Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home National News

ಬ್ಯಾಂಕ್‌ಗಳಿಂದ ಚಿನ್ನಾಭರಣ ಹಾಗೂ ಹಣವನ್ನು ಡ್ರಾ ಮಾಡಿಕೊಂಡು ಹೋಗುತ್ತಿರುವವರನ್ನು ಹಿಂಬಾಲಿಸಿ, ಹಣ ಹಾಗೂ ಚಿನ್ನಾಭರಣಗಳನ್ನು ದೋಚುತ್ತಿದ್ದ ಹೊರರಾಜ್ಯದ ಇಬ್ಬರು ವ್ಯಕ್ತಿಗಳ ಬಂಧನ.

CREDOPRESS MEDIA PVT LTD by CREDOPRESS MEDIA PVT LTD
January 19, 2025
in National News
0
ಬ್ಯಾಂಕ್‌ಗಳಿಂದ ಚಿನ್ನಾಭರಣ ಹಾಗೂ ಹಣವನ್ನು ಡ್ರಾ ಮಾಡಿಕೊಂಡು ಹೋಗುತ್ತಿರುವವರನ್ನು ಹಿಂಬಾಲಿಸಿ, ಹಣ ಹಾಗೂ ಚಿನ್ನಾಭರಣಗಳನ್ನು ದೋಚುತ್ತಿದ್ದ ಹೊರರಾಜ್ಯದ ಇಬ್ಬರು ವ್ಯಕ್ತಿಗಳ ಬಂಧನ.
0
SHARES
15
VIEWS
Share on FacebookShare on Twitter

10 ಲಕ್ಷ ನಗದು ಹಣ, 2-ದ್ಧಿ-ಚಕ್ರ ವಾಹನಗಳ ವಶ. ಒಟ್ಟು ಮೌಲ್ಯ 13 ಲಕ್ಷ
ದಿನಾಂಕ:29/11/2024 ರಂದು ಕೆ.ಆರ್.ಪುರಂನ ದೇವಸಂದ್ರದಲ್ಲಿ ವಾಸವಿರುವ ಪಿರಾದುದಾರರು ಕೆ.ಆರ್ ಪುರ ಪೊಲೀಸ್ ಠಾಣೆಯಲ್ಲಿ, ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಕೆ.ಆರ್.ಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಬ್ಯಾಂಕ್‌ವೊಂದರಿಂದ 4 ಲಕ್ಷ ಹಣವನ್ನು ಡ್ರಾ ಮಾಡಿಕೊಂಡು, ಕಾರಿನಲ್ಲಿ ಹೋಗುತ್ತಿರಬೇಕಾದರೆ, ಟಿಸಿ ಪಾಳ್ಯದ ಹತ್ತಿರ ಎರಡು ದ್ವಿ-ಚಕ್ರ ವಾಹನದಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು, ಪಿರಾದುದಾರರಿಗೆ ನಿಮ್ಮ ಕಾರಿನ ವೀಲ್ ಪಂಚರ್ ಆಗಿದೆಯೆಂದು ತಿಳಿಸಿರುತ್ತಾರೆ. ಪಿರಾದುದಾರರು ಅಲ್ಲಿಯೇ ಪಕ್ಕದಲ್ಲಿದ್ದ ಪಂಚ‌ ಶಾಪ್‌ನಲ್ಲಿ ಪಂಚರ್‌ನ್ನು ಹಾಕಿಸಿ, ಆತನಿಗೆ ಹಣವನ್ನು ನೀಡಲು ಶಾಪ್ ಒಳಗಡೆ ಹೋಗಿ ವಾಪಸ್ ಬರುವಷ್ಟರಲ್ಲಿ, ಪಿರಾದುದಾರರ

ಕಾರಿನ ಡ್ಯಾಶ್ ಬೋರ್ಡ್‌ನಲ್ಲಿಟ್ಟಿದ್ದ 4 ಲಕ್ಷ ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಕೆ.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:10/12/2024 ರಂದು ಬೂದಿಗೆರೆ ರಸ್ತೆ, ಬೊಮ್ಮನಹಳ್ಳಿ ಗೇಟ್ ಬಳಿ ಇಬ್ಬರು ವ್ಯಕ್ತಿಗಳನ್ನು ಒಂದು ದ್ವಿ-ಚಕ್ರ ವಾಹನ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಹಣವನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ.
ದಿನಾಂಕ:11/12/2024 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 13 ದಿನಗಳ ಕಾಲ ಪೊಲೀಸ್‌ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್‌’ ಅಭಿರಕ್ಷೆಗೆ ಪಡೆದ ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಇನ್ನೂ ಐವರು ಸಹಚರರು ಭಾಗಿಯಾಗಿರುವುದಾಗಿ ತಿಳಿಸಿರುತ್ತಾರೆ. ಕೃತ್ಯಕ್ಕೆ ಉಪಯೋಗಿಸಿದ ದ್ವಿ-ಚಕ್ರ ವಾಹನವನ್ನು ಹೊಸಕೋಟೆಯ ಬಾಲಕರ ಸರ್ಕಾರಿ ಕಾಲೇಜಿನ ಬಳಿ ನಿಲ್ಲಿಸಿರುವುದಾಗಿ ತಿಳಿಸಿರುತ್ತಾನೆ.

ಸರ್ಕಾರಿ ಕಾಲೇಜಿನ ಬಳಿ ನಿಲ್ಲಿಸಿದ್ದ 1 ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಯಿತು. ಹಾಗೂ ಕಳವು ಮಾಡಿದ ಹಣವನ್ನು ಆರೋಪಿಗಳಿಬ್ಬರು ಅವರಗಳ ವಾಸದ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದು, ಆರೋಪಿಗಳ ತಾಯಂದಿರಿಗೆ ನೋಟಿಸ್ ಜಾರಿ ಮಾಡಿದ್ದು, ಆರೋಪಿಗಳ ತಾಯಂದಿರು ದಿನಾಂಕ:22/02/2024 ರಂದು ಕೆ 10 ಲಕ್ಷ ನಗದನ್ನು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ವಶಪಡಿಸಿ ಕೊಳ್ಳಲಾಗಿರುತ್ತದೆ.
ಈ ಪ್ರಕರಣದ ಆರೋಪಿಗಳ ವಶದಿಂದ ಒಟ್ಟಾರೆ ಈ 10 ಲಕ್ಷ ನಗದು 2 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಒಟ್ಟು ಮೌಲ್ಯ 13,00,000/-(ಹದಿಮೂರು ಲಕ್ಷ ರೂಪಾಯಿ).
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ಐವರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆ ಕಾರ್ಯ ಮುಂದುವರೆದಿದೆ.
ದಿನಾಂಕ:23/12/2024 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಐಪಿಎಸ್
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ವೈಟ್ ಫೀಲ್ಡ್ ಡಾ:ಶಿವಕುಮಾರ್ ಗುಣಾರೇ, ಸಹಾಯಕ ಪೊಲೀಸ್‌ ಆಯುಕ್ತರು, ವೈಟ್‌ ಫೀಲ್ಡ್ ಉಪ ವಿಭಾಗ ಶ್ರೀಮತಿ ರೀನಾ ಸುವರ್ಣರವರ ಮಾರ್ಗದರ್ಶನದಲ್ಲಿ ಕೆ.ಆರ್.ಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ರಾಮಮೂರ್ತಿ.ಬಿ ಹಾಗೂ ಅಧಿಕಾರಿ/ಸಿಬ್ಬಂದಿರವರು ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ
    Bengaluru City Police

    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ

    May 12, 2026
    ಈಶಾನ್ಯ ವಿಭಾಗದ ಪೊಲೀಸರ ವಿಶೇಷ ಕಾರ್ಯಾಚರಣೆ.
    Bengaluru City Police

    ಈಶಾನ್ಯ ವಿಭಾಗದ ಪೊಲೀಸರ ವಿಶೇಷ ಕಾರ್ಯಾಚರಣೆ.

    May 8, 2026
    ಡ್ರಗ್ಸ್ ಮಾಫಿಯಾಗೆ ಸಿಸಿಬಿ ಭರ್ಜರಿ ಪೆಟ್ಟು: 36 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ಜಪ್ತಿ
    Bengaluru City Police

    ಡ್ರಗ್ಸ್ ಮಾಫಿಯಾಗೆ ಸಿಸಿಬಿ ಭರ್ಜರಿ ಪೆಟ್ಟು: 36 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ಜಪ್ತಿ

    May 4, 2026
    Next Post
    ಹುಮನಾಬಾದ ಪೊಲೀಸರಿಂದ ರಸ್ತೆ ಸುರಕ್ಷತಾ ಸಪ್ತಾಹ. ಸಂಚಾರಿ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮ

    ಹುಮನಾಬಾದ ಪೊಲೀಸರಿಂದ ರಸ್ತೆ ಸುರಕ್ಷತಾ ಸಪ್ತಾಹ. ಸಂಚಾರಿ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮ

    ದ್ವಿ-ಚಕ್ರ ವಾಹನ ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ.

    ದ್ವಿ-ಚಕ್ರ ವಾಹನ ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ.

    ನಿಮಾನ್ಸ್ ಆಸ್ಪತ್ರೆಯ ತಂಡದಿಂದ ಮೆದುಳಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ತಜ್ಞರಿಂದ ಹಾಗೂ ನಮ್ಮ ಪೊಲೀಸ್ ನ್ಯೂಸ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ನಿಮಾನ್ಸ್ ಆಸ್ಪತ್ರೆಯ ತಂಡದಿಂದ ಮೆದುಳಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ತಜ್ಞರಿಂದ ಹಾಗೂ ನಮ್ಮ ಪೊಲೀಸ್ ನ್ಯೂಸ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police Chikkabalapura Police CM Siddaramaiah Credo Press Credopress CREDOPRESS MEDIA Cyber Crime Davangere police Davangere Railway Police drugs news Electronic city Police Hoskote News Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ
    • ಶಿಡ್ಲಘಟ್ಟ: ಐದು ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು – ಓರ್ವನ ಬಂಧನ
    • ಈಶಾನ್ಯ ವಿಭಾಗದ ಪೊಲೀಸರ ವಿಶೇಷ ಕಾರ್ಯಾಚರಣೆ.

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved