಿರುತ್ತಾಳೆ.
ಆರೋಪಿಗಳಿಬ್ಬರು ನೀಡಿದ ಮಾಹಿತಿ ಮೇರೆಗೆ ವಿದ್ಯಾರಣ್ಯಪುರದ ಆರೋಪಿತೆಯ ವಾಸದ ಮನೆಯಲ್ಲಿ ಒಂದು ಕೆಜಿ 514 ಗ್ರಾಂ ಎಂ.ಡಿ. ಎಂ.ಎ ವಶಪಡಿಸಿಕೊಳ್ಳಲಾಯಿತು.
ಹುಳಿಮಾವಿನಲ್ಲಿ ಆರೋಪಿಯ ವಾಸದ ಮನೆಯಲ್ಲಿ 456 ಗ್ರಾಂ ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟಲ್ ಅನ್ನು ವಶಪಡಿಸಿಕೊಂಡಿರುತ್ತಾರೆ.
ಈ ಪ್ರಕರಣದ ಆರೋಪಿಗಳಿಬ್ಬರ ಬಂಧನದಿಂದ ಒಟ್ಟು 2 ಕೆಜಿ 150 ಗ್ರಾಂನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಕೃಸ್ಟ್ ಲನ್ನು ವಶಪಡಿಸಿಕೊಂಡಿರುತ್ತದೆ. ಇವುಗಳ ಒಟ್ಟು ಮೌಲ್ಯ 5,00,00,000(ಐದು ಕೋಟಿ ರೂಪಾಯಿಗಳು)
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಶ್ರೀ ಎಂ ನಾರಾಯಣ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತರವರಾದ ಶ್ರೀ ಕೆಎಂ ಸತೀಶ್ರವರ ನೇತೃತ್ವದಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ನವೀನ್ ಜಿಎಂ ,ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀ ರವಿಚಂದ್ರ ಹಾಗೂ ಶ್ರೀ ದರ್ಶನ್ ಹಲಗೂರು ಹಾಗೂ ಅಪರಾಧ ವಿಭಾಗದ ಅಧಿಕಾರಿ/ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ
ಶಶಿಕುಮಾರ್ ವಿ









