Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Bengaluru City Police

ಬೆಂಗಳೂರು ಸಿಸಿಬಿ ಭರ್ಜರಿ ಕಾರ್ಯಾಚರಣೆ: 23 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ನಾಲ್ವರ ಬಂಧನ

CREDOPRESS MEDIA PVT LTD by CREDOPRESS MEDIA PVT LTD
June 30, 2026
in Bengaluru City Police,CCB Police,CREDOPRESS,Crime News,Indian Police News,J. JOHN PREM EDITOR,Karnataka State Police,Latest News,Namma Police,National News,Police News
0
ಬೆಂಗಳೂರು ಸಿಸಿಬಿ ಭರ್ಜರಿ ಕಾರ್ಯಾಚರಣೆ: 23 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ನಾಲ್ವರ ಬಂಧನ
0
SHARES
10
VIEWS
Share on FacebookShare on Twitter

ಬೆಂಗಳೂರಿನಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಎರಡು ಪ್ರತ್ಯೇಕ ಕಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬರೋಬ್ಬರಿ 23 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು ನಾಲ್ಕು ಜನ ಡ್ರಗ್ ಪೆಡ್ಲರ್‌ಗಳನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ.ಮೊದಲ ಕಾರ್ಯಾಚರಣೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಆಫ್ರಿಕಾ ಮೂಲದ ಪ್ರಜೆಗಳು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ, ಸಿಸಿಬಿ ಪಿಐ ಪ್ರವೀಣ್ ಸಿ. ಯಲಿಗಾರ್ ನೇತೃತ್ವದ ತಂಡ ದಾಳಿ ನಡೆಸಿದೆ.

ಈ ವೇಳೆ ಅಕ್ರಮವಾಗಿ ವಾಸವಿದ್ದ ಮೂವರು ನೈಜೀರಿಯಾ ದೇಶದ ಪ್ರಜೆಗಳನ್ನು ಬಂಧಿಸಲಾಗಿದೆ. ಇವರಿಂದ 21 ಕೋಟಿ ರೂಪಾಯಿ ಮೌಲ್ಯದ 10.270 ಕೆಜಿ ತೂಕದ ಎಂಡಿಎಂಎ ಕ್ರಿಸ್ಟಲ್ (MDMA Crystal), ಒಂದು ದ್ವಿಚಕ್ರ ವಾಹನ ಹಾಗೂ 5 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳು ಮೆಡಿಕಲ್ ಮತ್ತು ಟೂರಿಸ್ಟ್ ವೀಸಾ ಪಡೆದು ಭಾರತಕ್ಕೆ ಬಂದಿದ್ದರು. ವೀಸಾ ಅವಧಿ ಮುಗಿದಿದ್ದರೂ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರು. ಇವರು ದೆಹಲಿಯಲ್ಲಿದ್ದ ನೈಜೀರಿಯಾ ಮೂಲದವರಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ, ಬೆಂಗಳೂರಿನ ಸ್ಥಳೀಯ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಿ ಅಕ್ರಮ ಹಣ ಸಂಪಾದಿಸುತ್ತಿದ್ದರು ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇನ್ನು ಎರಡನೇ ಕಾರ್ಯಾಚರಣೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳ ಮೂಲದ ವ್ಯಕ್ತಿಗಳು ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಪಿಐ ಸಿ.ಎ. ಮಂಜಪ್ಪ ಮತ್ತು ತಂಡ ದಾಳಿ ನಡೆಸಿ ಕೇರಳದ ಓರ್ವ ಪೆಡ್ಲರ್‌ನನ್ನು ಬಂಧಿಸಿದೆ.

ಬಂಧಿತನಿಂದ 2 ಕೋಟಿ ರೂಪಾಯಿ ಮೌಲ್ಯದ 2.044 ಕೆಜಿ ಹೈಡ್ರೋ ಗಾಂಜಾ ಹಾಗೂ ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಈತ ಬೆಂಗಳೂರಿನಲ್ಲಿ ಖಾಸಗಿ ಟ್ರೇಡಿಂಗ್ ಕೆಲಸ ಮಾಡಿಕೊಂಡಿದ್ದು, ಕೇರಳದಿಂದ ಹೈಡ್ರೋ ಗಾಂಜಾ ತಂದು ಇಲ್ಲಿನ ಪರಿಚಯಸ್ಥ ಗ್ರಾಹಕರಿಗೆ ದುಬಾರಿ ಬೆಲೆಗೆ ಮಾರಿ ಮೋಜಿನ ಜೀವನ ನಡೆಸುತ್ತಿದ್ದನು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಂತಕುಮಾರ್ ಸಿಂಗ್ ಅವರ ಮಾರ್ಗದರ್ಶನದಲ್ಲಿ, ಅಪರ ಪೊಲೀಸ್ ಆಯುಕ್ತರಾದ ಅಜಯ್ ಹಿಲೋರಿ, ಉಪ ಪೊಲೀಸ್ ಆಯುಕ್ತರಾದ ರಾಜಾ ಇಮಾಮ್ ಖಾಸಿಂ ನೇತೃತ್ವದಲ್ಲಿ ಎಸಿಪಿ ಎಲ್.ವೈ. ರಾಜೇಶ್, ಪಿಐಗಳಾದ ಪ್ರವೀಣ್ ಯಲಿಗಾರ್, ಮಂಜಪ್ಪ ಸಿ.ಎ. ಮತ್ತು ತಂಡದ ಸಿಬ್ಬಂದಿಗಳು ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಸಿಸಿಬಿ ಪೊಲೀಸರ ಈ ಭರ್ಜರಿ ಬೇಟೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

    Tags: Bengaluru City PoliceccbIndian Police NewsKarnataka NewsKarnataka State PoliceLatest NewsLY RajeshNamma PoliceNamma Police NewsPolice News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    Bengaluru City Police

    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    July 24, 2026
    ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ
    Bengaluru District Police

    ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ

    July 23, 2026
    4 ಆರೋಪಿಗಳನ್ನು ಬಂಧಿಸಿ, 70 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿ
    Bengaluru City Police

    4 ಆರೋಪಿಗಳನ್ನು ಬಂಧಿಸಿ, 70 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿ

    July 19, 2026
    Next Post
    ಭೀಕರ ಕೊಲೆಗೆ ಸ್ಕೆಚ್‌; ಸಿಸಿಬಿ ಪೊಲೀಸರಿಂದ 7 ಮಂದಿ ಖತರ್ನಾಕ್ ಆರೋಪಿಗಳ ಬಂಧನ!

    ಭೀಕರ ಕೊಲೆಗೆ ಸ್ಕೆಚ್‌; ಸಿಸಿಬಿ ಪೊಲೀಸರಿಂದ 7 ಮಂದಿ ಖತರ್ನಾಕ್ ಆರೋಪಿಗಳ ಬಂಧನ!

    ಐವರು ಕುಖ್ಯಾತ ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಐವರು ಕುಖ್ಯಾತ ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    “ಮನೆಯಲ್ಲೇ ಇದ್ದು ಇಟ್ಟಳು ಕನ್ನ: 50 ಲಕ್ಷದ ಚಿನ್ನ-ಬೆಳ್ಳಿಯೊಂದಿಗೆ ಸಿಕ್ಕಿಬಿದ್ದ ಕಿಲಾಡಿ ಕಿರಾತಕಿ!”

    "ಮನೆಯಲ್ಲೇ ಇದ್ದು ಇಟ್ಟಳು ಕನ್ನ: 50 ಲಕ್ಷದ ಚಿನ್ನ-ಬೆಳ್ಳಿಯೊಂದಿಗೆ ಸಿಕ್ಕಿಬಿದ್ದ ಕಿಲಾಡಿ ಕಿರಾತಕಿ!"

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    Amruthalli Police B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press CREDOPRESS MEDIA Cyber Crime Davangere police drugs news Electronic city Police Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Renukaswamy Sadashivnagar Police SG Palya Police Siddapura Police Siddapura Police Station Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    • ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ
    • 4 ಆರೋಪಿಗಳನ್ನು ಬಂಧಿಸಿ, 70 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved