ಕೋರಮಂಗಲ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಖಚಿತ ಮಾಹಿತಿ ಒಂದು ದೊರೆತಿದ್ದು ಮಾಹಿತಿಯಲ್ಲಿ ಠಾಣಾ ವ್ಯಾಪ್ತಿಯ ಎಂಜಿವಿ ಗೇಟ್ ನ ಬಳಿ ಇರುವ ಮುಖ್ಯರಸ್ತೆ ಹತ್ತಿರ ಓರ್ವ ವ್ಯಕ್ತಿಯು ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವುದಾಗಿ ಸಾರ್ವಜನಿಕರು ತಿಳಿಸಿರುತ್ತಾರೆ
ಈ ಕುರಿತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎನ್ ಡಿ,ಪಿ,ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬ ಹೊರ ರಾಜ್ಯದ ಆರೋಪಿಯನ್ನು ವಶಕ್ಕೆ ಪಡೆದುಕೊಂಡರು
ವಶಕ್ಕೆ ಪಡೆದ ಆರೋಪಿಯನ್ನು ವಿಚಾರಣೆಗಳು ಪಡಿಸಲಾಗಿ ಆತನು ಮೂಲತಃ ಕೇರಳದವನಾಗಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಹೆಚ್ಚಿನ ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ ಕೇರಳ ರಾಜ್ಯದಿಂದ ಹೈಡ್ರೋ ಗಾಂಜಾವನ್ನು ಕಡಿಮೆ ಬೆಲೆಗೆ ತಂದು ಪರಿಚಯಿಸ್ತರಿಗೆ, ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿರುವುದಾಗಿ ತಪ್ಪು ಒಪ್ಪಿಕೊಂಡಿರುತ್ತಾನೆ
ಆರೋಪಿಯಿಂದ ಒಂದು ಕೋಟಿ ಮೌಲ್ಯದ ಒಂದು ಕೆಜಿ 8 ಗ್ರಾಂ ಹೈಡ್ರೋ ಗಾಂಜಾ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಮೊಬೈಲ್ ಫೋನ್ ಒಂದು ದ್ವಿಚಕ್ರವಾಹನವನ್ನು ಕೋರಮಂಗಲ ಪೊಲೀಸರು ವಶಪಡಿಸಿಕೊಂಡರು
ಈ ಕಾರ್ಯಾಚರಣೆಯನ್ನು ಕೋರಮಂಗಲ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯ ತಂಡ ಯಶಸ್ವಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.
ವರದಿ
ಶಶಿಕುಮಾರ್ ವಿ









