ಚಿನ್ನ, ಬೆಳ್ಳಿ, ನಗ, ನಾಣ್ಯಗಳಿಗೆ ಇರುವ ಬೆಲೆ ಅದನ್ನು ಪರಿಚಯಿಸಿದ ಮಾನವನಿಗಿಲ್ಲ. ಚಿನ್ನಾಭರಣಗಳಿಗೆ ಸಂಬಂಧಿಸಿದಂತೆ ಹನುಮಂತನಗರ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ 12.1 ಲಕ್ಷ ಮೌಲ್ಯಯುತ ಆಭರಣಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡಿದ್ದಾರೆ.
- ಹನುಮಂತನಗರ ಪೊಲೀಸ್ ಠಾಣಾ ಎಲ್ಲೆಯ ಚಿನ್ನಾಭರಣ ಅಂಗಡಿಯಲ್ಲಿ ಬೆಳ್ಳಿಯನ್ನು ಖರೀದಿಸುವ ನೆಪದಲ್ಲಿ, ಪ್ಲಾಸ್ಟಿಕ್ ಕವರ್ ನಲ್ಲಿದ್ದ ಸುಮಾರು 15 ಗ್ರಾಂ ಚಿನ್ನದ ಸರವನ್ನು ಕಳುವು ಮಾಡಿ ಪರಾರಿಯಾಗಿದ್ದರು. ಸತತ ಕಾರ್ಯಾಚರಣೆಯಿಂದ ಶ್ರೀನಗರದ ಬಸ್ ನಿಲ್ದಾಣದ ಬಳಿ ಕಳುವಾಗಿದ್ದ ಚಿನ್ನದ ಸಮೇತ ಆರೋಪಿಯನ್ನು ಹಿಡಿಯಲಾಯಿತು. ಪೊಲೀಸ್ ಅಭಿರಕ್ಷೆಯಲ್ಲಿದ್ದಾಗ ಆರೋಪಿಯು, ಸರ್ಜಾಪುರ ಮತ್ತು ಪೀಣ್ಯಾದಲ್ಲಿಯೂ ಆಭರಣ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದ ಆರೋಪಿಯಿಂದ 7,20,000ರೂ. ಮೌಲ್ಯದ 90 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
- ಇನ್ನೊಂದು ಪ್ರಕರಣದಲ್ಲಿ, ಬಾಡಿಗೆಗೆಂದು ವಾಸ್ತವ್ಯ ಹೂಡಿದ್ದ ಮನೆಯಲ್ಲಿ ಬಿಲ್ಡಿಂಗ್ನ ಮಾಲಿಕರ ಮಗನೇ ಕಳುವು ಮಾಡಿದ್ದು ತಿಳಿದು ಬಂದಿದೆ. ಬಾಡಿಗೆದಾರರು ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆಂದು ಹೋಗಿದ್ದ ಸಮಯವನ್ನು ಬಳಸಿಕೊಂಡು, ಕಬೋರ್ಡಿನಲ್ಲಿದ್ದ 4.9 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದನು. ಮಾಲೀಕನ ಮಗ ತಮ್ಮ ಬಳಿಯಿದ್ದ ಡ್ಯೂಪ್ಲಿಕೇಟ್ ಕೀ ಉಪಯೋಗಿಸಿ ಮನೆಗೆ ಕಾಲಿಟ್ಟಿದ್ದನು. ಶ್ರೀನಗರ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಹಿಡಿದಾಗ ತಪ್ಪು ಒಪ್ಪಿಕೊಂಡಿರುತ್ತಾನೆ. ಆತನ ಮನೆಯಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಪೊಲೀಸರ ಅಭಿಕ್ಷಕೆ ಒಪ್ಪಿಸಿದ್ದಾನೆ.

ಈ ಭರ್ಜರಿ ಕಾರ್ಯಾಚರಣೆಗಳಲ್ಲಿ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಲೋಕೇಶ್ ಭ ಜಗಲಾಸರ್ ಐಪಿಎಸ್ ರವರ ಮಾರ್ಗದರ್ಶನವಿತ್ತು. ವಿವಿ ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಶಾಮೀದ್ ಭಾಷಾ ಅವರ ನೇತೃತ್ವದಲ್ಲಿ, ಹನುಮಂತನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಸೂರ್ಯಕುಮಾರ್ ಎಸ್ ಹಾಗೂ ಇತರೆ ಸಿಬ್ಬಂದಿಗಳ ತಂಡ ಪ್ರಕರಣಗಳನ್ನು ಯಶಸ್ವಿಗೊಳಿಸಿದ್ದಾರೆ.
ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್








