ಕರ್ನಾಟಕ ರಾಜ್ಯ ಪೊಲೀಸ್ ಪಡೆಯ ಶೌರ್ಯ ಮತ್ತು ಸೇವೆಯನ್ನು ಸ್ಮರಿಸುವ ‘ಕರ್ನಾಟಕ ರಾಜ್ಯ ಪೊಲೀಸ್ ಓಟ’ದ ಮೂರನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಬರುವ ಭಾನುವಾರ, ಮಾರ್ಚ್ 1 ರಂದು ಬೆಂಗಳೂರಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಓಟಗಾರರು ಹೆಜ್ಜೆ ಹಾಕಲಿದ್ದಾರೆ.”
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಮ್ ಮತ್ತು ಎಸ್‌ಬಿಐ ಮುಖ್ಯ ಮಹಾಪ್ರಬಂಧಕಿ ಜೂಹಿ ಸ್ಮಿತಾ ಸಿನ್ಹಾ ಅವರು ಈ ವರ್ಷದ ಓಟದ ಟಿ-ಶರ್ಟ್ ಹಾಗೂ ಪದಕಗಳನ್ನು ಅನಾವರಣಗೊಳಿಸಿದರು.
ವಿಧಾನಸೌಧದಿಂದ ಆರಂಭವಾಗಿ ಕಬ್ಬನ್ ಪಾರ್ಕ್ ಮೂಲಕ ಹಾದುಹೋಗಲಿದೆ.
ವಿವಿಧ ವಿಭಾಗಗಳಲ್ಲಿ ಒಟ್ಟು 19 ಲಕ್ಷ ರೂಪಾಯಿಗೂ ಅಧಿಕ ನಗದು ಬಹುಮಾನ ನೀಡಲಾಗುವುದು.
ಕೇವಲ ಫಿಟ್‌ನೆಸ್ ಮಾತ್ರವಲ್ಲದೆ, ‘ಮಾದಕ ದ್ರವ್ಯ ಮುಕ್ತ ಕರ್ನಾಟಕ’, ‘ಸೈಬರ್ ಅಪರಾಧ ಜಾಗೃತಿ’ ಮತ್ತು ‘ಹಸಿರು ಬೆಂಗಳೂರು’ ಎಂಬ ಸಾಮಾಜಿಕ ಸಂದೇಶಗಳನ್ನು ಹೊತ್ತು ಈ ಓಟ ನಡೆಯಲಿದೆ. ವಿಶೇಷವೆಂದರೆ, ಇದೇ ದಿನ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪೊಲೀಸ್ ಇಲಾಖೆ ವತಿಯಿಂದ ಓಟವನ್ನು ಆಯೋಜಿಸಲಾಗಿದೆ.”









