ಬೀದರ ಜಿಲ್ಲೆಯ ಮುಡುಬಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇನಾಗಂ ರೋಡ್, ವಸುಂಟಾನ ರೋಡ್, ಗುಲ್ಬರ್ಗ ರೋಡ್ ಬಸವಕಲ್ಯಾಣ ರೋಡ್, ಮುಡಬಿ ಬಜಾರ್ ನಡೆಯುವ ಸ್ಥಳದಲ್ಲಿ ಮತ್ತು ವಾಲ್ಮೀಕಿ ಚೌಕ್ ಮುಡುಬಿ ಗ್ರಾಮಗಳ ಮುಖ್ಯ ರಸ್ತೆಗಳಲ್ಲಿ ಹುಮನಾಬಾದ ಉಪ-ವಿಭಾಗದ ಡಿ.ಎಸ್.ಪಿ ಶ್ರೀ J.S ನ್ಯಾಮೇ ಗೌಡ, ಶ್ರೀ ಕೃಷ್ಣಕುಮಾರ ಪಾಟೀಲ್, ಸಿ.ಪಿ.ಐ ಮಂಠಾಳ ವೃತ್ತ, ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಜಯಶ್ರೀ, ಪಿ.ಎಸ್.ಐ ನೇತೃತ್ವದಲ್ಲಿ ಮುಡುಬಿ ಠಾಣೆಯ ಸಿಬ್ಬಂದಿರವರು ತಮ್ಮ ತಮ್ಮ ಬೀಟಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರೊಂದಿಗೆ, ಬೀಟ್ ಸದಸ್ಯರೊಂದಿಗೆ ಮತ್ತು ಗ್ರಾಮ ಪಂಚಾಯತ್ ಅಧಿಕಾರಿ, ಸಿಬ್ಬಂದಿಯವರೊಂದಿಗೆ ಸಮಾಲೋಚನೆ ನಡೆಸಿ ಗ್ರಾಮಗಳಲ್ಲಿ ಸಿ.ಸಿ.ಟಿವಿ ಅಳವಡಿಸಲು ಪ್ರೇರಣೆ ನೀಡಿ, ಗ್ರಾಮಗಳ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿರುತ್ತಾರೆ.
ಸಿ.ಸಿ.ಟಿವಿ ಅಳವಡಿಸಲು ಸಹಕರಿಸಿದ ಬೀಟ್ ಸದಸ್ಯ, ಗ್ರಾಮ ಪಂಚಾಯತ ಸದಸ್ಯರು, ಗ್ರಾಮ ಪಂಚಾಯತ್ ಅಧಿಕಾರಿ ಸಿಬ್ಬಂದಿಯವರಿಗೆ ಮತ್ತು ಅಳವಡಿಸಲು ಪ್ರೇರಣೆ ನೀಡಿ ಉತ್ತಮ ಕೆಲಸ ಮಾಡಿದ ಮುಡುಬಿ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.








